ಹಿಂದಿ ಭಾಷೆ ತಮಿಳುನಾಡು ಮತ್ತು ಕೇರಳವನ್ನು ಹೇಗೆ ಒಂದುಗೂಡಿಸುತ್ತೆ?: ಅಮಿತ್ ಶಾಗೆ ಉದಯನಿಧಿ ಪ್ರಶ್ನೆ

ಕೇವಲ ನಾಲ್ಕೈದು ರಾಜ್ಯಗಳಲ್ಲಿ ಮಾತನಾಡುವ ಹಿಂದಿ ಇಡೀ ಭಾರತವನ್ನು ಒಂದುಗೂಡಿಸುತ್ತದೆ ಎಂದು ಹೇಳುವುದು "ಅಸಂಬದ್ಧ" ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಗುರುವಾರ...
ಉದಯನಿಧಿ ಸ್ಟಾಲಿನ್
ಉದಯನಿಧಿ ಸ್ಟಾಲಿನ್

ಚೆನ್ನೈ: ಕೇವಲ ನಾಲ್ಕೈದು ರಾಜ್ಯಗಳಲ್ಲಿ ಮಾತನಾಡುವ ಹಿಂದಿ ಇಡೀ ಭಾರತವನ್ನು ಒಂದುಗೂಡಿಸುತ್ತದೆ ಎಂದು ಹೇಳುವುದು "ಅಸಂಬದ್ಧ" ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಗುರುವಾರ ತಿರುಗೇಟು ನೀಡಿದ್ದಾರೆ.

ಕೇಂದ್ರ ಸಚಿವರು ಎಂದಿನಂತೆ "ಹಿಂದಿ ಮಾತ್ರ ಜನರನ್ನು ಒಗ್ಗೂಡಿಸುತ್ತದೆ ಮತ್ತು ಪ್ರಾದೇಶಿಕ ಭಾಷೆಗಳನ್ನು ಸಬಲೀಕರಣಗೊಳಿಸುತ್ತದೆ" ಎಂದು ಹೇಳುವ ಮೂಲಕ ಹಿಂದಿ ಮೇಲಿನ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

"ಈ ದೃಷ್ಟಿಕೋನವು ಹಿಂದಿಯ ಕೂಗಿಗೆ ಪರ್ಯಾಯ ಮಾರ್ಗವಾಗಿದೆ; ಅದನ್ನು ಕಲಿತರೆ, ಒಬ್ಬ ವ್ಯಕ್ತಿ ಮಾತ್ರ ಅಭಿವೃದ್ಧಿ ಹೊಂದಬಹುದು" ಎಂದು ತಮಿಳುನಾಡು ಸಚಿವರು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ತಮಿಳಿನಲ್ಲಿ ಪೋಸ್ಟ್ ಮಾಡಿದ್ದಾರೆ.

"ತಮಿಳುನಾಡಿನಲ್ಲಿ ತಮಿಳು ಮತ್ತು ನೆರೆಯ ಕೇರಳದಲ್ಲಿ ಮಲಯಾಳಂ ಮಾತೃ ಭಾಷೆ ಇದೆ. ಹಿಂದಿ ಈ ಎರಡು ರಾಜ್ಯಗಳನ್ನು ಹೇಗೆ ಒಂದುಗೂಡಿಸುತ್ತದೆ? ಅದು ಹೇಗೆ ಈ ಭಾಷೆಗಳನ್ನು ಸಬಲೀಕರಣ ಮಾಡುತ್ತದೆ?" ಎಂದು ಉದಯನಿಧಿ ಅವರು ಕೇಂದ್ರ ಗೃಹ ಸಚಿವರನ್ನು ಪ್ರಶ್ನಿಸಿದ್ದಾರೆ.

ಹಿಂದಿಯೇತರ ಭಾಷೆಗಳನ್ನು ಪ್ರಾಂತೀಯ ಭಾಷೆಗಳ ಸ್ಥಾನಮಾನಕ್ಕೆ ಇಳಿಸಿ ಅವಮಾನಿಸುವುದನ್ನು ಅಮಿತ್ ಶಾ ನಿಲ್ಲಿಸಬೇಕು ಎಂದು ಉದಯನಿಧಿ ಅವರು ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿನ ವೈವಿಧ್ಯಮಯ ಭಾಷೆಗಳನ್ನು ಹಿಂದಿ ಒಂದುಗೂಡಿಸುತ್ತದೆ ಮತ್ತು ಅದು ವಿವಿಧ ಭಾರತೀಯ ಮತ್ತು ಜಾಗತಿಕ ಭಾಷೆಗಳು ಹಾಗೂ ಉಪಭಾಷೆಗಳನ್ನು ಗೌರವಿಸಿದೆ ಎಂದು ಕೇಂದ್ರ ಗೃಹ ಸಚಿವರು ಗುರುವಾರ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com