ಕೇರಳದಲ್ಲಿ ನಿಫಾ ವೈರಸ್ ನಿಂದ ಇಬ್ಬರ ಸಾವು: ಕೇಂದ್ರ ಆರೋಗ್ಯ ಸಚಿವ

ಕೇರಳದ ಕೊಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ದೃಢಪಡಿಸಿದ್ದಾರೆ. 
ಕೇರಳದಲ್ಲಿ ನಿಫಾ ವೈರಸ್
ಕೇರಳದಲ್ಲಿ ನಿಫಾ ವೈರಸ್

ಕೋಯಿಕ್ಕೋಡ್: ಕೇರಳದ ಕೊಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ದೃಢಪಡಿಸಿದ್ದಾರೆ. 

ನಿಫಾ ವೈರಾಣು ಮತ್ತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳಕ್ಕೆ ತಜ್ಞರ ತಂಡವನ್ನು ಕೇಂದ್ರದಿಂದ ಕಳಿಸಲಾಗಿದ್ದು ಈ ತಂಡ ಕೇರಳ ಸರ್ಕಾರಕ್ಕೆ ವೈರಾಣು ನಿಯಂತ್ರಣದಲ್ಲಿ ಸಹಾಯ ಮಾಡಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 

"ಕೋಝಿಕ್ಕೋಡ್‌ನಲ್ಲಿ ವರದಿಯಾದ ಎರಡು ಸಾವುಗಳು ನಿಪಾ ವೈರಸ್‌ನಿಂದ ಸಂಭವಿಸಿವೆ ಎಂದು ದೃಢಪಡಿಸಲಾಗಿದೆ" ಎಂದು ಮಾಂಡವಿಯಾ ಸುದ್ದಿಗಾರರಿಗೆ ತಿಳಿಸಿದರು. ನಮ್ಮ ತಜ್ಞರ ತಂಡ ಕೇರಳ ತಲುಪಿದೆ ಎಂದು ಮಾಹಿತಿ ನೀಡಿದ್ದಾರೆ.

ಕೇರಳದಲ್ಲಿನ ಸ್ಥಿತಿಗತಿಗಳ ಬಗ್ಗೆ ಅಲ್ಲಿನ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ಅವರಿಂದ ಮಾಹಿತಿ ಪಡೆಯಲಾಗಿದೆ ಎಂದು ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.

ಕೇರಳದಿಂದ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ಝೂನೋಟಿಕ್ ವೈರಸ್ ನಿಫಾ ವೈರಸ್ ಸೋಂಕಿಗೆ ಒಳಗಾಗಿರುವ ಶಂಕಿತ ಇನ್ನೂ ನಾಲ್ವರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (ಎನ್‌ಐವಿ) ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com