ಬಿಗ್ ಬಾಸ್ OTT ವಿನ್ನರ್ ನಿಂದ 1 ಕೋಟಿ ರೂ. ಸುಲಿಗೆಗೆ ಯತ್ನ: ಆರೋಪಿ ಬಂಧನ

ಬಿಗ್ ಬಾಸ್ ಒಟಿಟಿ 2ನೇ ಸೀಸನ್ ವಿಜೇತ, ಯೂಟ್ಯೂಬರ್ ಎಲ್ವಿಶ್ ಯಾದವ್ ಅವರಿಂದ 1 ಕೋಟಿ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ಗುಜರಾತ್‌ನ ವಡ್ನಗರದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಎಲ್ವಿಶ್ ಯಾದವ್
ಎಲ್ವಿಶ್ ಯಾದವ್

ವಡ್ನಗರ: ಬಿಗ್ ಬಾಸ್ ಒಟಿಟಿ 2ನೇ ಸೀಸನ್ ವಿಜೇತ, ಯೂಟ್ಯೂಬರ್ ಎಲ್ವಿಶ್ ಯಾದವ್ ಅವರಿಂದ 1 ಕೋಟಿ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ಗುಜರಾತ್‌ನ ವಡ್ನಗರದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಯಾದವ್ ಅವರ ಜೀವನಶೈಲಿಯಿಂದ ಪ್ರಭಾವಿತರಾದ ಆರೋಪಿ ಬೇಗ ಶ್ರೀಮಂತರಾಗಬೇಕು ಎಂಬ ಉದ್ದೇಶದಿಂದ ವಾಟ್ಸಾಪ್‌ನಲ್ಲಿ ಬೆದರಿಕೆ ಕಳುಹಿಸಿದ್ದ  ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ವಡ್‌ನಗರ ಮೂಲದ 24 ವರ್ಷದ ಶಾಕಿರ್ ಮಕ್ರಾನಿ ಎಂದು ಗುರುತಿಸಲಾಗಿದೆ.

ಮಕ್ರಾಣಿ ತನ್ನ ತಂದೆಯೊಂದಿಗೆ ಪ್ರಾದೇಶಿಕ ಸಾರಿಗೆ ಕಚೇರಿ (RTO) ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಬೇಗನೆ ಮಿಲಿಯನೇರ್ ಆಗಲು ಬಯಸಿದ್ದ ಆರೋಪಿ, ಇದಕ್ಕಾಗಿ ಆರಂಭದಲ್ಲಿ  40 ಲಕ್ಷ ಮತ್ತು ನಂತರ 1 ಕೋಟಿ ರೂ. ಗಳ ಬೇಡಿಕೆಯನ್ನು ಎಲ್ವಿಶ್ ಯಾದವ್ ಮತ್ತು ಅವರ ಮ್ಯಾನೇಜರ್‌ ಗೆ ವಾಟ್ಸಾಪ್ ಮೇಸೆಜ್ ಮೂಲಕ ಕಳುಹಿಸಿದ್ದ ಎಂದು ಸಹಾಯಕ ಪೊಲೀಸ್ ಕಮಿಷನರ್ (ಅಪರಾಧ) ವರುಣ್ ದಹಿಯಾ ಹೇಳಿದ್ದಾರೆ. .

ಬೇರೆ ಯಾರೊಬ್ಬರ ಸೂಚನೆ ಮೇರೆಗೆ ಈ ರೀತಿ ಮಾಡಿದ್ದಾನೆಯೇ ಅಥವಾ ಅವನೊಂದಿಗೆ ಬೇರೆ ಯಾರಾದರೂ ಸುಲಿಗೆ ಬೇಡಿಕೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಕಂಡುಹಿಡಿಯಲು ಆರೋಪಿಯನ್ಮು ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಗುರುಗ್ರಾಮ್‌ಗೆ ಕರೆತರಲಾಗುತ್ತಿದೆ ಎಂದು ಅವರು ಹೇಳಿದರು.

ಗುರುಗ್ರಾಮ್ ನಿವಾಸಿಯಾದ ಯಾದವ್ ಅವರು ವಿದೇಶಿ ಪ್ರವಾಸದಿಂದ ಹಿಂದಿರುಗಿದ ನಂತರ ಸೆಕ್ಟರ್ 53 ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ. ದೂರಿನ ನಂತರ ಬುಧವಾರ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆಯ ವೇಳೆ ಯಾದವ್‌ಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಲು ಬಳಸಿದ ನಂಬರ್ ಗುಜರಾತ್‌ನಿಂದ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಸೆಕ್ಟರ್ 40 ಅಪರಾಧ ವಿಭಾಗದ ತಂಡವು ಬುಧವಾರ ರಾತ್ರಿ ವಡ್ನಗರದಿಂದ ಮಕ್ರಾನಿಯನ್ನು ಬಂಧಿಸಿದೆ. ಪೊಲೀಸ್ ಕಸ್ಟಡಿಗೆ ತೆಗೆದುಕೊಂಡ ನಂತರ  ಮಕ್ರಾನಿಯನ್ನು ವಿಚಾರಣೆ ಮಾಡುತ್ತೇವೆ ಎಂದು ದಹಿಯಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com