ಮುಂಬೈ ಜೆಟ್ ಸ್ಕಿಡ್: ಬೆನ್ನುಮೂಳೆ ಗಾಯ, ಸಹ-ಪೈಲಟ್ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರ!

ಮುಂಬೈ ವಿಮಾನ ನಿಲ್ದಾಣದಲ್ಲಿ ಗುರುವಾರ ಖಾಸಗಿ ವಿಮಾನವೊಂದು ಲ್ಯಾಂಡ್ ಆಗುವ ಹಂತದಲ್ಲಿ ರನ್‌ವೇಯಿಂದ ಸ್ಕೀಡ್ ಆದ ಪರಿಣಾಮ ಬೆನ್ನು ಮೂಳೆ ಗಾಯಗೊಂಡಿರುವ ಸಹ ಪೈಲಟ್ ನನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕ್ರಿಟಿಕೇರ್ ಏಷ್ಯಾ ಆಸ್ಪತ್ರೆಯ ನಿರ್ದೇಶಕ ಡಾ.ದೀಪಕ್ ನಾಮಜೋಶಿ ಶುಕ್ರವಾರ ತಿಳಿಸಿದ್ದಾರೆ.  
ಖಾಸಗಿ ವಿಮಾನ
ಖಾಸಗಿ ವಿಮಾನ

ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಗುರುವಾರ ಖಾಸಗಿ ವಿಮಾನವೊಂದು ಲ್ಯಾಂಡ್ ಆಗುವ ಹಂತದಲ್ಲಿ ರನ್‌ವೇಯಿಂದ ಸ್ಕೀಡ್ ಆದ ಪರಿಣಾಮ ಬೆನ್ನು ಮೂಳೆ ಗಾಯಗೊಂಡಿರುವ ಸಹ ಪೈಲಟ್ ನನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕ್ರಿಟಿಕೇರ್ ಏಷ್ಯಾ ಆಸ್ಪತ್ರೆಯ ನಿರ್ದೇಶಕ ಡಾ.ದೀಪಕ್ ನಾಮಜೋಶಿ ಶುಕ್ರವಾರ ತಿಳಿಸಿದ್ದಾರೆ.  

ಘಟನೆಯಲ್ಲಿ ಗಾಯಗೊಂಡು ಪೂರ್ವ ಅಂಧೇರಿಯಲ್ಲಿರುವ ಕ್ರಿಟಿಕೇರ್ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ಏಳು ಮಂದಿಯ ಆರೋಗ್ಯ ಆರೋಗ್ಯ ಸ್ಥಿರವಾಗಿದ್ದು, ನಿಗಾ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಭಾರೀ ಮಳೆಯ ನಡುವೆ ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದ ವಿಎಸ್ ಆರ್ ವೆಂಚರ್ಸ್ ಗೆ ಸೇರಿದ ಲಿಯರ್‌ಜೆಟ್ 45 ವಿಮಾನ ರನ್ ವೇಯಿಂದ ಸ್ಕೀಡ್ ಆಗಿತ್ತು. ಇದು ವಿಶಾಖಪಟ್ಟಣಂನಿಂದ  ಹಾರಾಟ ನಡೆಸಿತ್ತು.  ಘಟನೆಯಲ್ಲಿ ಸಹ ಪೈಲಟ್  ನೀಲ್ ದಿವಾನ್ ಬೆನ್ನುಮೂಳೆ ಮುರಿದಿದ್ದು, ಅವರನ್ನು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ನಾಮಜೋಶಿ ಹೇಳಿದರು.

ಉಳಿದಂತೆ ವಿಮಾನದ ಕ್ಯಾಪ್ಟನ್ ಸುನಿಲ್ ಕಂಜರಭಟ್ (46) ಎದೆಯ ಗೋಡೆ ಮತ್ತು ಬೆನ್ನುಮೂಳೆಗೆ ಗಾಯವಾಗಿದೆ. ಪ್ರಯಾಣಿಕ ಧ್ರುವ್ ಕೋಟಕ್ (40) ಅವರ ತಲೆಯ ಮೇಲೆ ಸಣ್ಣ ಗಾಯದೊಂದಿಗೆ ಬಲಗೈಗೂ ಪೆಟ್ಟಾಗಿದೆ. ಅವರ ಎಲ್ಲಾ ಅಂಗಾಂಗಳು ಸ್ಥಿರವಾಗಿವೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com