ಮುಖೇಶ್ ಅಂಬಾನಿಗೆ ಜೀವ ಬೆದರಿಕೆ: 200 ಕೋಟಿ ರೂಪಾಯಿಗಳಿಗೆ ಬೇಡಿಕೆ!

ರಿಲಾಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿಗೆ ಜೀವ ಬೆದರಿಕೆ ಬಂದಿದ್ದು 200 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ

ಮುಂಬೈ: ರಿಲಾಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿಗೆ ಜೀವ ಬೆದರಿಕೆ ಬಂದಿದ್ದು 200 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾರೆ.
 
ಇಮೇಲ್ ಮೂಲಕ ಬೆದರಿಕೆ ಹಾಕಿರುವ ವ್ಯಕ್ತಿ ತನ್ನ ಬೇಡಿಕೆಯನ್ನು 20 ಕೋಟಿ ರೂಪಾಯಿಗಳಿಂದ 200 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ನೀವು ಈ ಹಿಂದಿನ ಮೇಲ್ ಗೆ ಪ್ರತಿಕ್ರಿಯೆ ನೀಡಿಲ್ಲ ಈಗ ಈ ಮೊತ್ತ 200 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಕೊಡದೇ ಇದ್ದಲ್ಲಿ ಡೆಟ್ ವಾರೆಂಟ್ ಗೆ ಸಹಿ ಹಾಕಲಾಗುವು ಎಂದು ಬೆದರಿಕೆ ಹಾಕಲಾಗಿದೆ.

ಶುಕ್ರವಾರದಂದು ಅಂಬಾನಿಗೆ ಬಂದಿದ್ದ ಬೆದರಿಕೆ ಇ-ಮೇಲ್ ನಲ್ಲಿ 20 ಕೋಟಿ ರೂಪಾಯಿ ನೀಡದೇ ಇದ್ದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಅನಾಮಿಕ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com