ದೇಶದಲ್ಲಿ ಆಗಾಗ್ಗೆ ಚುನಾವಣೆ ನಡೆದರೆ ಮಾನವ ಸಂಪನ್ಮೂಲಗಳ ಮೇಲೆ ಭಾರಿ ಹೊರೆ: 2018ರಲ್ಲಿ ಮಾಜಿ ರಾಷ್ಟ್ರಪತಿ ಕೋವಿಂದ್ ಹೇಳಿದ್ದೇನು?

'ಒಂದು ರಾಷ್ಟ್ರ, ಒಂದು ಚುನಾವಣೆ'ಯ ಕಾರ್ಯಸಾಧ್ಯತೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಜಾರಿಗೆ ತರುವ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಐದು ವರ್ಷಗಳ ಮೊದಲು, ದೇಶದ ಅಂದಿನ ರಾಷ್ಟ್ರಪತಿಯಾಗಿ ರಾಮ್ ನಾಥ್ ಕೋವಿಂದ್ ಅವರು ಏಕಕಾಲದಲ್ಲಿ ಚುನಾವಣೆಗಳ ಕುರಿತು ಎಲ್ಲಾ ಪಕ್ಷಗಳ ನಡುವೆ ಚರ್ಚೆ ಮತ್ತು ಒಮ್ಮತ ಮೂಡಬೇಕೆಂದು ಹೇಳಿದ್ದರು.
ರಾಮನಾಥ್ ಕೋವಿಂದ್
ರಾಮನಾಥ್ ಕೋವಿಂದ್

ನವದೆಹಲಿ: 'ಒಂದು ರಾಷ್ಟ್ರ, ಒಂದು ಚುನಾವಣೆ'ಯ ಕಾರ್ಯಸಾಧ್ಯತೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಜಾರಿಗೆ ತರುವ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಐದು ವರ್ಷಗಳ ಮೊದಲು, ದೇಶದ ಅಂದಿನ ರಾಷ್ಟ್ರಪತಿಯಾಗಿ ರಾಮ್ ನಾಥ್ ಕೋವಿಂದ್ ಅವರು ಏಕಕಾಲದಲ್ಲಿ ಚುನಾವಣೆಗಳ ಕುರಿತು ಎಲ್ಲಾ ಪಕ್ಷಗಳ ನಡುವೆ ಚರ್ಚೆ ಮತ್ತು ಒಮ್ಮತ ಮೂಡಬೇಕೆಂದು ಹೇಳಿದ್ದರು.

ಜನವರಿ 29, 2018 ರಂದು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದ ಅಂದಿನ ರಾಷ್ಟ್ರಪತಿಗಳಾಗಿದ್ದ ರಾಮನಾಥ್ ಕೋವಿಂದ್, ದೇಶದ ಆಡಳಿತದ ಸ್ಥಿತಿಗೆ ಸಾಕ್ಷಿಯಾಗಿರುವ ನಾಗರಿಕರು ದೇಶದ ಒಂದಲ್ಲ ಒಂದು ಭಾಗದಲ್ಲಿ ಆಗಾಗ್ಗೆ ನಡೆಯುವ ಚುನಾವಣೆಗಳ ಬಗ್ಗೆ ಚಿಂತಿತರಾಗಿದ್ದಾರೆ, ಇದು ಆರ್ಥಿಕತೆ ಮತ್ತು ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಪದೇ ಪದೇ ನಡೆಯುವ ಚುನಾವಣೆಗಳು ಮಾನವ ಸಂಪನ್ಮೂಲದ ಮೇಲೆ ಭಾರಿ ಹೊರೆಯನ್ನು ಹೇರುವುದು ಮಾತ್ರವಲ್ಲದೆ ಮಾದರಿ ನೀತಿ ಸಂಹಿತೆ ಜಾರಿಯಿಂದಾಗಿ ಅಭಿವೃದ್ಧಿ ಪ್ರಕ್ರಿಯೆಗೆ ಅಡ್ಡಿಯಾಗುತ್ತಿದೆ. ಆದ್ದರಿಂದ ಏಕಕಾಲಕ್ಕೆ ಚುನಾವಣೆ ವಿಷಯದ ಬಗ್ಗೆ ನಿರಂತರ ಚರ್ಚೆ ಅಗತ್ಯ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ವಿಷಯದ ಬಗ್ಗೆ ಒಮ್ಮತಕ್ಕೆ ಬರಬೇಕಾಗಿದೆ ಎಂದರು. 
17 ನೇ ಲೋಕಸಭೆಯ ಚುನಾವಣೆಯ ನಂತರ ಸಂಸತ್ತಿನ ಮೊದಲ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ್ದ ಭಾಷಣದಲ್ಲಿ ಕೋವಿಂದ್ ಅವರು 'ಒಂದು ರಾಷ್ಟ್ರ, ಏಕಕಾಲಿಕ ಚುನಾವಣೆ'ಯನ್ನು ಪ್ರಬಲವಾಗಿ ಅನುಮೋದಿಸಿದ್ದರು. 

"ಕಳೆದ ಕೆಲವು ದಶಕಗಳಲ್ಲಿ, ದೇಶದ ಕೆಲವು ಭಾಗದಲ್ಲಿ ಆಗಾಗ್ಗೆ ಚುನಾವಣೆಗಳು ನಡೆಯುವುದರಿಂದ ಅಭಿವೃದ್ಧಿ ಕಾರ್ಯಕ್ರಮಗಳ ವೇಗ ಮತ್ತು ನಿರಂತರತೆಯ ಮೇಲೆ ಪರಿಣಾಮ ಬೀರಿದೆ" ಎಂದು ಅವರು ಹೇಳಿದರು.

ದೇಶದ ಜನರು ರಾಜ್ಯ ಮತ್ತು ರಾಷ್ಟ್ರೀಯ ವಿಷಯಗಳ ಬಗ್ಗೆ ಸ್ಪಷ್ಟ ತೀರ್ಪು ನೀಡುವ ಮೂಲಕ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಾರೆ ಎಂದು ಉಲ್ಲೇಖಿಸಿದ ಕೋವಿಂದ್, 'ಒಂದು ರಾಷ್ಟ್ರ, ಏಕಕಾಲದಲ್ಲಿ ಚುನಾವಣೆಗಳು' ಈ ಸಮಯದ ಅಗತ್ಯವಾಗಿದೆ. ಇದು "ವೇಗದ ಅಭಿವೃದ್ಧಿಗೆ ಅನುಕೂಲವಾಗಲಿದೆ" ಎಂದು ಹೇಳಿದ್ದರು. 

"ಇಂತಹ ವ್ಯವಸ್ಥೆಯೊಂದಿಗೆ, ಎಲ್ಲಾ ರಾಜಕೀಯ ಪಕ್ಷಗಳು, ಆಯಾ ಸಿದ್ಧಾಂತಗಳ ಪ್ರಕಾರ, ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ತಮ್ಮ ಶಕ್ತಿಯನ್ನು ಉತ್ತಮವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ, ಈ ಅಭಿವೃದ್ಧಿ-ಆಧಾರಿತ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಾನು ಎಲ್ಲಾ ಸಂಸತ್ತಿನ ಸದಸ್ಯರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದರು.

2017 ರಿಂದ 2022 ರವರೆಗೆ ಭಾರತದ 14 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ 77 ರ ಹರೆಯದ ಕೋವಿಂದ್ ಅವರು ಜುಲೈ 23, 2022 ರಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ತಮಗಾಗಿ ಆಯೋಜಿಸಿದ್ದ ಬೀಳ್ಕೊಡುಗೆ ಔತಣಕೂಟದಲ್ಲಿ ಪಕ್ಷಪಾತದ ರಾಜಕೀಯವನ್ನು ದೂರವಿಡುವಂತೆ ಎಲ್ಲಾ ಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದರು. "ರಾಷ್ಟ್ರ ಮೊದಲು" ಎಂಬ ಮನೋಭಾವದೊಂದಿಗೆ ದೇಶದ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕೆಂದು ಹೇಳಿದ್ದರು. 

ಅಧಿಕಾರ ತ್ಯಜಿಸಿದ ಒಂದು ವರ್ಷದ ನಂತರ, ಮಾಜಿ ರಾಷ್ಟ್ರಪತಿಗಳು ಈಗ 'ಒಂದು ರಾಷ್ಟ್ರ, ಒಂದು ಚುನಾವಣೆ'ಯ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ಸರ್ಕಾರವು ರಚಿಸಿರುವ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ.ಭಾರತದ ರಾಷ್ಟ್ರಪತಿಯಾಗಿ ಅಧಿಕಾರ ತ್ಯಜಿಸಿದ ನಂತರವೂ, ಕೋವಿಂದ್ ಅವರು ಸಕ್ರಿಯ ಸಾರ್ವಜನಿಕ ಜೀವನವನ್ನು ಹೊಂದಿದ್ದು, ಉಪನ್ಯಾಸಗಳನ್ನು ನೀಡುತ್ತಿದ್ದಾರೆ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದ್ದರು. ನಮ್ಮ ರಾಷ್ಟ್ರದ ಪ್ರಗತಿ ಮತ್ತು ಮೌಲ್ಯಗಳ ಬಗ್ಗೆ ಅವರ ಒಳನೋಟಗಳು ನಿಜವಾಗಿಯೂ ಸ್ಪೂರ್ತಿದಾಯಕ" ಎಂದು ಭಾಗವತ್ ಅವರನ್ನು ಭೇಟಿಯಾದ ನಂತರ ಕೋವಿಂದ್ ಹೇಳಿದ್ದಾರೆ.

ತಳಮಟ್ಟದ ರಾಜಕಾರಣಿಯಿಂದ ದೇಶದ ಮೊದಲ ಪ್ರಜೆಯಾಗಿ ಬೆಳೆದವರು ಎಂದು ಕರೆಯಲ್ಪಡುವ ಕೋವಿಂದ್ ಅವರು ತಮ್ಮ ಭಾಷಣಗಳಲ್ಲಿ ತಮ್ಮ ವಿನಮ್ರ ಹಿನ್ನೆಲೆಯನ್ನು ಆಗಾಗ್ಗೆ ಉಲ್ಲೇಖಿಸುತ್ತಾರೆ. ಸಣ್ಣ ಹಳ್ಳಿಯ ಮಣ್ಣಿನ ಮನೆಯಲ್ಲಿ ಹೇಗೆ ಬೆಳೆದರು ಎಂದು ತಮ್ಮ ಹಿನ್ನೆಲೆಯನ್ನು ಹೇಳಿಕೊಂಡಿದ್ದರು. 

ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಪರೌಂಖ್ ಗ್ರಾಮದಲ್ಲಿ ಜನಿಸಿದ ಕೋವಿಂದ್ ಅವರು 1971 ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿದ್ದರು. 1977 ರಿಂದ 1979 ರವರೆಗೆ ದೆಹಲಿ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.

1978 ರಲ್ಲಿ, ಅವರು ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಅಡ್ವೊಕೇಟ್-ಆನ್-ರೆಕಾರ್ಡ್ ಆದರು. 1980 ರಿಂದ 1993 ರವರೆಗೆ, ಕೋವಿಂದ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಸ್ಥಾಯಿ ವಕೀಲರಾಗಿದ್ದರು. ಏಪ್ರಿಲ್ 1994 ರಿಂದ ಉತ್ತರ ಪ್ರದೇಶದಿಂದ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾದರು.

ಮಾರ್ಚ್ 2006 ರವರೆಗೆ ತಲಾ ಆರು ವರ್ಷಗಳಂತೆ ಸತತ ಎರಡು ಅವಧಿಗೆ ಸೇವೆ ಸಲ್ಲಿಸಿದರು. ಕೋವಿಂದ್ ಅವರನ್ನು ಆಗಸ್ಟ್ 8, 2015 ರಂದು ಬಿಹಾರದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com