'ಸನಾತನ ಧರ್ಮ ಅಸ್ಪೃಶ್ಯತೆಗೆ ಸಮಾನ': ಬಿ ಆರ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್

ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ "ಸನಾತನ ಧರ್ಮ ನಿರ್ಮೂಲನೆ" ಹೇಳಿಕೆಯ ಕುರಿತು ದೇಶಾದ್ಯಂತ ಭುಗಿಲೆದ್ದಿರುವ ವಿವಾದ ಮಧ್ಯೆ ವಂಚಿತ್ ಬಹುಜನ ಆಘಾಡಿ ರಾಷ್ಟ್ರೀಯ ಅಧ್ಯಕ್ಷ, ಡಾ ಬಿ ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು, ಸನಾತನ ಧರ್ಮವನ್ನು 'ಅಸ್ಪೃಶ್ಯತೆ'ಗೆ ಸಮಾನ ಎಂದು ವ್ಯಾಖ್ಯಾನಿಸಿದ್ದಾರೆ. 
ಪ್ರಕಾಶ್ ಅಂಬೇಡ್ಕರ್(ಸಂಗ್ರಹ ಚಿತ್ರ)
ಪ್ರಕಾಶ್ ಅಂಬೇಡ್ಕರ್(ಸಂಗ್ರಹ ಚಿತ್ರ)

ನವದೆಹಲಿ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ "ಸನಾತನ ಧರ್ಮ ನಿರ್ಮೂಲನೆ" ಹೇಳಿಕೆಯ ಕುರಿತು ದೇಶಾದ್ಯಂತ ಭುಗಿಲೆದ್ದಿರುವ ವಿವಾದ ಮಧ್ಯೆ ವಂಚಿತ್ ಬಹುಜನ ಆಘಾಡಿ ರಾಷ್ಟ್ರೀಯ ಅಧ್ಯಕ್ಷ, ಡಾ ಬಿ ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು, ಸನಾತನ ಧರ್ಮವನ್ನು 'ಅಸ್ಪೃಶ್ಯತೆ'ಗೆ ಸಮಾನ ಎಂದು ವ್ಯಾಖ್ಯಾನಿಸಿದ್ದಾರೆ. 

ಈ ಬಗ್ಗೆ ಟ್ವೀಟ್ ನಲ್ಲಿ ಅವರು, ''ಸನಾತನ ಧರ್ಮ= ಅಸ್ಪೃಶ್ಯತೆ" ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, ಅವರು ಸನಾತನ ಧರ್ಮದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಸನಾತನ ಧರ್ಮವು ಅಸ್ಪೃಶ್ಯತೆಯನ್ನು ನಂಬುತ್ತದೆ. ಹೀಗಿರುವಾಗ ನಾವು ಸನಾತನ ಧರ್ಮವನ್ನು ಹೇಗೆ ಒಪ್ಪಿಕೊಳ್ಳಬಹುದು ಎಂದು ಕೇಳಿದ್ದಾರೆ. 

ಇತ್ತೀಚೆಗೆ ಚೆನ್ನೈಯಲ್ಲಿ 'ಸನಾತನ ವಿರೋಧಿ ಸಮಾವೇಶ'ದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಮತ್ತು ಕೊರೊನಾ ವೈರಸ್‌ನಂತಹ ರೋಗಗಳಿಗೆ ಹೋಲಿಸಿ ಅದನ್ನು ವಿರೋಧ ಮಾಡುವುದು ಮಾತ್ರವಲ್ಲ ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಸನಾತನವನ್ನು ವಿರೋಧಿಸುವುದಕ್ಕಿಂತ ಅದನ್ನು ನಿರ್ಮೂಲನೆ ಮಾಡಬೇಕು ಎಂದ ಅವರು, ಸನಾತನ ಎಂಬ ಹೆಸರು ಸಂಸ್ಕೃತದಿಂದ ಬಂದಿದೆ.ಇದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದಿದ್ದರು. 

ಉದಯನಿಧಿಯವರ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ, ಕಾಂಗ್ರೆಸ್ ಮತ್ತು ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (ಇಂಡಿಯಾ) ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ. 

ಜೈಸಲ್ಮೇರ್‌ನ ರಾಮದೇವರ 'ಪರಿವರ್ತನ ಸಂಕಲ್ಪ ಯಾತ್ರೆ'ಯಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಕಾಂಗ್ರೆಸ್ ಮಿತ್ರ ಪಕ್ಷ ಡಿಎಂಕೆ ಸನಾತನ ಧರ್ಮವನ್ನು ಅವಮಾನಿಸುತ್ತಿದೆ. ಸನಾತನ ಧರ್ಮವನ್ನು ತೊಡೆದುಹಾಕಬೇಕು ಎಂದು ಅವರು ಹೇಳುತ್ತಾರೆ. 'ಇಂಡಿಯಾ' ಒಕ್ಕೂಟದ ಮಿತ್ರರು ಈ ಬಗ್ಗೆ ಮೌನ ವಹಿಸಿದ್ದಾರೆ. ಏಕೆ, ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ಕ್ಷಮೆಯಾಚಿಸಬೇಕು ಎಂದು ಕೇಳಿದ್ದಾರೆ. 

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಇತರ ಹಿರಿಯ ನಾಯಕರು ಉದಯನಿಧಿ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿ ಅವರ ವಿರುದ್ಧ ಕಠಿಣ ಕ್ರಮಗಳಿಗೆ ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com