ಭೀಮಾ ಕೋರೆಗಾಂವ್ ಕೇಸ್: ಸಾಮಾಜಿಕ ಕಾರ್ಯಕರ್ತ ನವ್ಲಾಖಾಗೆ ಗೃಹಬಂಧನ ತಪ್ಪು ನಿದರ್ಶನ- ಸುಪ್ರೀಂ ಕೋರ್ಟ್

ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ಅವರನ್ನು ಗೃಹಬಂಧನದಲ್ಲಿ ಇರಿಸಿರುವುದು ತಪ್ಪು ನಿದರ್ಶನವಾಗಲಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಅಲ್ಲದೇ, ಅವರ ಪ್ರಸ್ತುತ ಆರೋಗ್ಯ ಪರಿಸ್ಥಿತಿ ಮತ್ತು ವಿಚಾರಣೆಯ ಹಂತವನ್ನು ತಿಳಿಸುವಂತೆ ರಾಷ್ಟ್ರೀಯ ತನಿಖಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಸಾಮಾಜಿಕ ಕಾರ್ಯಕರ್ತ ನವ್ಲಾಖಾ
ಸಾಮಾಜಿಕ ಕಾರ್ಯಕರ್ತ ನವ್ಲಾಖಾ
Updated on

ನವದೆಹಲಿ: ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ಅವರನ್ನು ಗೃಹಬಂಧನದಲ್ಲಿ ಇರಿಸಿರುವುದು ತಪ್ಪು ನಿದರ್ಶನವಾಗಲಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಅಲ್ಲದೇ, ಅವರ ಪ್ರಸ್ತುತ ಆರೋಗ್ಯ ಪರಿಸ್ಥಿತಿ ಮತ್ತು ವಿಚಾರಣೆಯ ಹಂತವನ್ನು ತಿಳಿಸುವಂತೆ ರಾಷ್ಟ್ರೀಯ ತನಿಖಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಈ ಸಂಬಂಧ ನಾಲ್ಕು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಎನ್‌ಐಎ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರಿಗೆ ನ್ಯಾಯಮೂರ್ತಿಗಳಾದ ಎಂ ಎಂ ಸುಂದ್ರೇಶ್ ಮತ್ತು ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠ ಸೂಚಿಸಿತು. 

ನವ್ಲಾಖಾ ನವೆಂಬರ್ 2022 ರಿಂದ ಮುಂಬೈನ ಸಾರ್ವಜನಿಕ ಗ್ರಂಥಾಲಯದಲ್ಲಿ ಗೃಹಬಂಧನದಲ್ಲಿದ್ದಾರೆ. ಮೇಲ್ನೋಟಕ್ಕೆ ನಮಗೆ ವಿನಾಯಿತಿ ಇದೆ. ಆದರೆ ಸುದೀರ್ಘ ಆದೇಶವನ್ನು ರವಾನಿಸಲಾಗಿದೆ. ಪ್ರಕರಣದ ಅರ್ಹತೆ ತಿಳಿಯದೆ ಇದು ತಪ್ಪು ನಿದರ್ಶನವಾಗಬಹುದು. ಒಬ್ಬ ವ್ಯಕ್ತಿಗೆ ಗೃಹ ಬಂಧನ ಸೌಲಭ್ಯ ನೀಡಲಾಗುತ್ತಿದ್ದು, ಪ್ರಸ್ತುತ ಅವರ ಚಿಕಿತ್ಸೆ ಹಾಗೂ ವಿಚಾರಣೆ ಕುರಿತು ಅಫಿಡವಿಟ್ ಸಲ್ಲಿಸಿ ಎಂದು ನ್ಯಾಯಪೀಠ ಮೌಖಿಕವಾಗಿ ಸೂಚಿಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ನವ್ಲಾಖಾ ಪರ ಹಾಜರಾದ ವಕೀಲರು, ವಾಸ್ತವ್ಯ ಬದಲಾವಣೆ  ಕೋರಿ ಕಾರ್ಯಕರ್ತ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಉನ್ನತ ನ್ಯಾಯಾಲಯ ಏಪ್ರಿಲ್ ನಲ್ಲಿಯೇ ಎನ್‌ಐಎಗೆ ನಿರ್ದೇಶಿಸಿತ್ತು. ಆದರೆ, ತನಿಖಾ ಸಂಸ್ಥೆ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದರು. ಆದರೆ ನವ್ಲಾಖಾ ಗೃಹಬಂಧನ ಆದೇಶವು ಅಸಾಮಾನ್ಯ ಆದೇಶವಾಗಿದೆ, ಇದು ಬಹುಶಃ ಈ ರೀತಿಯ ಮೊದಲನೆಯದು ಎಂದು ಎಎಸ್‌ಜಿ ರಾಜು ಪೀಠಕ್ಕೆ ತಿಳಿಸಿದರು.

ಕಳೆದ ವರ್ಷ ನವೆಂಬರ್ 10 ರಂದು ಗೃಹಬಂಧನಕ್ಕೆ ಆದೇಶ ನೀಡುವಾಗ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ರಾಜ್ಯವು ಭರಿಸಬೇಕಾದ ವೆಚ್ಚಕ್ಕಾಗಿ 2.4 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡುವಂತೆ ನವ್ಲಾಖಾ ಅವರಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com