ಕೆನಡಾ ಪ್ರಧಾನಿ ಜಸ್ಟಿನ್ ಟ್ರಡೋ ಆರೋಪ ಅಸಂಬದ್ಧ: ಕೆನಡಾದ ಮಾಜಿ ಭಾರತೀಯ ರಾಯಭಾರಿ (ಸಂದರ್ಶನ)

ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ರಾಷ್ಟ್ರದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಆರೋಪವನ್ನು ಅಸಂಬದ್ಧ ಎಂದು ಕೆನಡಾದ ಮಾಜಿ ಭಾರತೀಯ ರಾಯಭಾರಿ ಅಧಿಕಾರಿ ವಿಷ್ಣು ಪ್ರಕಾಶ್ ಅವರು ಹೇಳಿದ್ದಾರೆ.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ವಿಷ್ಣು ಪ್ರಕಾಶ್
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ವಿಷ್ಣು ಪ್ರಕಾಶ್

ನವದೆಹಲಿ: ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ರಾಷ್ಟ್ರದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಆರೋಪವನ್ನು ಅಸಂಬದ್ಧ ಎಂದು ಕೆನಡಾದ ಮಾಜಿ ಭಾರತೀಯ ರಾಯಭಾರಿ ಅಧಿಕಾರಿ ವಿಷ್ಣು ಪ್ರಕಾಶ್ ಅವರು ಹೇಳಿದ್ದಾರೆ.

ಕೆನಡಾ ಆರೋಪ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಆರೋಪದ ಕುರಿತು ಕಿಡಿಕಾರಿದ್ದಾರೆ.

ವಿಷ್ಣು ಪ್ರಕಾಶ್ ಅವರು, ಪ್ರಧಾನಮಂದ್ರಿ ನರೇಂದ್ರ ಮೋದಿ ಅವರು 2015 ರಲ್ಲಿ ಕೆನಡಾಕ್ಕೆ ತಮ್ಮ ಮೊದಲ ಬಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆನಡಾದಲ್ಲಿ ಭಾರತದ ರಾಯಭಾರಿ ಅಧಿಕಾರಿಯಾಗಿದ್ದರು.

ಮೋದಿಯವರ ಈ ಬೇಟಿ ದೊಡ್ಡ ಯಶಸ್ಸು ಗಳಿಸಿತ್ತು ಎಂದು ವಿಷ್ಣು ಪ್ರಕಾಶ್ ಅವರು ಸಂದರ್ಶನದಲ್ಲಿ ಸ್ಮರಿಸಿದ್ದಾರೆ.

ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಭಾರತವೇ ಕಾರಣ ಎಂಬ ಕೆನಡಾದ ಪ್ರಧಾನಿಯವರ ಆರೋಪದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ವಿರುದ್ಧ ಯಾವುದೇ ಪುರಾವೆಗಳಿಲ್ಲದೆ ತೀವ್ರ ಮತ್ತು ಮೂರ್ಖತನದ ಆರೋಪಗಳನ್ನು ಮಾಡಲಾಗಿದೆ. ಇದನ್ನು ನಂಬಲಾಗದ ಹಾಗೂ ಆಘಾತಕಾರಿ ಹೇಳಿಕೆಯಾಗಿದೆ. ಭಾರತ ಈಗಾಗಲೇ ಇದನ್ನು 'ಅಸಂಬದ್ಧ ಮತ್ತು ಪ್ರೇರಿತ' ಎಂದು ತಳ್ಳಿಹಾಕಿದೆ. ಖಲಿಸ್ತಾನಿ ಅಂಶಗಳು ರಾಷ್ಟ್ರದ ರಾಜಕೀಯದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತಿದೆ ಎಂಬುದನ್ನು ಇದು ತೋರಿಸುತ್ತಿದೆ. ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತ್ಯೇಕತಾವಾದಿಗಳು ಭಾರತ-ವಿರೋಧಿ ಚಟುವಟಿಕೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ವ್ಯರ್ಥ ಪ್ರಯತ್ನವನ್ನೂ ಇದು ತೋರಿಸುತ್ತಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಜಿ20 ಶೃಂಗಸಭೆಯಲ್ಲಿ, ಪ್ರಧಾನಿ ಮೋದಿ ಅವರು ಖಲಿಸ್ತಾನಿ ಉಗ್ರವಾದದ ವಿಷಯವನ್ನು ಪ್ರಸ್ತಾಪಿಸಿದ್ದರಿಂದ ಕೆನಡಾ ಟ್ರುಡೊ ಸಿಡಿಮಿಡಿಕೊಂಡಿದ್ದರು. ಈ ವೇಳೆ ವಾಕ್ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡಿದ್ದರಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಳಸಿದೆ ಎಂದು ತೋರಿಸುತ್ತಿದೆ. ಇದೆಲ್ಲ ಎಲ್ಲಿಗೆ ಅಂತ್ಯಗೊಳ್ಳುತ್ತದೆ?
ಕೆನಡಾದ ರಾಜಕೀಯ ಪಕ್ಷಗಳು ವಿಶೇಷವಾಗಿ ಲಿಬರಲ್‌ಗಳು ಏನೂ ತಿಳಿಯದವರನ್ನು ಖಲಿಸ್ತಾನಿ ಅಂಶಗಳ ಚಟುವಟಿಕೆಗಳ ಕಡೆಗೆ ತಿರುಗಿಸುತ್ತಿರುವುದು ದುರದೃಷ್ಟಕರ ಸಂಗತಿ. ಇದು ದಶಕಗಳಿಂದ ನಡೆದುಕೊಂಡು ಬರುತ್ತಿದ್ದು, ದ್ವಿಪಕ್ಷೀಯ ಸಂಬಂಧಗಳ ಮೇಲೆ ಸಹಜವಾಗಿಯೇ ಕರಿನೆರಳು ಬಿದ್ದಿದೆ. ಕೆನಡಾದ ಎಲ್ಲಾ ಹಂತಗಳಲ್ಲಿಯೂ ಈ ವಿಚಾರ ಪದೇ ಪದೇ ಮುಂದೆ ಬರುತ್ತಿದೆ. ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ಭಾರತದ ಬಗ್ಗೆ ದ್ವೇಷವನ್ನು ಉಂಟುಮಾಡಲು ಅಥವಾ ಆ ವಿಷಯಕ್ಕಾಗಿ-ಭಾರತದ ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ನಾಶ ಮಾಡಲು ಸಾಧ್ಯವಿಲ್ಲ ಎಂಬುದು ಟ್ರುಡೋ ಅವರಿಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಅವರು ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದಾರೆ.

ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳ ನಡುವೆ ಶುರುವಾಗಿರುವ ಸಮಸ್ಯೆಗೆ ಯಾವುದೇ ಸಂಭವನೀಯ ಪರಿಹಾರವಿದೆಯೇ?
ಸಿನರ್ಜಿಗಳ ವ್ಯಾಪ್ತಿಯನ್ನು ಗಮನಿಸಿದರೆ ಭಾರತ ಮತ್ತು ಕೆನಡಾ ಒಂದೇ ರೀತಿಯ ಪಾಲುದಾರರಾಗಿದ್ದಾರೆ. ನಮ್ಮ ಆರ್ಥಿಕತೆಗಳು ಒಂದಕ್ಕೊಂದು ಪೂರಕವಾಗಿವೆ. ಕೆನಡಾದ ಪಿಂಚಣಿ ನಿಧಿಗಳು ಭಾರತದಲ್ಲಿ ಸುಮಾರು USD 70 ಬಿಲಿಯನ್ ಹೂಡಿಕೆ ಮಾಡಿವೆ. ನಮ್ಮದು ಪ್ರಜಾಪ್ರಭುತ್ವ ಮತ್ತು ಬಹುಸಂಸ್ಕೃತಿಯ ಸಮಾಜವಾಗಿದೆ. ಕೆನಾಡದಲ್ಲಿರುವ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.5ರಷ್ಟು ಭಾರತೀಯರಿದ್ದಾರೆ. 200,000 ಭಾರತೀಯರು ಕೆನಡಾದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಅದರಂತೆ ಎರಡೂ ರಾಷ್ಟ್ರದವರು ಪರಿಹಾರ ಕಂಡುಕೊಳ್ಳಲು ಬದ್ಧರಾಗಿದ್ದಾರೆ.

ಹಿಂದಿನ ದಿನಗಳನ್ನು ಗಮನಿಸಿದರೆ ಕೆನಡಾದಲ್ಲಿ ಖಾಲಿಸ್ತಾನಿ ಉಗ್ರರಿಗೆ ಬೆಂಬಲ ಯಾವಾಗ ಪ್ರಾರಂಭವಾಯಿತು?
1970 ರ ದಶಕದ ಉತ್ತರಾರ್ಧದಲ್ಲಿ. 1980ರ ದಶಕದ ಆರಂಭದಲ್ಲಿ ಕೆನಡಾದ ಪ್ರಸ್ತುತ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ತಂದೆಯಾದ ಪಿಯರೆ ಟ್ರುಡೊ ಅವರ ಸಮಯದಲ್ಲಿ ಪ್ರಾರಂಭವಾಗಿತ್ತು.

ಪ್ರಧಾನಿ ಮೋದಿಯವರು ಕೆನಡಾಗೆ ಮೊದಲ ಭೇಟಿ ನೀಡಿದಾಗ ನೀವು ಕೆನಡಾಕ್ಕೆ ರಾಯಭಾರಿಯಾಗಿದ್ದಿರಿ. ಆ ಪ್ರವಾಸದಲ್ಲಿ ಏನಾಯಿತು? ರಾಜತಾಂತ್ರಿಕವಾಗಿ ಯಶಸ್ಸು ಎಂದರೇನು?
2015ರಲ್ಲಿ ಮೋದಿಯವರು ಕೆನಡಾಗೆ ಭೇಟಿ ನೀಡಿದ್ದರು. 42 ವರ್ಷಗಳ ಬಳಿಕ ಭಾರತದ ಪ್ರಧಾನಮಂತ್ರಿಗಳೊಬ್ಬರು ಕೆನಡಾಗೆ ಭೇಟಿ ನೀಡಿದ್ದರು. (ಇಂದಿರಾ ಗಾಂಧಿಯವರು ಕೊನೆಯದಾಗಿ ಕೆನಡಾಕ್ಕೆ 1973 ರಲ್ಲಿ ಭೇಟಿ ನೀಡಿದ್ದರು). ಮೋದಿಯವರ ಈ ಭೇಟಿ ಅದ್ಭುತ ಯಶಸ್ಸನ್ನು ಕಂಡಿತ್ತು. ಈ ಭೇಟಿ ಉಭಯ ರಾಷ್ಟ್ರಗಳ ಆರ್ಥಿಕ, ವ್ಯಾಪಾರ, ಭದ್ರತೆ, ರಾಜಕೀಯ ಮತ್ತು ಸಾಂಸ್ಕೃತಿಕ ಸಂಬಂಧಗಳಿಗೆ ಭಾರಿ ಉತ್ತೇಜನವನ್ನು ನೀಡಿತ್ತು. ಆ ಸಮಯದಲ್ಲಿ, ಪ್ರಧಾನ ಮಂತ್ರಿ ಸ್ಟೀಫನ್ ಹಾರ್ಪರ್ "ಕೆನಡಾವು ಭಾರತದ ಏಕತೆ ಮತ್ತು ಸಮಗ್ರತೆಯ ಪರವಾಗಿದೆ ಎಂದು ಸಾರ್ವಜನಿಕವಾಗಿ ಹೇಳಿದ್ದರು.

ಭಾರತ ಮತ್ತು ಕೆನಡಾದ ಸಂಬಂಧ ಸಾಮಾನ್ಯ ಸ್ಥಿತಿಗೆ ಮರಳು ಇರುವ ಸಾಧ್ಯತೆಗಳೇನು? ಶೀಘ್ರದಲ್ಲೇ ಸಮಸ್ಯೆ ಪರಿಹಾರವಾಗುವ ಸಾಧ್ಯತೆ ಇದೆಯೇ?
ಉಭಯ ರಾಷ್ಟ್ರಗಳ ನಡುವಿನ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡರೆ, ಪ್ರಸ್ತುತ ಸಮಸ್ಯೆಗಳು ಬಗೆಹರಿಯದಿದ್ದರೂ, ಮುಂಬರುವ ವರ್ಷಗಳಲ್ಲಿ ಸರಿಹೋಗಲಿದೆ ಎಂಬುದರಲ್ಲಿ ನನಗೆ ಯಾವುದೇ ಸಂಶಯಗಳಿಲ್ಲ.

ಪ್ರಸ್ತುತ ಕೆನಡಾದಲ್ಲಿ ಖಾಲಿಸ್ತಾನಿ ಉಗ್ರವಾದದ ಬೆದರಿಕೆ ಎಷ್ಟು ವ್ಯಾಪಕವಾಗಿದೆ?
ಖಲಿಸ್ತಾನಿ ಅಂಶಗಳು ಕೆನಡಾದಲ್ಲಿರುವ ಸಿಖ್ ವಲಸಿಗರಲ್ಲಿ ಒಂದು ಸಣ್ಣ ಶೇಕಡಾವಾರು ಪ್ರಮಾಣವನ್ನು ಒಳಗೊಂಡಿವೆ. ಆದಾಗ್ಯೂ, ಅವರು ಕೆನಡಾದಲ್ಲಿ ಕೆಲವು ಗುರುದ್ವಾರಗಳನ್ನು ನಿಯಂತ್ರಿಸುತ್ತಿದ್ದಾರೆ. ಇದರಿಂದ ಅವರಿಗೆ ಹಣಕಾಸಿನ ಬೆಂಬಲವನ್ನು ದೊರೆಯುತ್ತಿದೆ. ಕೆಲವರು ಶಾಂತಿಯುತ ಮತ್ತು ಮಧ್ಯಮ ಸಮುದಾಯವನ್ನು ಮೌನವಾಗಿರಿಸಲು ಹಿಂಸೆ ಮತ್ತು ಬಲಾತ್ಕಾರದಲ್ಲಿ ತೊಡಗುತ್ತಿದ್ದಾರೆ. ಕೆನಡಾದ ಹಲವು ರಾಜಕೀಯ ನಾಯಕರು, ಮಂತ್ರಿಗಳು ಮತ್ತು ಸಂಸತ್ತಿನ ಸದಸ್ಯರು ಖಲಿಸ್ತಾನಿ ಪರ ಒಲವನ್ನು ಹೊಂದಿದ್ದಾರೆ.

ಖಲಿಸ್ತಾನಿ ಬೆಂಬಲಿಗರು ಭಾರತದಲ್ಲಿ ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಅದೇ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಖಲಿಸ್ತಾನಿಗಳ ಬೆಂಬಲಿಗರು ರಾಜಕೀಯ ಪಕ್ಷಗಳಿಗೆ ಹಣಕಾಸಿನ ಬೆಂಬಲವನ್ನು ನೀಡುತ್ತಿದ್ದಾರೆಂಬುದು ಆಧಾರರಹಿತವಾದದ್ದು. ಭಾರತಕ್ಕೆ ಹರಿದು ಬರುವ ಹಣವನ್ನು ತಡೆಯಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ.

ಸೆಪ್ಟೆಂಬರ್ ಆರಂಭದಲ್ಲಿ ಕೆನಡಾ ಭಾರತ-ಕೆನಡಾ ಮುಕ್ತ ವ್ಯಾಪಾರ ಒಪ್ಪಂದ (FTA) ಕುರಿತ ಮಾತುಕತೆಗಳನ್ನು ನಿಲ್ಲಿಸಿದೆ ಎಂಬುದು ನಿಮಗೆ ತಿಳಿದಿರಲೇಬೇಕು. ಈ ಬೆಳವಣಿಗೆಯಿಂದ ಯಾರಿಗೆ ಹೆಚ್ಚು ನಷ್ಟವಾಗಲಿದೆ?
ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ವ್ಯಾಪಾರ ವ್ಯವಸ್ಥೆಗಳು ವ್ಯಾಪಾರ ಮತ್ತು ಆರ್ಥಿಕ ಸಂಪರ್ಕಗಳನ್ನು ಗುಣಾತ್ಮಕವಾಗಿ ಹೆಚ್ಚಿಸುತ್ತವೆ. ಭಾರತ ಮತ್ತು ಕೆನಡಾ 2010 ರಿಂದ FTA ಅಥವಾ CEPA (ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ) ಗಾಗಿ ಮಾತುಕತೆ ನಡೆಸುತ್ತಿವೆ. ಆರಂಭಿಕ ಪ್ರಗತಿ ವ್ಯಾಪಾರ ಒಪ್ಪಂದದ (EPTA) ಚರ್ಚೆಗಳು ಇತ್ತೀಚಿನ ತಿಂಗಳುಗಳಲ್ಲಿ ವೇಗವನ್ನು ಪಡೆದುಕೊಂಡಿವೆ. ಕೆನಡಾದ ಮಧ್ಯಸ್ಥಗಾರರೊಂದಿಗೆ ಆಂತರಿಕ ಸಮಾಲೋಚನೆಗಳ ನಡೆಸಲು ಮಾತುಕತೆಗಳನ್ನು ನಿಲ್ಲಿಸಲಾಗಿದೆ. ಒಪ್ಪಂದದ ಮುಕ್ತಾಯಗೊಂಡ ಬಳಿಕ ಎರಡೂ ಕಡೆಯವರು ಲಾಭ ಪಡೆಯುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com