ರಿಷಿ ಸುನಕ್ ದೆಹಲಿಗೆ ಆಗಮನ
ದೇಶ
ಜಿ20 ಶೃಂಗಸಭೆ: ಬ್ರಿಟನ್ ಪ್ರಧಾನಿ, ಭಾರತದ ಅಳಿಯ ರಿಷಿ ಸುನಕ್ ದೆಹಲಿಗೆ ಆಗಮನ
ಮೊದಲ ಬಾರಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ G-20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿದ್ದು, ಬ್ರಿಟಿಷ್ ಪ್ರಧಾನಿ ಹಾಗೂ ಭಾರತದ ಅಳಿಯ ರಿಷಿ ಸುನಕ್ ಅವರು ಶುಕ್ರವಾರ ಮಧ್ಯಾಹ್ನ ದೆಹಲಿಗೆ ಆಗಮಿಸಿದ್ದಾರೆ.
ನವದೆಹಲಿ: ಮೊದಲ ಬಾರಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ G-20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿದ್ದು, ಬ್ರಿಟಿಷ್ ಪ್ರಧಾನಿ ಹಾಗೂ ಭಾರತದ ಅಳಿಯ ರಿಷಿ ಸುನಕ್ ಅವರು ಶುಕ್ರವಾರ ಮಧ್ಯಾಹ್ನ ದೆಹಲಿಗೆ ಆಗಮಿಸಿದ್ದಾರೆ.
ರಿಷಿ ಸುನಕ್ ಜೊತೆ ಅವರ ಪತ್ನಿ, ಅಕ್ಷತಾ ಮೂರ್ತಿ ಕೂಡ ಆಗಮಿಸಿದ್ದು, ಅವರನ್ನು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಸ್ವಾಗತಿಸಿದರು.
ಜಿ-20 ಶೃಂಗಸಭೆಗಾಗಿ ದೆಹಲಿಗೆ ಆಗಮಿಸಿರುವುದು ನಿಸ್ಸಂಶಯವಾಗಿ ವಿಶೇಷ ಎಂದು ರಿಷಿ ಸುನಕ್ ಅವರು ಹೇಳಿದ್ದಾರೆ.