ಪಶ್ಚಿಮ ಬಂಗಾಳ ಗರ್ವನರ್ vs ಸಿಎಂ: ವಿವಿಗಳಿಗೆ ಅನುದಾನ ನಿಲ್ಲಿಸುವುದಾಗಿ ಮಮತಾ ಎಚ್ಚರಿಕೆ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಸಿವಿ ಆನಂದ ಬೋಸ್ ನಡುವಿನ ಜಗಳ ಮಂಗಳವಾರ ತೀವ್ರ ಸ್ವರೂಪ ಪಡೆದಿದೆ.
ಸಿವಿ ಆನಂದ ಬೋಸ್ - ಮಮತಾ ಬ್ಯಾನರ್ಜಿ
ಸಿವಿ ಆನಂದ ಬೋಸ್ - ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಸಿವಿ ಆನಂದ ಬೋಸ್ ನಡುವಿನ ಜಗಳ ಮಂಗಳವಾರ ತೀವ್ರ ಸ್ವರೂಪ ಪಡೆದಿದೆ.

ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರು ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಿಎಂ ಮಮತಾ, ವಿಶ್ವವಿದ್ಯಾಲಯಗಳಿಗೆ ಅನುದಾನ ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ರಾಜ್ಯದ ಏಳು ವಿಶ್ವವಿದ್ಯಾಲಯಗಳಿಗೆ ಹಂಗಾಮಿ ಕುಲಪತಿಗಳನ್ನು ನೇಮಿಸಿದ ಮತ್ತು ಇತರ ಒಂಬತ್ತು ವಿವಿಗಳಿಗೂ ಹಂಗಾಮಿ ಕುಲಪತಿಗಳ ನೇಮಕ ಪ್ರಕ್ರಿಯೆ ಆರಂಭಿಸಿದ ಬೋಸ್ ಅವರ ಇತ್ತೀಚಿನ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಮತಾ, ದೇಶದ ಒಕ್ಕೂಟ ರಚನೆ ಮತ್ತು ರಾಜ್ಯ ಸರ್ಕಾರವನ್ನು ಕಡೆಗಣಿಸಿ ವ್ಯವಸ್ಥೆಯ ವಿರುದ್ಧ ವರ್ತಿಸುವುದನ್ನು ಮುಂದುವರೆಸಿದರೆ ರಾಜಭವನದ ಮುಂದೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. 

ಇಂದು ಕೋಲ್ಕತ್ತಾದಲ್ಲಿ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, “ಈಗ ಇಲ್ಲಿ ಒಬ್ಬ ಗೌರವಾನ್ವಿತ ರಾಜ್ಯಪಾಲರು ಇದ್ದಾರೆ. ಅವರು ಕಾಲೇಜುಗಳು, ವಿಶ್ವವಿದ್ಯಾಲಯಗಳು, ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿಯಲ್ಲಿ ಕುಲಪತಿಯನ್ನು ಬದಲಾಯಿಸಿದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಮಾಜಿ ಐಪಿಎಸ್, ಮಾಜಿ ನ್ಯಾಯಾಧೀಶರನ್ನು ಕರೆತಂದು ರಾತ್ರೋರಾತ್ರಿ ಕುಲಪತಿಗಳನ್ನಾಗಿ ನೇಮಕ ಮಾಡಲಾಗಿದೆ. ಅವರು ರಾಜಭವನವನ್ನು ತಮ್ಮ ಸ್ವಂತ ಆಸ್ತಿಯಂತೆ ಬಳಸಿಕೊಳ್ಳುತ್ತಿದೆ. ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯ ಅವರ ಆದೇಶ ಪಾಲಿಸಿದರೆ, ನಾನು ಆರ್ಥಿಕ ದಿಗ್ಬಂಧನ ವಿಧಿಸುತ್ತೇನೆ. ಅವರು ಕುಲಪತಿಗಳಿಗೆ ಹೇಗೆ ಸಂಬಳ ನೀಡುತ್ತಾರೆ ನೋಡೋಣ.” ಎಂದು ಎಚ್ಚರಿಕೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com