ವಿಶೇಷ ಅಧಿವೇಶನ: ಉಭಯ ಸದನಗಳು ಮುಂದೂಡಿಕೆ; ನಾಳೆ ಹೊಸ ಸಂಸತ್ ಭವನದಲ್ಲಿ ಕಲಾಪ ಮುಂದುವರಿಕೆ

ಸಂಸತ್ ನ ಸುಧೀರ್ಘ 75 ವರ್ಷಗಳ ಪಯಣ ಕುರಿತ ಚರ್ಚೆಯ ನಂತರ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಮಂಗಳವಾರ ಮಧ್ಯಾಹ್ನ ಹೊಸ ಸಂಸತ್ ಭವನದಲ್ಲಿ ಮತ್ತೆ ಕಲಾಪ ಪುನರ್ ಆರಂಭವಾಗಲಿದೆ. 
ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ
ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ
Updated on

ನವದೆಹಲಿ: ಸಂಸತ್ ನ ಸುಧೀರ್ಘ 75 ವರ್ಷಗಳ ಪಯಣ ಕುರಿತ ಚರ್ಚೆಯ ನಂತರ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಮಂಗಳವಾರ ಮಧ್ಯಾಹ್ನ ಹೊಸ ಸಂಸತ್ ಭವನದಲ್ಲಿ ಮತ್ತೆ ಕಲಾಪ ಪುನರ್ ಆರಂಭವಾಗಲಿದೆ. 

ಹೊಸ ಸಂಸತ್ ಕಟ್ಟಡದ ಮೇಲ್ಮನೆ ಚೇಂಬರ್ ನಲ್ಲಿ ಮಧ್ಯಾಹ್ನ 2:15 ಕ್ಕೆ  ರಾಜ್ಯಸಭೆ ಸಮಾವೇಶಗೊಂಡರೆ, ಕೆಳಮನೆ ಕೊಠಡಿಯಲ್ಲಿ ಮಧ್ಯಾಹ್ನ 1:15 ಕ್ಕೆ ಲೋಕಸಭೆ ಕಲಾಪ ಆರಂಭವಾಗಲಿದೆ. ಸೋಮವಾರ ಉಭಯ ಸದನಗಳಲ್ಲಿ, ಸಂಸದರು "ಸಂವಿಧಾನ ಸಭೆಯಿಂದ ಆರಂಭವಾದ 75 ವರ್ಷಗಳ ಸಂಸತ್ತಿನ ಪಯಣ, ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳ' ಕುರಿತು ಚರ್ಚೆ ನಡೆಸಿದರು.

ಲೋಕಸಭೆಯಲ್ಲಿ ಚರ್ಚೆಯನ್ನು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಸ್ವಾತಂತ್ಯ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ, ಪಿವಿ ನರಸಿಂಹರಾವ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಮತ್ತು ನಂತರದ ನಾಯಕರ ದೂರದೃಷ್ಟಿಯನ್ನು ಶ್ಲಾಘಿಸಿದರು. 

ರಾಷ್ಟ್ರದ ಕಲ್ಯಾಣಕ್ಕಾಗಿ ಸಾಮೂಹಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿರುವುದರಿಂದ ಹಳೆಯ ಸಂಸತ್ತಿನ ಕಟ್ಟಡವು ಭಾರತದ ಪ್ರಜಾಸತ್ತಾತ್ಮಕ ಪ್ರಯಾಣಕ್ಕೆ  ಸಾಟಿಯಿಲ್ಲದ ಕೊಡುಗೆ ನೀಡಿದೆ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಕಲಾಪದ ಆರಂಭದಲ್ಲಿ ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com