ಸಿಯಾಚಿನ್‌ನಲ್ಲಿ ಅಗ್ನಿವೀರ್ ಅಕ್ಷಯ್ ಹುತಾತ್ಮ: ಭಾರತೀಯ ಸೇನೆಯಿಂದ ಶ್ರದ್ಧಾಂಜಲಿ

ಮೊದಲ ಅಗ್ನಿವೀರ್ ಸಿಯಾಚಿನ್ ನಲ್ಲಿ ಕರ್ತವ್ಯದ ವೇಳೆ ಹುತಾತ್ಮರಾಗಿದ್ದು, ಭಾರತೀಯ ಸೇನೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ.
ಸಿಯಾಚಿನ್‌ನಲ್ಲಿ ಅಗ್ನಿವೀರ್ ಅಕ್ಷಯ್ ಹುತಾತ್ಮ
ಸಿಯಾಚಿನ್‌ನಲ್ಲಿ ಅಗ್ನಿವೀರ್ ಅಕ್ಷಯ್ ಹುತಾತ್ಮ

ನವದೆಹಲಿ: ಮೊದಲ ಅಗ್ನಿವೀರ್ ಸಿಯಾಚಿನ್ ನಲ್ಲಿ ಕರ್ತವ್ಯದ ವೇಳೆ ಹುತಾತ್ಮರಾಗಿದ್ದು, ಭಾರತೀಯ ಸೇನೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ.

ಸಿಯಾಚಿನ್‌ ಯುದ್ಧ ಭೂಮಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಮೊದಲ ಅಗ್ನಿವೀರ್ ಗವಾಟೆ ಅಕ್ಷಯ್ ಲಕ್ಷ್ಮಣ್ ಹುತಾತ್ಮರಾಗಿದ್ದು, ಅವರಿಗೆ ಭಾರತೀಯ ಸೇನೆ ಇಂದು (ಭಾನುವಾರ) ಶ್ರದ್ಧಾಂಜಲಿ ಸಲ್ಲಿಸಿದೆ. ಭಾರತೀಯ ಸೇನೆಯ ಫೈರ್‌ ಆ್ಯಂಡ್‌ ಫ್ಯೂರಿ ಕಾರ್ಪ್ಸ್‌ ಮೃತ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದೆ.

ಅಕ್ಷಯ್ ಲಕ್ಷ್ಮಣ್ ಅವರ ತ್ಯಾಗಕ್ಕೆ ವಂದನೆ ಸಲ್ಲಿಸುತ್ತೇವೆ. ಈ ದುಃಖದ ಸಮಯದಲ್ಲಿ ಕುಟುಂಬದೊಂದಿಗೆ ನಾವು ದೃಢವಾಗಿ ನಿಲ್ಲುತ್ತೇವೆ ಎಂದು ಸಾಮಾಜಿಕ ಮಾಧ್ಯಮ ಟ್ವಿಟರ್ ನಲ್ಲಿ ಭಾರತೀಯ ಸೇನೆ ಪೋಸ್ಟ್ ಮಾಡಿದೆ. ಸಿಯಾಚಿನ್‌ನಲ್ಲಿ ಜೂನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಸೇನಾ ಯೋಧ ಮೃತಪಟ್ಟರೆ, ಮೂವರು ಯೋಧರು ಗಾಯಗೊಂಡಿದ್ದರು.

ಯೋಧ ಗವಾಟೆ ಅಕ್ಷಯ್ ಲಕ್ಷ್ಮಣ್ ಮಹಾರಾಷ್ಟ್ರದ ಮೂಲದವರಾಗಿದ್ದು, ಅವರ ಸಾವಿಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ಪಡೆಯ ಎಲ್ಲಾ ಶ್ರೇಣಿಯ ಯೋಧರು ಸಂತಾಪ ಸೂಚಿಸಿದರು. ಸುಮಾರು 20,000 ಅಡಿ ಎತ್ತರದಲ್ಲಿರುವ ಸಿಯಾಚಿನ್ ಹಿಮನದಿಯು ವಿಶ್ವದ ಅತಿ ಎತ್ತರದ ಮಿಲಿಟರಿ ವಲಯ ಎಂದು ಕರೆಯಲ್ಪಡುತ್ತದೆ.

ಅಲ್ಲಿ ಸೈನಿಕರು ಹಿಮಪಾತ ಮತ್ತು ಹೆಚ್ಚಿನ ಗಾಳಿಯೊಂದಿಗೆ ಹೋರಾಡಬೇಕಾಗುತ್ತದೆ. ಲಕ್ಷ್ಮಣ್ ಸಾವಿನ ನಿಖರ ಮಾಹಿತಿ ತಕ್ಷಣಕ್ಕೆ ತಿಳಿದುಬಂದಿಲ್ಲ ಈ ಬಗ್ಗೆ ಸೇನೆ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com