ಮಧ್ಯಪ್ರದೇಶ ಚುನಾವಣೆಗೆ ಅಭ್ಯರ್ಥಿಗಳ 2ನೇ ಪಟ್ಟಿ: ಮೂವರು ಕೇಂದ್ರ ಸಚಿವರು, ಪ್ರಧಾನ ಕಾರ್ಯದರ್ಶಿಗಳು ಕಣಕ್ಕೆ

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ. 
ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್
ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್

ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ. 

ಮೂವರು ಕೇಂದ್ರ ಸಚಿವರು, ಪ್ರಧಾನ ಕಾರ್ಯದರ್ಶಿಗಳನ್ನು ಈ ಬಾರಿ ವಿಧಾನಸಭಾ ಚುನಾವಣೆಗೆ ಕಣಕ್ಕೆ ಇಳಿಸಲಾಗಿದೆ. ಈ ಪೈಕಿ ವಿಜಯವರ್ಗೀಯ ಸಹ ಇದ್ದಾರೆ'.

230 ಸದಸ್ಯರ ಸಂಖ್ಯಾಬಲ ಹೊಂದಿರುವ ಮಧ್ಯಪ್ರದೇಶ ವಿಧಾನಸಭೆಗೆ ಬಿಜೆಪಿ ಈವರೆಗೂ 78 ಅಭ್ಯರ್ಥಿಗಳನ್ನು ಘೋಷಿಸಿದೆ. ಆಗಸ್ಟ್ ನಲ್ಲಿ ಮೊದಲ ಪಟ್ಟಿಯಲ್ಲಿ 39 ಹೆಸರನ್ನು ಘೋಷಿಸಲಾಗಿತ್ತು.

ಸೋಮವಾರ ರಾತ್ರಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ, ಬಿಜೆಪಿ ಕೇಂದ್ರ ಸಚಿವರಾದ ಫಗ್ಗನ್ ಸಿಂಗ್ ಕುಲಸ್ತೆ ನಿವಾಸ್ ಕ್ಷೇತ್ರದಿಂದ (ಎಸ್‌ಟಿ), ಪ್ರಹ್ಲಾದ್ ಸಿಂಗ್ ಪಟೇಲ್ ಅವರನ್ನು ನರಸಿಂಗ್‌ಪುರದಿಂದ ಕಣಕ್ಕಿಳಿಸಿದೆ. ಪ್ರಹ್ಲಾದ್ ಸಿಂಗ್ ಅವರ ಸಹೋದರ ಜಲಮ್ ಸಿಂಗ್ ಪಟೇಲ್ ಹಾಲಿ ಶಾಸಕರಾಗಿದ್ದಾರೆ ಮತ್ತು ನರೇಂದ್ರ ಸಿಂಗ್ ತೋಮರ್ ಅವರನ್ನು ಡಿಮ್ನಿಯಿಂದ ಕಣಕ್ಕಿಳಿಸಿದ್ದಾರೆ.

ಬಿಜೆಪಿಯು ನಾಲ್ಕು ಲೋಕಸಭಾ ಸಂಸದರನ್ನು ಕಣಕ್ಕಿಳಿಸಲಾಗಿದೆ. ಜಬಲ್‌ಪುರ (ಪಶ್ಚಿಮ)ದಿಂದ ರಾಕೇಶ್ ಸಿಂಗ್, ಸಿಧಿಯಿಂದ ರಿತಿ ಪಾಠಕ್, ಸತ್ನಾದಿಂದ ಗಣೇಶ್ ಸಿಂಗ್ ಮತ್ತು ಗದರ್ವಾರದಿಂದ ಉದಯಪ್ರತಾಪ್ ಸಿಂಗ್ ಸ್ಪರ್ಧಿಸಲಿದ್ದಾರೆ.

ಬುಡಕಟ್ಟು ಜನಾಂಗದವರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಸಿಧಿ ಪ್ರಕರಣದಲ್ಲಿ ಶಾಸಕ ಕೇದಾರನಾಥ್ ಶುಕ್ಲಾ ಅವರ ಬೆಂಬಲಿಗರೆಂದು ಆರೋಪಿಸಲಾಗಿದ್ದು, ಈ ಘಟನೆ ರಾಷ್ಟ್ರದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು ಅವರ ಬದಲಿಗೆ ಪಾಠಕ್ ಅವರನ್ನು ಹೆಸರಿಸಲಾಗಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರು ಇಂದೋರ್-1 ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ದುರ್ಗಲಾಲ್ ವಿಜಯ್ (ಶಿಯೋಪುರ್), ರಘುರಾಜ್ ಕಂಸಾನಾ (ಮೊರೆನಾ), ಅಮರೀಶ್ ಶರ್ಮಾ (ಲಹರ್), ಮೋಹನ್ ಸಿಂಗ್ ರಾಥೋಡ್ (ಭಿತರ್ವಾರ್), ಇಮಾರ್ತಿ ದೇವಿ (ದಬ್ರಾ), ಪ್ರದೀಪ್ ಅಗರವಾಲ್ (ಸೇವ್ಡಾ) ಮತ್ತು ರಮೇಶ್ ಖಟಿಕ್ (ಕರೇರಾ) ಪಟ್ಟಿಯಲ್ಲಿರುವ ಇತರ ಅಭ್ಯರ್ಥಿಗಳಾಗಿದ್ದಾರೆ.

2018 ರ ಚುನಾವಣೆಯಲ್ಲಿ, ಬಿಜೆಪಿಯ 109 ವಿರುದ್ಧ ಕಾಂಗ್ರೆಸ್ 114 ಸ್ಥಾನಗಳನ್ನು ಗೆದ್ದು ಕಮಲ್ ನಾಥ್ ನೇತೃತ್ವದಲ್ಲಿ ಸರ್ಕಾರವನ್ನು ರಚಿಸಿತು. ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾಗಿರುವ ಶಾಸಕರ ಬಂಡಾಯದ ನಂತರ ಈ ಸರ್ಕಾರ ಮಾರ್ಚ್ 2020 ರಲ್ಲಿ ಕುಸಿದಿತ್ತು. ಬಳಿಕ ಶಿವರಾಜ್ ಸಿಂಗ್ ಚೌಹಾಣ್ ಅವರು ಸಿಎಂ ಆಗಿ ಅಧಿಕಾರ ಹಿಡಿದಿದ್ದರು. ಬಂಡಾಯದ ನಂತರ ಶಾಸಕರು ಪಕ್ಷ ಬದಲಾಯಿಸಿದ ಕಾರಣ ಉಪಚುನಾವಣೆ ನಂತರ, ಬಿಜೆಪಿ ಈಗ ಸದನದಲ್ಲಿ 126 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ 96 ಸ್ಥಾನಗಳನ್ನು ಹೊಂದಿದೆ. ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com