ಚೆನ್ನೈ: ರಾಜಭವನದ ಹೊರಗಡೆ ಪೆಟ್ರೋಲ್ ಬಾಂಬ್ ಎಸೆತ!

ಚೆನ್ನೈನ ರಾಜಭವನದ ಮುಖ್ಯ ಗೇಟ್ ಎದುರು ಬುಧವಾರ ಮೊಲೊಟೊವ್ ಕಾಕ್ಟೈಲ್  ಎಸೆಯಲಾಗಿದೆ. ಈ ಕೃತ್ಯವೆಸಗಿದ ವ್ಯಕ್ತಿಯನ್ನು ಕೂಡಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ  ಚಿತ್ರ
ಸಾಂದರ್ಭಿಕ ಚಿತ್ರ
Updated on

ಚೆನ್ನೈ: ಚೆನ್ನೈನ ರಾಜಭವನದ ಮುಖ್ಯ ಗೇಟ್ ಎದುರು ಬುಧವಾರ ಮೊಲೊಟೊವ್ ಕಾಕ್ಟೈಲ್  ಎಸೆಯಲಾಗಿದೆ. ಈ ಕೃತ್ಯವೆಸಗಿದ ವ್ಯಕ್ತಿಯನ್ನು ಕೂಡಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ವಿಚಾರಣೆ ಮುಂದುವರೆದಿದ್ದು, ಯಾವ ಉದ್ದೇಶದಿಂದ ಪೆಟ್ರೋಲ್ ಬಾಂಬ್ ಎಸೆಯಲಾಯಿತು ಎಂಬುದರ ಕುರಿತು ಪ್ರಶ್ನಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊಲೊಟೊವ್ ಕಾಕ್ಟೈಲ್ ಬೆಂಕಿಯಿಡುವ ಸಾಧನವಾಗಿದ್ದು, ಸಾಮಾನ್ಯವಾಗಿ ಪೆಟ್ರೋಲ್ ತುಂಬಿರುತ್ತದೆ ಮತ್ತು ಬಟ್ಟೆಯ ತುಂಡನ್ನು ಬತ್ತಿಯಾಗಿ ಬಳಸಲಾಗುತ್ತದೆ. ಈ ಘಟನೆ ತಮಿಳುನಾಡಿನ ನಿಜವಾದ ಕಾನೂನು ಸುವ್ಯವಸ್ಥೆಯನ್ನು ಬಿಂಬಿಸುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com