ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಕಾಲಕ್ಕೆ ತಕ್ಕಂತೆ ಬದಲಾಗದವರು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಾರೆ: ಜಿ20 ಅಧಿವೇಶನದಲ್ಲಿ ಪ್ರಧಾನಿ ಮೋದಿ ಮಾತು

ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಿ20 ಶೃಂಗಸಭೆಯಲ್ಲಿ ಒತ್ತಾಯ ಮಾಡಿದ್ದಾರೆ.

ನವದೆಹಲಿ: ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಿ20 ಶೃಂಗಸಭೆಯಲ್ಲಿ ಒತ್ತಾಯ ಮಾಡಿದ್ದಾರೆ, ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳ ಹೆಚ್ಚಳದ ಹೊರತಾಗಿಯೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯರ ಸಂಖ್ಯೆಯು ಅಷ್ಟೇ ಇದೆ, ಅದು ಹೆಚ್ಚಳವಾಗಬೇಕಿದೆ ಎಂದು ಹೇಳುವ ಮೂಲಕ ವಿಶ್ವಸಂಸ್ಥೆಯ ಖಾಯಂ ಸದಸ್ಯ ಸ್ಥಾನಕ್ಕೆ ಭಾರತದ ಇಂಗಿತವನ್ನು ಮತ್ತೊಮ್ಮೆ ವಿಶ್ವ ನಾಯಕರ ಮುಂದೆ ತೋರಿಸಿದ್ದಾರೆ. 

ಇಂಜು ಜಿ 20 ಶೃಂಗಸಭೆಯ "ಒಂದು ಭವಿಷ್ಯದ" ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ವಿಶ್ವದ 'ಹೊಸ ವಾಸ್ತವತೆ'ಗಳನ್ನು 'ಹೊಸ ಜಾಗತಿಕ ರಚನೆ'ಯಲ್ಲಿ ಪ್ರತಿಬಿಂಬಿಸಬೇಕು ಎಂದು ಹೇಳಿದರು.

51 ಸದಸ್ಯ ರಾಷ್ಟ್ರಗಳೊಂದಿಗೆ ವಿಶ್ವ ಸಂಸ್ಥೆ ಸ್ಥಾಪನೆಯಾದಾಗ ಜಗತ್ತು ವಿಭಿನ್ನವಾಗಿತ್ತು. ಈಗ ಸದಸ್ಯ ರಾಷ್ಟ್ರಗಳ ಸಂಖ್ಯೆ ಸುಮಾರು 200 ಕ್ಕೆ ಏರಿದೆ, ಇದು ಪ್ರಕೃತಿ ನಿಯಮ ಎಂದು ಮೋದಿ ಹೇಳಿದರು.

ಕಾಲಕ್ಕೆ ತಕ್ಕಂತೆ ಬದಲಾಗದವರು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಾರೆ. ಕ್ರಿಪ್ಟೋ ಕರೆನ್ಸಿಯು ಸಾಮಾಜಿಕ ಕ್ರಮ, ವಿತ್ತೀಯ ಮತ್ತು ಆರ್ಥಿಕ ಸ್ಥಿರತೆಗೆ ಹೊಸ ವಿಷಯವಾಗಿದೆ. ಅದನ್ನು ನಿಯಂತ್ರಿಸಲು ಜಾಗತಿಕ ಮಾನದಂಡಕ್ಕೆ ಹುಡುಕಾಟ ನಡೆಯಿತು ಎಂದರು.

Related Stories

No stories found.

Advertisement

X
Kannada Prabha
www.kannadaprabha.com