ಧರ್ಮೇಂದ್ರ ಪ್ರಧಾನ್.
ದೇಶ
ಎನ್‌ಸಿಇಆರ್‌ಟಿಗೆ ಡೀಮ್ಡ್ ವಿವಿ ಸ್ಥಾನಮಾನ; ಈಗ ತನ್ನದೇ ಆದ ಪದವಿಗಳನ್ನು ನೀಡಬಹುದು
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್‌ಸಿಇಆರ್‌ಟಿ)ಗೆ ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶುಕ್ರವಾರ ತಿಳಿಸಿದ್ದಾರೆ.
ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್‌ಸಿಇಆರ್‌ಟಿ)ಗೆ ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶುಕ್ರವಾರ ತಿಳಿಸಿದ್ದಾರೆ.
ಎನ್‌ಸಿಇಆರ್‌ಟಿಯ 63ನೇ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಮಾತನಾಡಿದ ಪ್ರಧಾನ್, "ಇಂದು, ನಾವು ಎನ್‌ಸಿಇಆರ್‌ಟಿಗೆ ಡೀಮ್ಡ್-ಟು-ಬಿ ಯುನಿವರ್ಸಿಟಿಯ ಸ್ಥಾನಮಾನವನ್ನು ನೀಡುತ್ತಿದ್ದೇವೆ ಎಂದು ಘೋಷಿಸಲು ಬಯಸುತ್ತೇನೆ" ಎಂದರು.
ಸೊಸೈಟಿ ಕಾಯಿದೆಯಡಿ 1961 ರಲ್ಲಿ ಸ್ಥಾಪಿತವಾದ NCERT ಶಾಲಾ ಶಿಕ್ಷಣದ ವಿಷಯದಲ್ಲಿ ಸರ್ಕಾರಕ್ಕೆ ಸಹಾಯ ಮಾಡುತ್ತದೆ ಮತ್ತು ಸಲಹೆ ನೀಡುತ್ತದೆ.
ಇತರ ವಿಶ್ವವಿದ್ಯಾನಿಲಯಗಳಂತೆ ಡೀಮ್ಡ್-ಟು-ಬಿ ವಿಶ್ವವಿದ್ಯಾನಿಲಯಗಳು ಸಹ ವಿವಿಧ ಕೋರ್ಸ್‌ಗಳನ್ನು ನೀಡುವ ಸ್ವಾಯತ್ತತೆಯನ್ನು ಹೊಂದಿವೆ ಮತ್ತು ವಿವಿಧ ಪರೀಕ್ಷೆಗಳು ಮತ್ತು ಪ್ರಶಸ್ತಿಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತವೆ. ಎನ್‌ಸಿಇಆರ್‌ಟಿ ಸಹ ಇನ್ನು ಮುಂದೆ ತನ್ನದೇ ಆದ ಪದವಿಗಳನ್ನು ನೀಡಬಹುದು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ