ಪಂಚರಾಜ್ಯಗಳ ಚುನಾವಣೆ: ಈರುಳ್ಳಿ ಬೆಲೆ ಕಡಿವಾಣಕ್ಕೆ ಕೇಂದ್ರ ಸರ್ಕಾರದ ಏನು ಮಾಡಬಹುದು?

ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಕೇಂದ್ರ ಸಾರ್ವತ್ರಿಕ ಚುನಾವಣೆಯಿದೆ. ಈ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ಏರಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ಹಲವು ಕ್ರಮಗಳಿಗೆ ಮುಂದಾಗಿದೆ ಎನ್ನಬಹುದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಈರುಳ್ಳಿ ಬೆಲೆ ಏರಿಕೆಯಿಂದ ಈ ಹಿಂದೆ ಸರ್ಕಾರಗಳು ಅಧಿಕಾರದಿಂದ ಬಿದ್ದ ಪ್ರಸಂಗಗಳಿವೆ. ಇನ್ನು ಕೆಲವೇ ವಾರಗಳಲ್ಲಿ ಪಂಚರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಕೇಂದ್ರ ಸಾರ್ವತ್ರಿಕ ಚುನಾವಣೆಯಿದೆ. ಈ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ಏರಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ಹಲವು ಕ್ರಮಗಳಿಗೆ ಮುಂದಾಗಿದೆ ಎನ್ನಬಹುದು.

ಕಳೆದ ಕೆಲವು ದಿನಗಳಿಂದ ಕಿಲೋಗೆ 40ರಿಂದ 60 ರೂಪಾಯಿಗೆ ಏರಿಕೆಯಾಗಿದ್ದ ಈರುಳ್ಳಿ ಬೆಲೆ(Onion price) ನಿನ್ನೆ ಸೋಮವಾರ ಹೊತ್ತಿಗೆ 5 ರೂಪಾಯಿ ಇಳಿಕೆಯಾಗಿತ್ತು. ದಕ್ಷಿಣದ ರಾಜ್ಯಗಳು ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂದು ಈರುಳ್ಳಿ ಬೆಲೆ ಇಳಿಕೆಯಾಗುತ್ತಿದೆ. 

ಆದರೆ ಇದು ತಾತ್ಕಾಲಿಕವಷ್ಟೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿಗಳು. ಬೆಂಗಳೂರಿನ ಎಪಿಎಂಸಿ ಯಾರ್ಡ್ ನ ಸಗಟು ಈರುಳ್ಳಿ ವರ್ತಕ ರವಿ ಬಾಲಕೃಷ್ಣ,  ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರದ ರಫ್ತು-ಸಂಬಂಧಿತ ಬೆಲೆ ಕಾರ್ಯವಿಧಾನವು ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನಿನ್ನೆ ಸೋಮವಾರ, ಸಗಟು ಮಾರುಕಟ್ಟೆಯಲ್ಲಿ 2 ರೂಪಾಯಿ ಇಳಿಕೆಯಾಗಿ 62 ರೂಪಾಯಿಗಳಿಂದ ಈರುಳ್ಳಿ ಬೆಲೆ 55 ರೂಪಾಯಿಗೆ ಇಳಿಕೆಯಾಗಿತ್ತು. ಸಗಟು ಮಾರುಕಟ್ಟೆಯಲ್ಲಿ 60 ರೂಪಾಯಿಗಳ ಆಸುಪಾಸಿನಲ್ಲಿತ್ತು. ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ 100ರಿಂದ 120 ರೂಪಾಯಿಗಳಿವೆ ಎನ್ನುತ್ತಾರೆ.

ಯಾವುದೇ ವಸ್ತುವಿನ ಬೆಲೆಗಳು ಅದರ ಪೂರೈಕೆ ಮತ್ತು ಬೇಡಿಕೆಯನ್ನು ಅವಲಂಬಿಸಿರುತ್ತದೆ. ಎಪಿಎಂಸಿ ಮೂಲಗಳ ಪ್ರಕಾರ, ಯಶವಂತಪುರ ಎಪಿಎಂಸಿ ಯಾರ್ಡ್‌ಗೆ ಸುಮಾರು 400 ಟ್ರಕ್‌ಗಳಲ್ಲಿ 80,592 ಈರುಳ್ಳಿ ಚೀಲಗಳು ಬಂದಿವೆ. ದಾಸನಾಪುರದ ಉಪ ಮಾರುಕಟ್ಟೆಗೆ ಸೋಮವಾರ 2,310 ಚೀಲಗಳು ಬಂದಿವೆ.

ಇದರರ್ಥ, ಹೆಚ್ಚುತ್ತಿರುವ ಈರುಳ್ಳಿ ಬೆಲೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ, ಹೊಸದಾಗಿ ಬಂದ ಈರುಳ್ಳಿ ಚೀಲಗಳಿಗೆ ಬೆಲೆ ನಿರ್ಧಾರವಾಗಬೇಕು. ಈರುಳ್ಳಿ ಆಮದು ಪ್ರಮಾಣದಲ್ಲಿ ಇಳಿಕೆಯಾದರೆ, ಬೆಲೆಗಳು ಹೆಚ್ಚಾಗುತ್ತವೆ. ಬೆಂಗಳೂರಿಗೆ ಬುಧವಾರ 52,000 ಚೀಲಗಳು ಬಂದಿವೆ. ಗುರುವಾರ ಅದು 46,000 ಚೀಲಗಳಿಗೆ ಇಳಿದಿದೆ. ಶುಕ್ರವಾರ ನಗರಕ್ಕೆ 70,700 ಚೀಲಗಳು ಬಂದಿದ್ದು, ಶನಿವಾರ 63,000 ಚೀಲಗಳಿಗೆ ಪೂರೈಕೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ. ನಾಳೆ ನವೆಂಬರ್ 1 ರಾಜ್ಯೋತ್ಸವ ರಜಾದಿನವಾಗಿರುವುದರಿಂದ ಇಂದು ಬಂದ ಈರುಳ್ಳಿ ಮುಖ್ಯವಾಗುತ್ತದೆ. ಪ್ರಮಾಣ ಹೆಚ್ಚಾದರೆ, ಬೆಲೆಗಳು ಮತ್ತಷ್ಟು ಕಡಿಮೆಯಾಗಬಹುದು ಎನ್ನುತ್ತಾರೆ. 

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕ್ರಮಗಳು ಈರುಳ್ಳಿ ಬೆಲೆಯನ್ನು ಇಳಿಸಲು ಸಹಾಯ ಮಾಡುತ್ತದೆಯೇ ಎಂದು ಕೇಳಿದಾಗ, ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ, `ಒಂದು ಬಾರಿಯ ಕ್ರಮಗಳು ಬೆಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕೆ ವಾರದ ಮೇಲ್ವಿಚಾರಣೆ ಅಗತ್ಯವಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು. ಕರ್ನಾಟಕದ ಈರುಳ್ಳಿ ಬೆಳೆಗೆ ಬರಗಾಲದ ಪರಿಣಾಮ ಬೀರಿರುವುದು ಎಲ್ಲರಿಗೂ ಗೊತ್ತು. ಹೆಚ್ಚುವರಿ ಈರುಳ್ಳಿ ಉತ್ಪಾದನೆಯನ್ನು ಹೊಂದಿರುವ ರಾಜ್ಯಗಳನ್ನು ಹುಡುಕುವುದು ಮತ್ತು ಹೆಚ್ಚುತ್ತಿರುವ ಬೆಲೆಗಳನ್ನು ನಿಗ್ರಹಿಸಲು ಸಾಕಷ್ಟು ಪೂರೈಕೆಯಾಗಲು ಅವರೊಂದಿಗೆ ಕೆಲಸ ಮಾಡುವುದು ಪೂರ್ವಭಾವಿ ಮಾರ್ಗವಾಗಿದೆ. ಆಹಾರಧಾನ್ಯಗಳು ಮತ್ತು ಬೇಳೆಕಾಳುಗಳ ವಿಷಯದಲ್ಲಿ ವಾರಕ್ಕೊಮ್ಮೆ ಇದನ್ನು ಮಾಡಬೇಕು ಎಂದರು. 

ಎಪಿಎಂಸಿಯ ಸಗಟು ವ್ಯಾಪಾರಿ ನಿತುಲ್ ಜೆ ಷಾ, ಈರುಳ್ಳಿ ಪೂರೈಕೆಗೆ ವಿಶ್ವಾಸಾರ್ಹ ಮೂಲವನ್ನು ಗುರುತಿಸುವವರೆಗೆ, ಬೆಲೆಗಳು ಹೆಚ್ಚಾಗುತ್ತಲೇ ಇರುತ್ತವೆ. ಮಹಾರಾಷ್ಟ್ರದಲ್ಲಿ ಒಂದು ತಿಂಗಳಲ್ಲಿ ಉತ್ತಮ ಈರುಳ್ಳಿ ಬೆಳೆ ಬಂದರೆ ಬೆಲೆ ಸ್ಥಿರವಾಗಬಹುದು. ಭಾರತದಲ್ಲಿ ಅತಿ ಹೆಚ್ಚು ಈರುಳ್ಳಿ ಪೂರೈಕೆದಾರರಲ್ಲಿ ಕರ್ನಾಟಕವೂ ಸೇರಿದೆ. ಆದರೆ ಬರವು ಬೆಳೆ ಉತ್ಪಾದನೆಯ ಮೇಲೆ ಪರಿಣಾಮ ಬೀರಿ ಬೆಲೆ ಹೆಚ್ಚಳಕ್ಕೆ ಕಾರಣವಾಯಿತು. ಅದೇ ರೀತಿ 50 ರಿಂದ 110 ರೂಪಾಯಿಗಳಷ್ಟಿದ್ದ ಬೆಳ್ಳುಳ್ಳಿ ಬೆಲೆ ಕರ್ನಾಟಕದಲ್ಲಿ ಬೆಳೆ ವೈಫಲ್ಯದಿಂದ 160 ರೂಪಾಯಿಗೆ ಏರಿದೆ. ರಾಜ್ಯಕ್ಕೆ ಈರುಳ್ಳಿ ಸಮರ್ಪಕವಾಗಿ ಪೂರೈಕೆಯಾಗುವಂತೆ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com