ತಾಯಿಯನ್ನು ಮನೆಯಿಂದ ಹೊರಹಾಕಿದ ತಂದೆಯ ಇರಿದು ಕೊಂದ 16ರ ಬಾಲಕ!

ತಾಯಿಗೆ ಹೊಡೆದು, ಮನೆಯಿಂದ ಹೊರಹಾಕಿದ ತಂದೆಯನ್ನು 16 ವರ್ಷದ ಅಪ್ರಾಪ್ತ ಬಾಲಕ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೇದಿನಗರ: ತಾಯಿಗೆ ಹೊಡೆದು, ಮನೆಯಿಂದ ಹೊರಹಾಕಿದ ತಂದೆಯನ್ನು 16 ವರ್ಷದ ಅಪ್ರಾಪ್ತ ಬಾಲಕ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ ನಡೆದಿದೆ.

ಹತ್ಯೆಯಾದ ವ್ಯಕ್ತಿಯನ್ನು ಪಕ್ರಿಯಾ ಗ್ರಾಮದ ನಿವಾಸಿ ಚೋಟು ಶರ್ಮಾ (42) ಎಂದು ಗುರುತಿಸಲಾಗಿದೆ,

ಹತ್ಯೆ ನಡೆದ ಒಂದು ದಿನಕ್ಕೂ ಮೊದಲು ಸಂತ್ರಸ್ತ ವ್ಯಕ್ತಿ ತನ್ನ ಪತ್ನಿಯೊಂದಿಗೆ ಜಗಳವಾಡಿದ್ದು, ಪತ್ನಿಯನ್ನು ಥಳಿಸಿ, ಮನೆಯಿಂದ ಹೊರಹಾಕಿದ್ದ. ಬಳಿಕ ಆಕೆ ಜಿಲ್ಲೆಯ ಚೈನ್‌ಪುರ್‌ನಲ್ಲಿರುವ ತನ್ನ ಪೋಷಕರ ಮನೆಗೆ ತೆರಳಿದ್ದರು. ಘಟನೆ ಬಳಿಕ ಬಾಲಕ ತಂದೆಯ ಮೇಲೆ ಕೋಪಗೊಂಡಿದ್ದ. ಇದರಂತೆ ಚಾಕುವಿನಿಂದ ತಂದೆಗೆ ಇರಿದಿದ್ದಾನೆ. ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ತಂದೆಗೆ ಬಾಲಕ ಚೂರಿ ಇರಿದಿರುವುದನ್ನು ಕಂಡ ಸಂಬಂಧಿಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com