ಸಿಂಗುರ್ ನಷ್ಟ: ಟಾಟಾ ಮೋಟಾರ್ಸ್ ಗೆ ಪಶ್ಚಿಮ ಬಂಗಾಳದಿಂದ 766 ಕೋಟಿ ರೂಪಾಯಿ ಪರಿಹಾರ

ಪಶ್ಚಿಮ ಬಂಗಾಳದ ಸಿಂಗುರ್ ಉತ್ಪಾದನಾ ಘಟಕದಲ್ಲಿ ಉಂಟಾದ ನಷ್ಟಕ್ಕೆ ಟಾಟಾ ಸಂಸ್ಥೆಗೆ 766 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಪಶ್ಚಿಮ ಬಂಗಾಳ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ಮಧ್ಯಸ್ಥಿಕೆ ನ್ಯಾಯಮಂಡಳಿ ಸೂಚನೆ ನೀಡಿದೆ. 
ಟಾಟಾ ಗ್ರೂಪ್ ಸಾಂದರ್ಭಿಕ ಚಿತ್ರ
ಟಾಟಾ ಗ್ರೂಪ್ ಸಾಂದರ್ಭಿಕ ಚಿತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ಸಿಂಗುರ್ ಉತ್ಪಾದನಾ ಘಟಕದಲ್ಲಿ ಉಂಟಾದ ನಷ್ಟಕ್ಕೆ ಟಾಟಾ ಸಂಸ್ಥೆಗೆ 766 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಪಶ್ಚಿಮ ಬಂಗಾಳ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ಮಧ್ಯಸ್ಥಿಕೆ ನ್ಯಾಯಮಂಡಳಿ ಸೂಚನೆ ನೀಡಿದೆ. 

ಭೂ ವಿವಾದದ ಪರಿಣಾಮದಿಂದಾಗಿ ಟಾಟಾ ಮೋಟಾರ್ಸ್ ನ್ಯಾನೋ ಕಾರು ಉತ್ಪಾದನಾ ಘಟಕವನ್ನು ಪಶ್ಚಿಮ ಬಂಗಾಳದ ಸಿಂಗುರ್ ನಿಂದ ಗುಜರಾತ್ ನ ಸನಂದ್ ಗೆ  2008 ರ ಅಕ್ಟೋಬರ್ ನಲ್ಲಿ ವರ್ಗಾವಣೆ ಮಾಡಬೇಕಾಯಿತು. ಆದರೆ ಆ ವೇಳೆಗೆ ಟಾಟಾ ಸಂಸ್ಥೆ ಸಿಂಗುರ್ ನಲ್ಲಿ 1,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿತ್ತು.
 
ತ್ರಿಸದಸ್ಯ ಮದ್ಯಸ್ಥಿಕೆ ನ್ಯಾಯಮಂಡಳಿ, ಪಶ್ಚಿಮ ಬಂಗಾಳ ಕೈಗಾರಿಕಾ ಅಭಿವೃದ್ಧಿ ಮಂಡಳಿ ನಿಯಮಿತ (ಡಬ್ಲ್ಯುಬಿಐಡಿಸಿ)ಯಿಂದ ರೂಪಾಯಿ 765.78 ಕೋಟಿ ರೂಪಾಯಿಯ ಜೊತೆಗೆ ಸೆ.1, 2016ಯಿಂದ ಹಣ ಪಾವತಿಯಾಗುವವರೆಗೂ ಶೇ.11 ರಷ್ಟು ವಾರ್ಷಿಕ ಬಡ್ಡಿ ಸಹಿತ ಪರಿಹಾರದ ಮೊತ್ತ ನೀಡಬೇಕೆಂದು ನ್ಯಾಯಮಂಡಳಿ ತೀರ್ಪು ನೀಡಿದೆ. 

ಇದಷ್ಟೇ ಅಲ್ಲದೇ ಕಾನೂನು ಪ್ರಕ್ರಿಯೆಗಳ ವೆಚ್ಚದೆಡೆಗೆ ಟಾಟಾ ಮೋಟಾರ್ಸ್ ಪ್ರತಿವಾದಿಯಿಂದ (ಡಬ್ಲ್ಯುಬಿಐಡಿಸಿ) 1 ಕೋಟಿ ರೂ.ಗಳನ್ನು ಪ್ರಕ್ರಿಯೆಗಳ ವೆಚ್ಚಕ್ಕೆ ಮರುಪಡೆಯಲು ಅರ್ಹವಾಗಿದೆ ಎಂದು ನ್ಯಾಯಮಂಡಳಿ ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com