'ಕಾವೇರಿ' ಹೋರಾಟಕ್ಕೆ ನನ್ನ ಸಂಪೂರ್ಣ ಸಹಕಾರವಿದೆ: ಹೆಚ್ ಡಿ ದೇವೇಗೌಡ

ಕಾವೇರಿ ಜಲ ವಿವಾದ ವಿಚಾರದಲ್ಲಿ ಹಿಂದಿನ ರೀತಿಯಲ್ಲಿಯೇ ಇಂದಿಗೂ ಸರ್ಕಾರ ಜೊತೆ ಸಹಕಾರ ನೀಡುತ್ತೇನೆ, ನಾನು ಈಗ ಆ ವಿಷಯ ಪ್ರಸ್ತಾಪ ಮಾಡಲು ಹೋಗುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ

ನವದೆಹಲಿ: ಕಾವೇರಿ ಜಲ ವಿವಾದ ವಿಚಾರದಲ್ಲಿ ಹಿಂದಿನ ರೀತಿಯಲ್ಲಿಯೇ ಇಂದಿಗೂ ಸರ್ಕಾರ ಜೊತೆ ಸಹಕಾರ ನೀಡುತ್ತೇನೆ, ನಮ್ಮ ಪಕ್ಷದ ನಿಲುವನ್ನು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ HD ಕುಮಾರಸ್ವಾಮಿ ವಿಧಾನಸೌಧದಲ್ಲಿ ಸರ್ಕಾರ ಸರ್ವಪಕ್ಷ ಸಭೆ ಕರೆದ ದಿನವೇ ಹೇಳಿದ್ದಾರೆ. ನಾನು ಈಗ ಆ ವಿಷಯ ಪ್ರಸ್ತಾಪ ಮಾಡಲು ಹೋಗುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.

ಇಂದು ದೆಹಲಿಯ ಸಫ್ದರ್ಜಂಗ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ ವಿವಾದದಲ್ಲಿ ನಮ್ಮ ಭಿನ್ನಾಭಿಪ್ರಾಯ ಇಲ್ಲ, ತಮಿಳು ನಾಡು ರೀತಿಯಲ್ಲಿಯೇ ನಮ್ಮ ಸರ್ಕಾರ ಸಮರ್ಥವಾಗಿ ವಾದ ಮಾಡಬೇಕು, ಈ ವಿಷಯದಲ್ಲಿ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.

ಕಾವೇರಿ ನದಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ಬಂದಿರುವುದರಿಂದ ನಾನೇನು ಮಾತನಾಡುವುದಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ನಾನೇನು ಮಾತನಾಡುವುದಿಲ್ಲ ಎಂದು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಇದರ ಬಗ್ಗೆ ಕುಮಾರಸ್ವಾಮಿ ಮಾತನಾಡುತ್ತೇನೆ, ನಾನೇನು ಹೇಳಲ್ಲ ಎಂದರು. 

ಮಹಿಳಾ ಮೀಸಲಾತಿ ಹಾಗೂ ಕಾವೇರಿ ವಿಚಾರವಾಗಿ ಕಲಾಪದಲ್ಲಿ ಮಾತನಾಡಿದ್ದೇನೆ. 1996 ರಲ್ಲಿ ನಾನೇ ಮಹಿಳಾ ಮೀಸಲಾತಿ ಬಿಲ್ ಪ್ರಸ್ತಾಪ ತಂದಿದ್ದೆ. ಕಾವೇರಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಎಂಎಲ್​ಸಿ ಒಬ್ಬರನ್ನು ನನ್ನ ಬಳಿ ಕಳಿಸಿದ್ದರು. ನನ್ನ ಸಹಕಾರ ಇದೆ ಎಂದು ಹೇಳಿದ್ದೆ. ನಾನು ಸಂಸದರ ಸಭೆಯಲ್ಲಿ ಪಾಲ್ಗೊಳ್ಳಲು ಆಗಿಲ್ಲ. ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದರು ಎಂದು ತಿಳಿಸಿದರು.

ಕಾವೇರಿ ವಿಚಾರವಾಗಿ ವಸ್ತುಸ್ಥಿತಿ ಅರಿಯಲು ಬೇರೆ ರಾಜ್ಯದ ಅಧಿಕಾರಗಳನ್ನು ಕಳಿಸುವಂತೆ ರಾಜ್ಯಸಭೆಯಲ್ಲೇ ಸಲಹೆ ನೀಡಿದ್ದೇನೆ. ರಾಜ್ಯಸಭೆಯಲ್ಲಿ ಕಾವೇರಿ ವಿಚಾರದಲ್ಲಿ ನಾನೊಬ್ಬನೆ ಮಾತನಾಡಿದೆ. ಮಲ್ಲಿಕಾರ್ಜುನ ಖರ್ಗೆ ಮಾತನಾಡಲಿಲ್ಲ ಎಂಬ ಪ್ರಶ್ನೆಗೆ ಈ ಬಗ್ಗೆ ನನ್ನ ಬಾಯಲ್ಲಿ ಏನೇನು ಹೇಳಿಸಬೇಡಿ. ಅವರೊಬ್ಬರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಎಂದು ಜಾರಿಕೊಂಡರು.

ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮನಮೋಹನ್​ ಸಿಂಗ್ ಅವರ ಕೇಂದ್ರ​​ ಸರ್ಕಾರದಲ್ಲಿ ಕರ್ನಾಟಕದ ನಾಲ್ಕು ಜನ ಮಂತ್ರಿಗಳಿದ್ದರು. ಅವಾಗ ಕಾವೇರಿ ವಿಚಾರವಾಗಿ ಮಾತನಾಡಿದ್ರಾ? ಎಂದು ಪ್ರಶ್ನಿಸಿದರು.

ಟಿ ಕೆ ಹಳ್ಳಿ ಪಂಪ್ ಹೌಸ್ ಬಳಿ ಪ್ರತಿಭಟನೆ: ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ಮಂಡ್ಯದ ಟಿ ಕೆ ಹಳ್ಳಿ ಪಂಪ್ ಹೌಸ್ ಬಳಿ ಕನ್ನಡಪರ ಮತ್ತು ರೈತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಕಾವೇರಿ ನೀರಿಗಾಗಿ ಬೆಂಗಳೂರಿಗೆ ಪ್ರತಿಭಟನೆ ಮಾಡಲು ಬರುವುದಿಲ್ಲ. ನೀರು ಕುಡಿಯುತ್ತಾರೆ, ಆದರೆ ಪ್ರತಿಭಟಿಸುವುದಿಲ್ಲ, ಹೀಗಿರುವಾಗ ನೀರು ಏಕೆ ಬಿಡಬೇಕು ಎಂದು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com