G20 ಶೃಂಗಸಭೆ: ರಷ್ಯಾ ಉಲ್ಲೇಖಿಸಿ ಭೂಪ್ರದೇಶ ಸ್ವಾಧೀನಕ್ಕೆ ಬಲ ಪ್ರಯೋಗ ತಿರಸ್ಕರಿಸಿದ ದೆಹಲಿ ಘೋಷಣೆ

ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ಶನಿವಾರ ಆಫ್ರಿಕನ್ ಯೂನಿಯನ್ ಅನ್ನು ಹೊಸ ಸದಸ್ಯನಾಗಿ ಸ್ವಾಗತಿಸಿದೆ ಮತ್ತು ಒಮ್ಮತದೊಂದಿಗೆ ನವದೆಹಲಿ ಘೋಷಣೇಯನ್ನು ಅಂಗೀಕರಿಸಿದೆ. ಆದರೆ ಉಕ್ರೇನ್‌ ವಿರುದ್ಧ ರಷ್ಯಾ...
G20 ಶೃಂಗಸಭೆ
G20 ಶೃಂಗಸಭೆ

ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯು ಶನಿವಾರ ಆಫ್ರಿಕನ್ ಯೂನಿಯನ್ ಅನ್ನು ಹೊಸ ಸದಸ್ಯನಾಗಿ ಸ್ವಾಗತಿಸಿದೆ ಮತ್ತು ಒಮ್ಮತದೊಂದಿಗೆ ನವದೆಹಲಿ ಘೋಷಣೇಯನ್ನು ಅಂಗೀಕರಿಸಿದೆ. ಆದರೆ ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧದ ವಿವಾದಾತ್ಮಕ ವಿಷಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಬಲ ಪ್ರಯೋಗ ಅಥವಾ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ತಿರಸ್ಕರಿಸಿದೆ.

ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ದೆಹಲಿ ಘೋಷಣೆಯಲ್ಲಿ ಅಳವಡಿಸಿಕೊಳ್ಳಬಹುದೆಂಬ ಅನುಮಾನವಿತ್ತು. ಆದರೆ ಇದು ಯುದ್ಧದ ಬಗ್ಗೆ ಭಿನ್ನಾಭಿಪ್ರಾಯಗಳ ಮೇಲೆ ಕೇಂದ್ರೀಕೃತವಾಗಿರುವುದರಿಂದ ತಿರಸ್ಕರಿಸಲಾಗಿದೆ.

ಶೃಂಗಸಭೆಯು ಅಧಿಕೃತವಾಗಿ ಮುಕ್ತಾಯಗೊಳ್ಳುವ ಒಂದು ದಿನದ ಮುನ್ನ ಬಿಡುಗಡೆಯಾದ G20 ಅಂತಿಮ ಹೇಳಿಕೆಯು ಕಳೆದ ವರ್ಷ ಬಾಲಿಯಲ್ಲಿ ನಡೆದ ಸಭೆಯಲ್ಲಿ ಯುದ್ಧದ ಬಗ್ಗೆ ನೀಡಲಾದ ಹೇಳಿಕೆಗಿಂತ ಕಡಿಮೆ ತೀಕ್ಷ್ಣವಾದ ಮಾತುಗಳನ್ನು ಹೊಂದಿದೆ ಮತ್ತು ರಷ್ಯಾದ ಆಕ್ರಮಣವನ್ನು ನೇರವಾಗಿ ಉಲ್ಲೇಖಿಸಿಲ್ಲ.

ಸದಸ್ಯರು ತಮ್ಮ ರಾಷ್ಟ್ರೀಯ ನಿಲುವುಗಳನ್ನು ಮತ್ತು ವಿಶ್ವಸಂಸ್ಥೆಯಲ್ಲಿ ಅಂಗೀಕರಿಸಿದ ನಿರ್ಣಯಗಳನ್ನು ಪುನರುಚ್ಚರಿಸಿದರು ಮತ್ತು ಎಲ್ಲಾ ರಾಜ್ಯಗಳು ಯುಎನ್ ಚಾರ್ಟರ್‌ನಲ್ಲಿ ಸೂಚಿಸಲಾದ ತತ್ವಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ದೆಹಲಿ ಘೋಷಣೆ ಹೇಳಿದೆ.

"ವಿಶ್ವಸಂಸ್ಥೆಯಲ್ಲಿ ಅಂಗೀಕರಿಸಿದ ನಿರ್ಣಯಗಳಿಗೆ ಅನುಗುಣವಾಗಿ, ಯಾವುದೇ ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಭೂ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಬೆದರಿಕೆ ಅಥವಾ ಬಲ ಪ್ರಯೋಗದಿಂದ ದೂರವಿರಬೇಕು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಸ್ವೀಕಾರಾರ್ಹವಲ್ಲ ಎಂದು ಘೋಷಣೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com