ಸೆಪ್ಟೆಂಬರ್ 14 ರಿಂದ 16 ವರೆಗೆ ಆರ್ ಎಸ್ಎಸ್ ಅಖಿಲ ಭಾರತೀಯ ಸಮನ್ವಯ ಬೈಠಕ್:  ಧರ್ಮ, ದೇಶ, ಸಂಸ್ಕೃತಿ ಬಗ್ಗೆ ಚರ್ಚೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್)  ಸೆ.14 ರಿಂದ 16 ವರೆಗೆ ಅಖಿಲ ಭಾರತೀಯ ಸಮನ್ವಯ ಬೈಠಕ್ ನಡೆಸಲಿದ್ದು,  ಸಂಘ ಪರಿವಾರದ ಸಂಘಟನೆಗಳೂ ಸಹ ಇದರಲ್ಲಿ ಭಾಗಿಯಾಗಲಿವೆ. 
ಆರ್ ಎಸ್ಎಸ್ ಮುಖ್ಯಸ್ಥ ಭಾಗ್ವತ್
ಆರ್ ಎಸ್ಎಸ್ ಮುಖ್ಯಸ್ಥ ಭಾಗ್ವತ್

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್)  ಸೆ.14 ರಿಂದ 16 ವರೆಗೆ ಅಖಿಲ ಭಾರತೀಯ ಸಮನ್ವಯ ಬೈಠಕ್ ನಡೆಸಲಿದ್ದು,  ಸಂಘ ಪರಿವಾರದ ಸಂಘಟನೆಗಳೂ ಸಹ ಇದರಲ್ಲಿ ಭಾಗಿಯಾಗಲಿವೆ. 

ಮಹಾರಾಷ್ಟ್ರದ ಪುಣೆಯಲ್ಲಿ ಈ ಬೈಠಕ್ ಆಯೋಜನೆಯಾಗಿದ್ದು, ದೇಶ, ಧರ್ಮ ಹಾಗೂ ಸಂಸ್ಕೃತಿ ಎದುರಿಸುತ್ತಿರುವ ಪ್ರಸ್ತುತ ವಿಷಯಗಳನ್ನು ಚರ್ಚಿಸಲಾಗುತ್ತದೆ. 

ಸರಸಂಘಚಾಲಕ್ ಡಾ. ಮೋಹನ್ ಭಾಗ್ವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಇತರ ಸಹ ಸರಕಾರ್ಯವಾಹರುಗಳ ನಾಯಕತ್ವದಲ್ಲಿ ಈ ಬೈಠಕ್ ನಡೆಯಲಿದೆ.  ಸಂಘದ ಇತರ ಪ್ರಮುಖ ಅಧಿಕಾರಿಗಳು ಹಾಗೂ ಸಂಘದಿಂದ ಪ್ರೇರಣೆ ಪಡೆದಿರುವ ಒಟ್ಟು 36 ಸಂಘಟನೆಗಳ ಪ್ರತಿನಿಧಿಗಳು ಈ ಬೈಠಕ್ ಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಆರ್ ಎಸ್ಎಸ್ ನ ವಾರ್ಷಿಕ ಸಮನ್ವಯ ಬೈಠಕ್ ನಲ್ಲಿ ಭಾಗಿಯಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com