ರಿಷಿ ಸುನಕ್ ಹಾಗೂ ಪತ್ನಿ ಅಕ್ಷತಾ
ರಿಷಿ ಸುನಕ್ ಹಾಗೂ ಪತ್ನಿ ಅಕ್ಷತಾ

'ಹೆಮ್ಮೆಯ ಹಿಂದೂ' ಬ್ರಿಟನ್ ಪ್ರಧಾನಿ ರಿಷಿ ಸುನಕ್ ನಾಳೆ ಅಕ್ಷರಧಾಮಕ್ಕೆ ಭೇಟಿ

G20 ಶೃಂಗಸಭೆಗಾಗಿ ದೆಹಲಿಗೆ ಆಗಮಿಸಿರುವ ಯುನೈಟೆಡ್ ಕಿಂಗ್‌ಡಮ್ ಪ್ರಧಾನಿ ರಿಷಿ ಸುನಕ್ ಅವರು ಭಾನುವಾರ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ನವದೆಹಲಿ: G20 ಶೃಂಗಸಭೆಗಾಗಿ ದೆಹಲಿಗೆ ಆಗಮಿಸಿರುವ ಯುನೈಟೆಡ್ ಕಿಂಗ್‌ಡಮ್ ಪ್ರಧಾನಿ ರಿಷಿ ಸುನಕ್ ಅವರು ಭಾನುವಾರ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಇಂದು ಎಎನ್‌ಐ ಜೊತೆ ಮಾತನಾಡಿದ ಬ್ರಿಟನ್ ಪ್ರಧಾನಿ ರಿಷಿ, ನಾಳೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ತಮ್ಮ 'ಹಿಂದೂ' ಬೇರುಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ರಿಷಿ ಸುನಕ್, G20 ಶೃಂಗಸಭೆಯ ಸಮಯದಲ್ಲಿ ಬಿಡುವ ಮಾಡಿಕೊಂಡು ಭಾರತದಲ್ಲಿನ ದೇವಾಲಯಗಳಿಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ.

ಪ್ರಧಾನಿ ಮೋದಿಯವರ ಬಗ್ಗೆ "ಅಗಾಧವಾದ ಗೌರವ" ಇದೆ ಮತ್ತು ಜಿ 20 ಶೃಂಗಸಭೆ ದೊಡ್ಡ ಯಶಸ್ಸು ಕಾಣಲು ತಾವು ಅವರನ್ನು ಬೆಂಬಲಿಸಲು ಉತ್ಸುಕರಾಗಿರುವುದಾಗಿ ಬ್ರಿಟನ್ ಪ್ರಧಾನಿ ತಿಳಿಸಿದ್ದಾರೆ.

ಎಎನ್‌ಐಗೆ ಪ್ರತ್ಯೇಕವಾಗಿ ಮಾತನಾಡಿದ ರಿಷಿ ಸುನಕ್, "ನಾನು ಹೆಮ್ಮೆಯ ಹಿಂದೂ. ನಾನು ಬೆಳೆದದ್ದು ಹೀಗೆ, ನಾನು ಹೀಗೆಯೇ ಇದ್ದೇನೆ. ನಾನು ಒಂದೆರಡು ದಿನ ಭಾರತದಲ್ಲಿರುತ್ತೇನೆ. ಈ ಸಮಯದಲ್ಲಿ ನನಗೆ ದೇವಸ್ಥಾನಕ್ಕೆ ಭೇಟಿ ನೀಡುವ ಸಮಯ ಸಿಗಬಹುದು ಎಂದು ಭಾವಿಸಿದ್ದೇನೆ. ಇತ್ತೀಚೆಗಷ್ಟೇ ನಾನು ರಕ್ಷಾಬಂಧನವನ್ನು ಆಚರಿಸಿದೆ. ಈ ವೇಳೆ ನನ್ನ ಸಹೋದರಿಯರು ಹಾಗೂ ಸೋದರ ಸಂಬಂಧಿಗಳು ರಾಖಿ ಕಟ್ಟಿದರು. ನನ್ನ ಬಳಿ ಅವರು ಕಟ್ಟಿರುವ ಎಲ್ಲಾ ರಾಖಿಗಳೂ ಇವೆ. ಆದರೆ, ಇತ್ತೀಚೆಗೆ ನಡೆದ ಕೃಷ್ಣಾ ಜನ್ಮಾಷ್ಠಮಿಯನ್ನು ಸರಿಯಾಗಿ ಆಚರಿಸಲು ನನಗೆ ಸಮಯ ಸಿಗಲಿಲ್ಲ. ಆದರೆ, ನಾವು ಈ ಬಾರಿ ಮಂದಿರಕ್ಕೆ ಭೇಟಿ ನೀಡಿದರೆ ಅದನ್ನು ಸರಿದೂಗಿಸಬಹುದು ಎಂದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com