ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಸಮಿತಿಗೆ ಸುಧಾಮೂರ್ತಿ ನೇಮಕ
ಹೊಸ ಪಠ್ಯಪುಸ್ತಕಗಳ ಪರಿಷ್ಕರಣೆ, ರಚನೆಗೆ ಎನ್‌ಸಿಇಆರ್‌ಟಿಯ 19 ಸದಸ್ಯರ ಸಮಿತಿಗೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ, ಶಂಕರ್ ಮಹಾದೇವನ್ ಅವರನ್ನು ಆಯ್ಕೆ ಮಾಡಲಾಗಿದೆ.
Published: 13th August 2023 09:59 AM | Last Updated: 13th August 2023 02:24 PM | A+A A-

ಸುಧಾಮೂರ್ತಿ
ನವದೆಹಲಿ: ಹೊಸ ಪಠ್ಯಪುಸ್ತಕಗಳ ಪರಿಷ್ಕರಣೆ, ರಚನೆಗೆ ಎನ್‌ಸಿಇಆರ್‌ಟಿಯ 19 ಸದಸ್ಯರ ಸಮಿತಿಗೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ, ಶಂಕರ್ ಮಹಾದೇವನ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಸ್ತೂರಿರಂಗನ್ ನೇತೃತ್ವದ ಸ್ಟೀರಿಂಗ್ ಸಮಿತಿಯು ಅಭಿವೃದ್ಧಿಪಡಿಸಿದ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನೊಂದಿಗೆ (NCF-SE) ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಪಠ್ಯಕ್ರಮವನ್ನು ಸೇರಿಸಲು ಈ ಸಮಿತಿ ಕೆಲಸ ಮಾಡಲಿದೆ.
ಅಂತಿಮ ಎನ್‍ಸಿಎಫ್-ಎಸ್ಇ ಅನ್ನು ಈಗಾಗಲೇ ಶಿಕ್ಷಣ ಸಚಿವಾಲಯದೊಂದಿಗೆ ಸಲ್ಲಿಸಲಾಗಿದ್ದರೂ, ಅದನ್ನು ಇನ್ನೂ ಸಾರ್ವಜನಿಕ ವಲಯದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಚೌಕಟ್ಟಿನ ಕರಡನ್ನು ಏಪ್ರಿಲ್‍ನಲ್ಲಿ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿ ವಿಚಾರ ಅಚ್ಚರಿ ಮೂಡಿಸಿತ್ತು: ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ
ಟಿಪ್ಪಣಿಯ ಪ್ರಕಾರ, ಶಾಲಾ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲು ಎನ್ಎಸ್‍ಟಿಸಿ ಗೆ ಅಧಿಕಾರ ನೀಡಲಾಗುವುದು. ಅದಲ್ಲದೇ 3ನೇ ತರಗತಿಯಿಂದ 12 ತರಗತಿಯವರೆಗೆ ಬೋಧನೆ ಮತ್ತು ಕಲಿಕೆಯ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವುದೂ ಎನ್ಎಸ್‍ಟಿಸಿಯ ಜವಾಬ್ದಾರಿ ಆಗಿರಲಿದೆ.
ಈ ಸಮಿತಿಯಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಮಂಜಲ್ ಭಗವ್ ಅವರ ಉಪಾಧ್ಯಕ್ಷತೆಯನ್ನು ಹೊಂದಿದೆ. ಇದರ ಇತರ ಸದಸ್ಯರಲ್ಲಿ ಗಣಿತಜ್ಞ ಸುಜಾಥಾ ರಾಮ್‍ದೊರೈ, ಬ್ಯಾಡ್ಮಿಂಟನ್ ಆಟಗಾರ ಯು ವಿಮಲ್ ಕುಮಾರ್, ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್‍ನ ಎಂಡಿ ಶ್ರೀನಿವಾಸ್, ಮತ್ತು ಅಧ್ಯಕ್ಷರಾಘಿ ಭಾರತೀಯ ಭಾಷಾ ಸಮಿತಿಯ ಕೃಷ್ಣ ಶಾಸ್ತ್ರೀ ಕೂಡ ಇರಲಿದ್ದಾರೆ.