G20 ಗಣ್ಯರಿಂದ ಬಡವರನ್ನು ಸರ್ಕಾರ ಮರೆಮಾಚುತ್ತಿದೆ: ರಾಹುಲ್ ಗಾಂಧಿ

ಜಿ20 ಶೃಂಗಸಭೆಯ ದೃಷ್ಟಿಯಿಂದ ಕೇಂದ್ರ ಸರಕಾರ ಕೊಳೆಗೇರಿಗಳನ್ನು ಮುಚ್ಚುತ್ತಿದೆ ಅಥವಾ ನೆಲಸಮಗೊಳಿಸುತ್ತಿದೆ ಮತ್ತು ಬೀದಿ ಪ್ರಾಣಿಗಳನ್ನು ತೆರವುಗೊಳಿಸುತ್ತದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ದೆಹಲಿಲ್ಲಿ ರಸ್ತೆ ಬದಿಯ  ಗೂಡಂಗಡಿಗಳನ್ನು ಮರೆಮಾಚಿರುವುದು
ದೆಹಲಿಲ್ಲಿ ರಸ್ತೆ ಬದಿಯ ಗೂಡಂಗಡಿಗಳನ್ನು ಮರೆಮಾಚಿರುವುದು

ನವದೆಹಲಿ: ಜಿ20 ಶೃಂಗಸಭೆಯ ದೃಷ್ಟಿಯಿಂದ ಕೇಂದ್ರ ಸರಕಾರ ಕೊಳೆಗೇರಿಗಳನ್ನು ಮುಚ್ಚುತ್ತಿದೆ ಅಥವಾ ನೆಲಸಮಗೊಳಿಸುತ್ತಿದೆ ಮತ್ತು ಬೀದಿ ಪ್ರಾಣಿಗಳನ್ನು ತೆರವುಗೊಳಿಸುತ್ತದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.

"ನಮ್ಮ ಅತಿಥಿಗಳಿಂದ ಭಾರತದ ವಾಸ್ತವತೆಯನ್ನು ಮರೆಮಾಚುವ ಅಗತ್ಯವಿಲ್ಲ" ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಹೇಳಿದ್ದಾರೆ.

ಇಂದಿನಿಂದ ದೆಹಲಿಯಲ್ಲಿ ಆರಂಭವಾದ ವಿಶ್ವದ ಅತಿದೊಡ್ಡ ಆರ್ಥಿಕತೆಗಳ ನಾಯಕರು ಭಾಗವಹಿಸುತ್ತಿರುವ ಎರಡು ದಿನಗಳ ಜಿ20 ಶೃಂಗಸಭೆಗೂ ಮೊದಲು ಕೆಲವು ಕೊಳೆಗೇರಿ ಪ್ರದೇಶಗಳನ್ನು ಹಸಿರು ನೆಟ್ ನಿಂದ ಮುಚ್ಚಿರುವುದನ್ನು ತೋರಿಸುವ ವೀಡಿಯೊವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.

"ಭಾರತ ಸರ್ಕಾರ ನಮ್ಮ ಬಡ ಜನರನ್ನು ಮತ್ತು ಪ್ರಾಣಿಗಳನ್ನು ಮರೆಮಾಚುತ್ತಿದೆ. ನಮ್ಮ ಅತಿಥಿಗಳಿಂದ ಭಾರತದ ವಾಸ್ತವತೆಯನ್ನು ಮರೆಮಾಚುವ ಅಗತ್ಯವಿ" ಎಂದು ಪ್ರಸ್ತುತ ವಿದೇಶದಲ್ಲಿರುವ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com