ಸುಪ್ರಿಯಾ ಸುಳೆಯನ್ನು ಗಾಜಾಕ್ಕೆ ಶರದ್ ಪವಾರ್ ಕಳುಹಿಸಬಹುದು: ಅಸ್ಸಾಂ ಸಿಎಂ ಹೀಗೆ ಹೇಳಿದ್ದು ಏಕೆ?

ಭಯೋತ್ಪಾದಕ ಸಂಘಟನೆ ಹಮಾಸ್ ವಿರುದ್ಧದ ಹೋರಾಟದಲ್ಲಿ ಇಸ್ರೇಲ್‌ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಿಂತಿದ್ದಾರೆ ಎಂದು ಟೀಕಿಸಿರುವ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.  
ಸುಪ್ರಿಯಾ ಸುಳೆ, ಸಿಎಂ ಹಿಮಂತಾ ಬಿಸ್ವಾ ಶರ್ಮಾ
ಸುಪ್ರಿಯಾ ಸುಳೆ, ಸಿಎಂ ಹಿಮಂತಾ ಬಿಸ್ವಾ ಶರ್ಮಾ

ನವದೆಹಲಿ: ಭಯೋತ್ಪಾದಕ ಸಂಘಟನೆ ಹಮಾಸ್ ವಿರುದ್ಧದ ಹೋರಾಟದಲ್ಲಿ ಇಸ್ರೇಲ್‌ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಿಂತಿದ್ದಾರೆ ಎಂದು ಟೀಕಿಸಿರುವ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.  

ಪವಾರ್ ಅವರ ಟೀಕೆಗಳಿಗೆ ವಿಚಿತ್ರ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ, ಶರದ್ ಪವಾರ್  ತಮ್ಮ ಪುತ್ರಿ ಸುಪ್ರಿಯಾ ಸುಳೆ ಅವರನ್ನು ಹಮಾಸ್‌ಗಾಗಿ ಹೋರಾಡಲು ಗಾಜಾಕ್ಕೆ ಕಳುಹಿಸುತ್ತಾರೆ ಅನಿಸುತ್ತಿದೆ ಎಂದರು. 

ಇದಕ್ಕೂ ಮುನ್ನ ಮುಂಬೈನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಎನ್‌ಸಿಪಿ ಶರದ್ ಪವಾರ್, ಭಾರತದ ಎಲ್ಲಾ ಮಾಜಿ ಪ್ರಧಾನಿಗಳು ಪ್ಯಾಲೆಸ್ತೈನ್ ಬೆಂಬಲಿಸುವ ದೃಢವಾದ ನಿಲುವನ್ನು ತೆಗೆದುಕೊಂಡರೆ ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಅನ್ನು ಬೆಂಬಲಿಸಿದ್ದಾರೆ ಎಂದು ಹೇಳಿದ್ದರು. 

ಮತ್ತೊಂದೆಡೆ ಬಿಸ್ವಾ ಶರ್ಮಾ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಸುಪ್ರೀಯಾ ಸುಳೆ,  ಹಿಮಂತ ಬಿಸ್ವಾ ಶರ್ಮಾ ನನ್ನಂತೆಯೇ  ಮೂಲತಃ ಕಾಂಗ್ರೆಸ್‌ನವರು. ನಾವಿಬ್ಬರೂ ಕಾಂಗ್ರೆಸ್ ಡಿಎನ್ ಎ ಹಂಚಿಕೊಂಡಿದ್ದೇವೆ. ಬಿಜೆಪಿ ಮಹಿಳೆಯರಿಗೆ ಯಾವ ರೀತಿ ಗೌರವ ನೀಡುತ್ತದೆ ಎಂಬುದು ನಮಗೆ ಗೊತ್ತಿದೆ. ಆದರೆ, ಬಿಸ್ವಾ ಶರ್ಮಾ ಅವರ ಮನೋಭಾವ ಹೇಗೆ ಬದಲಾಯಿತು ಎಂಬುದು ಆಶ್ಚರ್ಯವನ್ನುಂಟು ಮಾಡಿದೆ. ಶರದ್ ಪವಾರ್ ಏನು ಹೇಳಿದ್ದಾರೆ ಎಂಬುದನ್ನು  ಬಿಜೆಪಿ ಐಟಿ ಸೆಲ್ ಅರ್ಥಮಾಡಿಕೊಳ್ಳಬೇಕು ಮತ್ತು ಎಚ್ಚರಿಕೆಯಿಂದ ಕೇಳಬೇಕು ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com