ವಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಶಕ್ತಿಯು ಬಿಜೆಪಿಯ ಬುಡವನ್ನು ಅಲ್ಲಾಡಿಸಿದೆ: ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ತಮ್ಮನ್ನು ಗಂಟೆಗಳ ಕಾಲ ಪ್ರಶ್ನಿಸಿದ ಒಂದು ದಿನದ ನಂತರ, ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ 'ಭಯ'ವು ಬಿಜೆಪಿಯ ಅಡಿಪಾಯವನ್ನು ಅಲ್ಲಾಡಿಸಿದೆ ಎಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಗುರುವಾರ ಪ್ರತಿಪಾದಿಸಿದ್ದಾರೆ.
ಅಭಿಷೇಕ್ ಬ್ಯಾನರ್ಜಿ
ಅಭಿಷೇಕ್ ಬ್ಯಾನರ್ಜಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ತಮ್ಮನ್ನು ಗಂಟೆಗಳ ಕಾಲ ಪ್ರಶ್ನಿಸಿದ ಒಂದು ದಿನದ ನಂತರ, ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ 'ಭಯ'ವು ಬಿಜೆಪಿಯ ಅಡಿಪಾಯವನ್ನು ಅಲ್ಲಾಡಿಸಿದೆ ಎಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಗುರುವಾರ ಪ್ರತಿಪಾದಿಸಿದ್ದಾರೆ.

'ಬಿಜೆಪಿ ಭಯದಲ್ಲಿದೆ ಮತ್ತು ಎನ್‌ಡಿಎ ಹೆದರುತ್ತಿದೆ. ಭಯದ ನಡುಕ ಅವರ ಅಡಿಪಾಯವನ್ನು ಅಲ್ಲಾಡಿಸುತ್ತಿರುವ. ಈ ಚಮತ್ಕಾರವನ್ನು ನೋಡಿ! ಇದುವೇ ಇಂಡಿಯಾದ ಶಕ್ತಿ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇಂಡಿಯಾ ಮೈತ್ರಿಕೂಟದ ಸಮನ್ವಯ ಸಮಿತಿ ಸಭೆಗೆ ಹಾಜರಾಗುವುದನ್ನು ತಡೆಯಲೆಂದೇ ತನ್ನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದರು ಬುಧವಾರ ಹೇಳಿಕೊಂಡಿದ್ದರು.

ಜಾರಿ ನಿರ್ದೇಶನಲಾಯದ ಈ ಕ್ರಮವು ಪ್ರತಿಪಕ್ಷಗಳ ಏಕತೆಯನ್ನು ರೂಪಿಸುವಲ್ಲಿ ಟಿಎಂಸಿ ವಹಿಸುತ್ತಿರುವ 'ಪ್ರಮುಖ ಪಾತ್ರ'ಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

'ಜಾರಿ ನಿರ್ದೇಶನಾಲಯ (ಇ.ಡಿ) ತನ್ನ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದೆ. ಆದರೆ, ನಾನು ಅದನ್ನು ದೂಷಿಸುವುದಿಲ್ಲ. ತನಿಖಾ ಸಂಸ್ಥೆಯ ಅಧಿಕಾರಿಗಳು ತಮ್ಮ ರಾಜಕೀಯ ಯಜಮಾನರನ್ನು ಮೆಚ್ಚಿಸಲು ಈ ರೀತಿ ಮಾಡುತ್ತಿದ್ದಾರೆ. ಅವರು ನಿರಂತರವಾಗಿ 72 ಗಂಟೆಗಳ ಕಾಲ ನನ್ನನ್ನು ಪ್ರಶ್ನಿಸಿದರೂ, ನಾನು ನನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ ಏಕೆಂದರೆ ಮುಚ್ಚಿಡಲು ನನ್ನ ಬಳಿ ಏನೂ ಇಲ್ಲ' ಎಂದು ಬ್ಯಾನರ್ಜಿ ಇಲ್ಲಿ ಸತತ ಒಂಬತ್ತು ಗಂಟೆಗಳ ವಿಚಾರಣೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com