ಕೃತಜ್ಞತೆಗಳು, ಆದರೆ... 'ಹೆಮ್ಮೆಪಡುವಂಥದ್ದು ಏನೂ ಇಲ್ಲ': ರಷ್ಯಾ ಯುದ್ಧದ ಕುರಿತು G20 ಹೇಳಿಕೆಗೆ ಉಕ್ರೇನ್ ಖಡಕ್ ಪ್ರತಿಕ್ರಿಯೆ
ತನ್ನ ಮೇಲಿನ ರಷ್ಯಾದ ಆಕ್ರಮಣದ ಕುರಿತು ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಕೈಗೊಂಡ ನಿರ್ಣಯದ ಕುರಿತು ಜಿ20 ರಾಷ್ಟ್ರಗಳಿಗೆ ಉಕ್ರೇನ್ ಕೃತಜ್ಞತೆ ಸಲ್ಲಿಸಿದೆಯಾದರೂ ಹೆಮ್ಮೆಪಡಲು ಏನೂ ಇಲ್ಲ ಎಂದು ಹೇಳುವ ಮೂಲಕ ತನ್ನ ಬೆಂಬಲಕ್ಕೆ ನಿಲ್ಲದ ರಾಷ್ಟ್ರಗಳಿಗೆ ನೇರವಾಗಿಯೇ ತಿವಿದಿದೆ.
Published: 09th September 2023 08:29 PM | Last Updated: 09th September 2023 08:41 PM | A+A A-

ಜಿ20 ಶೃಂಗಸಭೆ ಜಂಟಿ ಹೇಳಿಕೆ ಉಕ್ರೇನ್ ಪ್ರತಿಕ್ರಿಯೆ
ನವದೆಹಲಿ: ತನ್ನ ಮೇಲಿನ ರಷ್ಯಾದ ಆಕ್ರಮಣದ ಕುರಿತು ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಕೈಗೊಂಡ ನಿರ್ಣಯದ ಕುರಿತು ಜಿ20 ರಾಷ್ಟ್ರಗಳಿಗೆ ಉಕ್ರೇನ್ ಕೃತಜ್ಞತೆ ಸಲ್ಲಿಸಿದೆಯಾದರೂ ಹೆಮ್ಮೆಪಡಲು ಏನೂ ಇಲ್ಲ ಎಂದು ಹೇಳುವ ಮೂಲಕ ತನ್ನ ಬೆಂಬಲಕ್ಕೆ ನಿಲ್ಲದ ರಾಷ್ಟ್ರಗಳಿಗೆ ನೇರವಾಗಿಯೇ ತಿವಿದಿದೆ.
ಹೌದು.. ರಷ್ಯಾದ ಆಕ್ರಮಣದ ಕುರಿತು G20 ನಾಯಕರ ಹೇಳಿಕೆಯನ್ನು ಉಕ್ರೇನ್ ಸ್ವಾಗತಿಸಿದೆಯಾದರೂ, ತನ್ನ ಹೇಳಿಕೆಯಲ್ಲಿ ಎಲ್ಲಿಯೂ ರಷ್ಯಾ ವಿರುದ್ಧ ನೇರ ಟೀಕೆ ಮಾಡದ ಜಿ20 ರಾಷ್ಚ್ರಗಳ ನಡೆಯನ್ನು ಕಟುವಾಗಿ ಟೀಕಿಸಿದೆ.
ಅತ್ತ ಜಿ20 ನಾಯಕರಿಂದ ಜಂಟಿ ಹೇಳಿಕೆ ಬಿಡುಗಡೆಯಾಗುತ್ತಲೇ ಅತ್ತ ಉಕ್ರೇನ್ ರಾಜಧಾನಿ ಕೀವ್ ನಿಂದ ಉಕ್ರೇನಿಯನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, "ಪಠ್ಯದಲ್ಲಿ ಬಲವಾದ ಪದಗಳನ್ನು ಸೇರಿಸಲು ಪ್ರಯತ್ನಿಸಿದ ಪಾಲುದಾರರಿಗೆ ಉಕ್ರೇನ್ ಕೃತಜ್ಞರಾಗಿರಬೇಕು. ಅದೇ ಸಮಯದಲ್ಲಿ, ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣಶೀಲತೆಯ ವಿಷಯದಲ್ಲಿ, ಜಿ20 ರ ಗುಂಪಿನ ರಾಷ್ಟ್ರಗಳ ಬಗ್ಗೆ ಹೆಮ್ಮೆಪಡಲು ಏನೂ ಇಲ್ಲ" ಎಂದು ಟೀಕಿಸಿದೆ.
G20 adopted a final declaration. We are grateful to the partners who tried to include strong wording in the text. However, in terms of Russia's aggression against Ukraine, G20 has nothing to be proud of. This is how the main elements of the text could look to be closer to reality pic.twitter.com/qZqYluVKKS
— Oleg Nikolenko (@OlegNikolenko_) September 9, 2023
ಈ ಕುರಿತು ಮಾತನಾಡಿರುವ ಉಕ್ರೇನ್ ವಿದೇಶಾಂಗ ಸಚಿವ ಒಲೆಗ್ ನಿಕೊಲೆಂಕೊ ಅವರು, ತಮ್ಮ ಹೇಳಿಕೆಯಲ್ಲಿ ಎಲ್ಲಿಯೂ ರಷ್ಯಾ ಪದ ಬಳಕೆ ಮಾಡದ ಜಿ20 ರಾಷ್ಟ್ರಗಳನ್ನು ಅವರು ಟೀಕಿಸಿದ್ದಾರೆ. ಮಾತ್ರವಲ್ಲದೇ ತಮ್ಮ ಪ್ರತಿಭಟನಾರ್ಥವಾಗಿ ಜಿ20 ಹೇಳಿಕೆಯ ಪಠ್ಯದ ಪ್ರತಿಯಲ್ಲಿ ಕೆಂಪು ಬಣ್ಣದಲ್ಲಿ ಎಡಿಟ್ ಮಾಡಲಾಗಿದ್ದು, ರಷ್ಯಾ ಹೆಸರು ಹೇಳದೇ ಅವರು, ಆ ದೇಶ ಎಂಬ ಒಕ್ಕಣೆ ಇದ್ದ ಪದಗಳನ್ನು ತೆಗೆದು ಅಲ್ಲಿ ರಷ್ಯಾ, 'ಉಕ್ರೇನ್ ನಲ್ಲಿ ಯುದ್ದ' ಪದಕ್ಕೆ ಬದಲಾಗಿ 'ಉಕ್ರೇನ್ ವಿರುದ್ಧದ ಯುದ್ಧ' ಎಂಬ ಪದಗಳನ್ನು ಸೇರಿಸಿ ಆ ಹೇಳಿಕೆಯ ಫೋಟೋವನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಮಾತ್ರವಲ್ಲದೇ ಜಿ20 ಹೇಳಿಕೆಯಲ್ಲಿ ಎಲ್ಲೆಲ್ಲಿ ರಷ್ಯಾ ಪದ ಹೆಸರಿಸದೇ ಆ ದೇಶವನ್ನು ಇತರೆ ಪದಗಳಿಂದ ಉಲ್ಲೇಖಿಸಿದ್ದರೋ ಅಲ್ಲೆಲ್ಲಾ ಕೆಂಪು ಬಣ್ಣದಲ್ಲಿ ಅಡ್ಡಗೆರೆ ಎಳೆದು ರಷ್ಯಾ ಪದಗಳನ್ನು ಬರೆದಿದ್ದಾರೆ.
ಇದನ್ನೂ ಓದಿ: ಜಿ20 ಶೃಂಗಸಭೆ: 'ನವದೆಹಲಿ ಘೋಷಣೆ' ಕುರಿತು ಸದಸ್ಯ ರಾಷ್ಟ್ರಗಳಲ್ಲಿ ಒಮ್ಮತ- ಪ್ರಧಾನಿ ಮೋದಿ
"ಉಕ್ರೇನ್‌ನ ಭಾಗವಹಿಸುವಿಕೆ (ಸಭೆಯಲ್ಲಿ) ಭಾಗವಹಿಸುವವರಿಗೆ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂಬುದು ಸ್ಪಷ್ಟವಾಗಿದೆ" ಎಂದು ನಿಕೋಲೆಂಕೊ ಹೇಳಿದ್ದಾರೆ.
ಈ ಟ್ವೀಟ್ ಇದೀಗ ಜಗತ್ತಿನಾದ್ಯಂತ ವ್ಯಾಪಕ ವೈರಲ್ ಆಗುತ್ತಿದೆ.
ಇನ್ನು ಜಿ20 ನಾಯಕ ಹೇಳಿಕೆಯಲ್ಲಿ "ಎಲ್ಲಾ ದೇಶಗಳು" "ಯಾವುದೇ ರಾಜ್ಯದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಪ್ರಾದೇಶಿಕ ಸ್ವಾಧೀನಪಡಿಸಿಕೊಳ್ಳಲು ಬೆದರಿಕೆ ಅಥವಾ ಬಲದ ಬಳಕೆಯಿಂದ ದೂರವಿರಬೇಕು" ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಕಳೆದ ವರ್ಷ ಬಾಲಿಯಲ್ಲಿ ನಡೆದ G20 ಹೇಳಿಕೆಯಂತೆ ರಷ್ಯಾದ ಬಗ್ಗೆ ಯಾವುದೇ ಸ್ಪಷ್ಟ ಉಲ್ಲೇಖವಿರಲಿಲ್ಲ, ಅದು "ಉಕ್ರೇನ್ ವಿರುದ್ಧ ರಷ್ಯಾದ ಒಕ್ಕೂಟದ ಆಕ್ರಮಣವನ್ನು ಪ್ರಬಲ ಪದಗಳಲ್ಲಿ" ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯವನ್ನು ಮಾತ್ರ ಉಲ್ಲೇಖಿಸಿತ್ತು.
ಇದನ್ನೂ ಓದಿ: G20 ಶೃಂಗಸಭೆ: ರಷ್ಯಾ ಉಲ್ಲೇಖಿಸಿ ಭೂಪ್ರದೇಶ ಸ್ವಾಧೀನಕ್ಕೆ ಬಲ ಪ್ರಯೋಗ ತಿರಸ್ಕರಿಸಿದ ದೆಹಲಿ ಘೋಷಣೆ
ಅಂತೆಯೇ ಯುರೋಪಿಯನ್ ರಾಷ್ಟ್ರಗಳು ಮತ್ತು ಅಮೆರಿಕ G20 ವಿಶ್ವಾದ್ಯಂತ ಆಹಾರ ಮತ್ತು ಇಂಧನ ಬೆಲೆ ಏರಿಕೆಗೆ ಕಾರಣವಾದ ಯುದ್ಧದ ಹಿಂದಿನ ಖಂಡನೆಯನ್ನು ತಗ್ಗಿಸದಂತೆ ಒತ್ತಾಯಿಸಿದವು.
ಆದರೆ ಹೇಳಿಕೆಯ ಮೇಲಿನ ಒಪ್ಪಂದದ ನಂತರ, ಶ್ವೇತಭವನದ ಉನ್ನತ ಅಧಿಕಾರಿಯೊಬ್ಬರು ವಾಷಿಂಗ್ಟನ್ ಫಲಿತಾಂಶದಿಂದ ಸಂತೋಷವಾಗಿದೆ ಎಂದು ಹೇಳಿದರು. "ನಮ್ಮ ದೃಷ್ಟಿಕೋನದಿಂದ, ಇದು ಉತ್ತಮ ಕೆಲಸ ಮಾಡುತ್ತದೆ" ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: ಜಾಗತಿಕ ವಿಶ್ವಾಸ ಕೊರತೆ ನಿವಾರಣೆಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಬದಲಾವಣೆಯ ಮಂತ್ರವಾಗಬಹುದು: ಪ್ರಧಾನಿ ಮೋದಿ
G20 ಹೇಳಿಕೆಯು "ರಾಜ್ಯಗಳು ಪ್ರಾದೇಶಿಕ ಸ್ವಾಧೀನವನ್ನು ಪಡೆಯಲು ಅಥವಾ ಇತರ ರಾಜ್ಯಗಳ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ಅಥವಾ ರಾಜಕೀಯ ಸ್ವಾತಂತ್ರ್ಯವನ್ನು ಉಲ್ಲಂಘಿಸಲು ಬಲವನ್ನು ಬಳಸುವಂತಿಲ್ಲ ಎಂಬ ತತ್ವಕ್ಕಾಗಿ" ನಿಂತಿದೆ. ಸಂಘರ್ಷವು ಪರಮಾಣು ದಾಳಿ ಭೀತಿಯನ್ನು ಪುಟಿನ್ ಪುನರಾವರ್ತಿತವಾಗಿ ಹೆಚ್ಚಿಸುವುದರೊಂದಿಗೆ, "ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ಸ್ವೀಕಾರಾರ್ಹವಲ್ಲ" ಎಂಬ G20 ಒಪ್ಪಂದವನ್ನು ಸಹ ಸುಲ್ಲಿವಾನ್ ಸೂಚಿಸಿದರು.