ಒಡಿಶಾ: ಟ್ಯೂಷನ್ ಶಿಕ್ಷಕಿಯ ತಂದೆಯಿಂದ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ

10 ವರ್ಷದ ಬಾಲಕಿಯ ಮೇಲೆ ಆಕೆಯ ಟ್ಯೂಷನ್ ಶಿಕ್ಷಕಿಯ ತಂದೆ ಅತ್ಯಾಚಾರವೆಸಗಿರುವ ಘಟನೆ ಕುಜಾಂಗ್ ಪೊಲೀಸ್ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಈ ಸಂಬಂಧ ಶಿಕ್ಷಕನ 52 ವರ್ಷದ ತಂದೆ ಸೇರಿದಂತೆ ಇಬ್ಬರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಜಗತ್ಸಿಂಗ್ ಪುರ್: 10 ವರ್ಷದ ಬಾಲಕಿಯ ಮೇಲೆ ಆಕೆಯ ಟ್ಯೂಷನ್ ಶಿಕ್ಷಕಿಯ ತಂದೆ ಅತ್ಯಾಚಾರವೆಸಗಿರುವ ಘಟನೆ ಕುಜಾಂಗ್ ಪೊಲೀಸ್ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಈ ಸಂಬಂಧ ಶಿಕ್ಷಕನ 52 ವರ್ಷದ ತಂದೆ ಸೇರಿದಂತೆ ಇಬ್ಬರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಅಪ್ರಾಪ್ತ ಬಾಲಕಿಯ ಪೋಷಕರು ನೀಡಿದ ದೂರಿನ ಪ್ರಕಾರ, ಬಾಲಕಿಯರನ್ನೂ ಒಳಗೊಂಡಂತೆ ಸುಮಾರು 15 ರಿಂದ 20 ವಿದ್ಯಾರ್ಥಿಗಳು ದೈನಂದಿನ ಟ್ಯೂಷನ್‌ಗಾಗಿ ಬಲಿತುತ್ತದಲ್ಲಿರುವ ಮಹಿಳಾ ಶಿಕ್ಷಕಿಯ ಮನೆಗೆ ಹೋಗಿದ್ದರು.

ಶಿಕ್ಷಕರ ಅನುಪಸ್ಥಿತಿಯಲ್ಲಿ, ಆಕೆಯ ತಂದೆ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದರು. ಆದರೆ, ತನ್ನ ಮಗಳ ಗೈರುಹಾಜರಿಯ ಲಾಭವನ್ನು ಪಡೆದುಕೊಂಡು ಪ್ರಮುಖ ಆರೋಪಿ ಸುಭಾಷ್ ಮುದುಲಿ 6ನೇ ತರಗತಿ ವಿದ್ಯಾರ್ಥಿನಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಳೆದ ಸೋಮವಾರ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆಕೆಯ ಪೋಷಕರು ಚಿಕಿತ್ಸೆಗಾಗಿ ಬಲಿತುತ್ತ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಆಗ ವಿಷಯ ಬೆಳಕಿಗೆ ಬಂತು. ಆಕೆಯ ಪೋಷಕರು ಅವಳನ್ನು ಕೇಳಿದಾಗ, ಹುಡುಗಿ ತನಗೆ ಅನುಭವಿಸಿದ ನೋವಿನ ಬಗ್ಗೆ ವಿವರಿಸಿದ್ದಾಳೆ.

ಅಪ್ರಾಪ್ತ ಬಾಲಕಿಯ ತಂದೆ ತಕ್ಷಣವೇ ಕುಜಾಂಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುದುಳಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ ಮುದುಲಿ ತನ್ನ ಸಹೋದ್ಯೋಗಿ ರವೀಂದ್ರ ದಾಸ್ (50) ಅಪರಾಧದಲ್ಲಿ ಭಾಗಿಯಾಗಿದ್ದನ್ನು ಬಹಿರಂಗಪಡಿಸಿದ್ದಾನೆ.

ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಆಕೆಯನ್ನು ವಿವರವಾದ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳನ್ನು ನಾವು ಬಂಧಿಸಿದ್ದೇವೆ. ಆ ದಿನ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕುಜಾಂಗ್ ಪೊಲೀಸ್ ಠಾಣೆಯ ಐಐಸಿ ರಶ್ಮಿ ರಂಜನ್ ದಾಸ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com