ಭಿತ್ತಿಚಿತ್ರ, ಗೀಚುಬರಹ, ಸುಂದರ ವಿನ್ಯಾಸದ ಚಿತ್ರಗಳು, ಬೆಳಕು... ಜಿ20ಗೆ ನವ ವಧುವಿನಂತೆ ಸಿಂಗಾರಗೊಂಡಿದೆ ದೆಹಲಿ!

ಜಿ20 ಶೃಂಗಸಭೆಗೆ ರಾಜಧಾನಿ ದೆಹಲಿ ನವವಧುವಿನಂತೆ ಸಿಂಗಾರಗೊಂಡಿದೆ. ಪ್ರಕಾಶಮಾನವಾದ ಭಿತ್ತಿಚಿತ್ರಗಳು, ಗೀಚುಬರಹ ಮತ್ತು ಗೋಡೆಗಳನ್ನು ಸುಂದರವಾದ ಚಿತ್ರಗಳನ್ನು ಬಿಡಿಸುವ ಮೂಲಕ ಅಲಂಕರಿಸಲಾಗಿದೆ. 
ಜಿ20 ಶೃಂಗಸಭೆ ನಡೆಯಲಿರುವ ಮುಖ್ಯ ವೇದಿಕೆ ಭಾರತ ಮಂಟಪ
ಜಿ20 ಶೃಂಗಸಭೆ ನಡೆಯಲಿರುವ ಮುಖ್ಯ ವೇದಿಕೆ ಭಾರತ ಮಂಟಪ
Updated on

ನವದೆಹಲಿ: ಜಿ20 ಶೃಂಗಸಭೆಗೆ ರಾಜಧಾನಿ ದೆಹಲಿ ನವವಧುವಿನಂತೆ ಸಿಂಗಾರಗೊಂಡಿದೆ. ಪ್ರಕಾಶಮಾನವಾದ ಭಿತ್ತಿಚಿತ್ರಗಳು, ಗೀಚುಬರಹ ಮತ್ತು ಗೋಡೆಗಳನ್ನು ಸುಂದರವಾದ ಚಿತ್ರಗಳನ್ನು ಬಿಡಿಸುವ ಮೂಲಕ ಅಲಂಕರಿಸಲಾಗಿದೆ. ನಾಳೆ ಸೆಪ್ಟೆಂಬರ್ 9 ಮತ್ತು 10 ರಂದು ಎರಡು ದಿನಗಳ ಕಾಲ ವಿಶ್ವ ನಾಯಕರಿಗೆ ಆತಿಥ್ಯ ವಹಿಸುವ ಜಿ20 ಶೃಂಗಸಭೆಗೆ ದೆಹಲಿಯ ಎಲ್ಲಾ ಪ್ರಮುಖ ರಸ್ತೆ, ಬೀದಿಗಳು ಸುಂದರವಾಗಿ ರಾರಾಜಿಸುತ್ತಿವೆ. 

ಈ ಬಾರಿ ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯಲ್ಲಿ ವಿಶ್ವದ ಉನ್ನತ ನಾಯಕರು ಭಾಗವಹಿಸಲಿದ್ದಾರೆ.

G20, ಅಥವಾ 20 ದೇಶಗಳ ಗುಂಪಿನಲ್ಲಿ ಜಗತ್ತಿನ 19 ದೇಶಗಳಾದ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಐರೋಪ್ಯ ಒಕ್ಕೂಟ ಒಳಗೊಂಡಿದೆ.

ಶೃಂಗಸಭೆಯ ಸಮಯದಲ್ಲಿ, ರಾಷ್ಟ್ರ ರಾಜಧಾನಿಯು ಯುಎಸ್ ಅಧ್ಯಕ್ಷ ಜೊ ಬೈಡನ್, ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೇರಿದಂತೆ ಪ್ರಮುಖ ನಾಯಕರಿಗೆ ಆತಿಥ್ಯ ವಹಿಸಲಿದೆ. 

ಕೇಂದ್ರ ಸರ್ಕಾರದ ಅಧಿಕಾರಿಗಳು ದೆಹಲಿಯ ರಸ್ತೆಗಳು, ಫುಟ್‌ಪಾತ್‌ಗಳು, ವೃತ್ತಗಳು, ಮಾರುಕಟ್ಟೆಗಳು, ಫ್ಲೈಓವರ್‌ಗಳು ಮತ್ತು ಸಾರ್ವಜನಿಕ ಪ್ರದೇಶಗಳನ್ನು 1 ಲಕ್ಷಕ್ಕೂ ಹೆಚ್ಚು ಕುಂಡದಲ್ಲಿ ಸಸ್ಯಗಳೊಂದಿಗೆ ಸುಂದರಗೊಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com