ಪ್ರಧಾನಿಯಾಗಲು ರಾಹುಲ್ ಸೂರ್ಯ, ಚಂದ್ರನ ಅಂಗಳಕ್ಕೆ ಪ್ರಯಾಣಿಸಬೇಕು: ಅಸ್ಸಾಂ ಸಿಎಂ ವ್ಯಂಗ್ಯ

ಪ್ರಧಾನಮಂತ್ರಿಯಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸೂರ್ಯ, ಚಂದ್ರನ ಅಂಗಳಕ್ಕೆ ಪ್ರಯಾಣಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.

ಪಾಟ್ನ: ಪ್ರಧಾನಮಂತ್ರಿಯಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸೂರ್ಯ, ಚಂದ್ರನ ಅಂಗಳಕ್ಕೆ ಪ್ರಯಾಣಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ವ್ಯಂಗ್ಯವಾಡಿದ್ದಾರೆ.

ಬಿಹಾರದ ನಲಂದ ಜಿಲ್ಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ವಿರೋಧ ಪಕ್ಷಗಳ ನಾಯಕರು ಚಂದ್ರಯಾನ ಯೋಜನೆಯನ್ನು ಗೇಲಿ ಮಾಡಿದರು. ಇಸ್ರೊದ ವಿಜ್ಞಾನಿಗಳು ಮತ್ತೊಂದು ಚಂದ್ರಯಾನ ಹಮ್ಮಿಕೊಂಡು ವಿರೋಧ ಪಕ್ಷಗಳ ಇಂಡಿಯಾದ ನಾಯಕರನ್ನು ಚಂದ್ರನಲ್ಲಿ ಬಿಡುವಂತೆ ನಾನು ವಿನಂತಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಸೂಚನೆ ಮೇರೆಗೆ ವಿರೋಧ ಪಕ್ಷಗಳ ನಾಯಕರು ಸನಾತನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. 2024ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಅಷ್ಟಕ್ಕೂ ಪ್ರಧಾನಿಯಾಗಲು ರಾಹುಲ್ ಬಯಸಿದ್ದರೆ ಸೂರ್ಯ ಅಥವಾ ಚಂದ್ರನಲ್ಲಿಗೆ ತೆರಳಬೇಕು ಎಂದು ವ್ಯಂಗ್ಯವಾಡಿದರು.

ಮುಂಬೈಯಲ್ಲಿ ಇಂಡಿಯಾದ ಸಭೆ ನಡೆದಿದ್ದಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಚಂದ್ರನಲ್ಲಿಗೆ ಕಳುಹಿಸುವಂತೆ ಇಸ್ರೊ ವಿಜ್ಞಾನಿಗಳಿಗೆ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಕರೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com