G20 ಶೃಂಗಸಭೆ: ಭಾರತದ ಅಧ್ಯಕ್ಷತೆಯಡಿ ವಿವಾದರಹಿತ ಯಶಸ್ಸು

"ಮೋದಿ ಕಿ ಗ್ಯಾರಂಟಿ" ಮತ್ತು "ಮೋದಿ ಕಾ ಮ್ಯಾಜಿಕ್" ಜಿ 20 ದೆಹಲಿ ನಾಯಕರ ಘೋಷಣೆ ತರಲು ಸಹಾಯ ಮಾಡಿದೆ ಎಂದು ದೆಹಲಿಯಲ್ಲಿ ನಡೆದ 18 ನೇ ಜಿ 20 ಶೃಂಗಸಭೆಯಲ್ಲಿ ಚರ್ಚೆಗೆ ಸಾಕ್ಷಿಯಾದ ಮೂಲಗಳು ಹೇಳುತ್ತವೆ. 
ಜಿ20ಯಲ್ಲಿ ಭಾಗವಹಿಸಿದ ವಿಶ್ವ ನಾಯಕರು
ಜಿ20ಯಲ್ಲಿ ಭಾಗವಹಿಸಿದ ವಿಶ್ವ ನಾಯಕರು

ನವದೆಹಲಿ: "ಮೋದಿ ಕಿ ಗ್ಯಾರಂಟಿ" ಮತ್ತು "ಮೋದಿ ಕಾ ಮ್ಯಾಜಿಕ್" ಜಿ 20 ದೆಹಲಿ ನಾಯಕರ ಘೋಷಣೆ ತರಲು ಸಹಾಯ ಮಾಡಿದೆ ಎಂದು ದೆಹಲಿಯಲ್ಲಿ ನಡೆದ 18 ನೇ ಜಿ 20 ಶೃಂಗಸಭೆಯಲ್ಲಿ ಚರ್ಚೆಗೆ ಸಾಕ್ಷಿಯಾದ ಮೂಲಗಳು ಹೇಳುತ್ತವೆ. 

ವಿವಾದಾತ್ಮಕ ಉಕ್ರೇನ್ ಘರ್ಷಣೆಯ ಕುರಿತು ಜಿ20 ದೇಶಗಳ ನಡುವೆ ಭಾರತವು ತೀವ್ರವಾದ ಮಾತುಕತೆಗಳ ಮೂಲಕ ಒಮ್ಮತ ಮೂಡಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಒಮ್ಮತದ ದಾಖಲೆಯು 10 ವಿಶಾಲ ವಿಷಯಗಳು ಮತ್ತು 37 ಉಪ ವಿಷಯಗಳನ್ನು ಒಳಗೊಂಡಿದ್ದವು. ಇವುಗಳಲ್ಲಿ ಬಹುತೇಕವನ್ನು ಜಿ20 ರಾಷ್ಟ್ರಗಳ ನಾಯಕರು ಒಪ್ಪಿಕೊಂಡಿದ್ದಾರೆ.

ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ "ಒಮ್ಮುಖ ಒಮ್ಮತಕ್ಕೆ ಜಿ20 ನಾಯಕರು ಬಂದಿದ್ದು, ವಿಭಜಕ ಸಹಮತವಲ್ಲ ಎಂದು ಮೂಲಗಳು ಹೇಳಿದ್ದು, ಪ್ರಧಾನಮಂತ್ರಿಯವರು “ಪ್ರಜಾಪ್ರಭುತ್ವದ ಮೌಲ್ಯಗಳ ಜಂಕ್ಷನ್ ಬಾಕ್ಸ್” ಎಂದು ಕರೆಯಲಾಗಿದೆ.

ಬಾಲಿ ಘೋಷಣೆಯೊಂದಿಗೆ ಯಾವುದೇ ಹೋಲಿಕೆ ಮಾಡಲು ನಿರಾಕರಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ನಿನ್ನೆ ಮಾಧ್ಯಮ ಗೋಷ್ಠಿಯಲ್ಲಿ, ಕಳೆದ ವರ್ಷದ ಬಾಲಿಯ ಶೃಂಗಸಭೆಗೂ ಈ ವರ್ಷದ ದೆಹಲಿ ಶೃಂಗಸಭೆಗೂ ಹೋಲಿಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಜಿ20ಯ ಬಾಲಿ ಶೃಂಗಸಭೆಯಲ್ಲಿ ಹೊರಡಿಸಲಾದ ಘೋಷಣೆಯು ಉಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣವನ್ನು ಪ್ರಬಲವಾಗಿ ಖಂಡಿಸಲಾಗಿತ್ತು. ಹೆಚ್ಚಿನ ಸದಸ್ಯರು ಯುದ್ಧವನ್ನು ಬಲವಾಗಿ ಖಂಡಿಸಿದರು. ದೆಹಲಿಯ ಘೋಷಣೆಯು ಈ ಸೂತ್ರಗಳನ್ನು ಒಳಗೊಂಡಿಲ್ಲ. ಏತನ್ಮಧ್ಯೆ, ರಷ್ಯಾ ಈ ಘೋಷಣೆಯಿಂದ ಸಂತೋಷವಾಗಿದೆ.

“ಶೃಂಗಸಭೆಯು ಭಾರತದ ಅಧ್ಯಕ್ಷ ಸ್ಥಾನಕ್ಕೆ ಮತ್ತು ನಮಗೆಲ್ಲರಿಗೂ ಬೇಷರತ್ತಾದ ಯಶಸ್ಸು ತಂದುಕೊಟ್ಟಿದೆ. ಜಿ20 ಆಂತರಿಕ ಸುಧಾರಣೆಗೆ ಒಳಗಾಗುತ್ತಿದೆ. ಗ್ಲೋಬಲ್ ಸೌತ್ ನ್ನು ಪ್ರತಿನಿಧಿಸುವ ಜಿ 20 ಸದಸ್ಯರ ಗಮನಾರ್ಹ ಸಕ್ರಿಯಗೊಳಿಸುವಿಕೆಯಲ್ಲಿ ಇದು ಪ್ರತಿಫಲಿಸುತ್ತದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿದರು.

ದೆಹಲಿಯೊಂದಿಗೆ ಮಾಸ್ಕೋದ ಬೆಳೆಯುತ್ತಿರುವ ಆರ್ಥಿಕ ಸಂಬಂಧಗಳ ಬಗ್ಗೆ ಲಾವ್ರೊವ್, SWIFT ಹಣಕಾಸು ವ್ಯವಸ್ಥೆಗೆ ಪರ್ಯಾಯ ಕಾರ್ಯವಿಧಾನವನ್ನು ತರಲು ಉಭಯ ದೇಶಗಳು ಪ್ರಯತ್ನಗಳನ್ನು ಮಾಡುತ್ತಿವೆ. ಉಕ್ರೇನ್‌ನಲ್ಲಿನ ವಿಶ್ವಸಂಸ್ಥೆ ನಿರ್ಣಯಗಳಲ್ಲಿ, ಜಿ20ಯ 16 ಸದಸ್ಯರು ರಷ್ಯಾವನ್ನು ಖಂಡಿಸುವ ಎಲ್ಲಾ ನಿರ್ಣಯಗಳಿಗೆ ಮತ ಹಾಕಿದರು, ಮೂವರು ದೂರವಿದ್ದರೆ, ಒಬ್ಬರು ಅದರ ವಿರುದ್ಧ ಮತ ಚಲಾಯಿಸಿದರು.

ಜಿ 20 ಆರ್ಥಿಕ ಸುಧಾರಣೆಗಳು ಮತ್ತು ಅಭಿವೃದ್ಧಿಯ ಬಗ್ಗೆ ಮಾತನಾಡುವ ವೇದಿಕೆಯಾಗಿದೆ. ಅದನ್ನು ಭೌಗೋಳಿಕ ರಾಜಕೀಯಕ್ಕೆ ಬಳಸಬಾರದು ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯೆಯಾಗಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ. 

ಇದೇ ರೀತಿಯ ಅಭಿಪ್ರಾಯಗಳನ್ನು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ವ್ಯಕ್ತಪಡಿಸಿದ್ದಾರೆ. ದೆಹಲಿ ನಾಯಕರ ಘೋಷಣೆಯ ಕುರಿತು ನಾನು ಪ್ರಧಾನಿ ಮೋದಿಯನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com