ಉತ್ತರ ಪ್ರದೇಶ: AC ಹೆಚ್ಚು ಮಾಡಿ ಮಲಗಿದ ವೈದ್ಯೆ; ಶೀತದಿಂದ ಎರಡು ನವಜಾತ ಶಿಶುಗಳು ಸಾವು!

ಮುಜಾಫರ್‌ನಗರದ ಪಕ್ಕದಲ್ಲಿರುವ ಶಾಮ್ಲಿ ಜಿಲ್ಲೆಯ ಕೈರಾನಾ ಪ್ರದೇಶದ ಖಾಸಗಿ ಚಿಕಿತ್ಸಾಲಯದಲ್ಲಿ ಎರಡು ನವಜಾತ ಶಿಶುಗಳು ಹವಾನಿಯಂತ್ರಣದಿಂದ ಶೀತದಿಂದ ಸಾವನ್ನಪ್ಪಿವೆ.
ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರೋಶ
ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರೋಶ

ಮುಜಾಫರ್‌ನಗರ(ಉತ್ತರ ಪ್ರದೇಶ): ಮುಜಾಫರ್‌ನಗರದ ಪಕ್ಕದಲ್ಲಿರುವ ಶಾಮ್ಲಿ ಜಿಲ್ಲೆಯ ಕೈರಾನಾ ಪ್ರದೇಶದ ಖಾಸಗಿ ಚಿಕಿತ್ಸಾಲಯದಲ್ಲಿ ಎರಡು ನವಜಾತ ಶಿಶುಗಳು ಹವಾನಿಯಂತ್ರಣದಿಂದ ಶೀತದಿಂದ ಸಾವನ್ನಪ್ಪಿವೆ.

ನವಜಾತ ಶಿಶುಗಳ ಕುಟುಂಬಗಳು ಶನಿವಾರ ರಾತ್ರಿ ಮಲಗಿದ್ದಾಗ ಕ್ಲಿನಿಕ್ ಮುಖ್ಯಸ್ಥೆ ಡಾ.ನೀತು ಎಸಿ ಅನ್ನು ಆನ್ ಮಾಡಿದ್ದರಿಂದ ಕೊಠಡಿ ತುಂಬಾ ತಂಪಾಗಿತ್ತು ಎಂದು ಆರೋಪಿಸಿದ್ದಾರೆ. ಭಾನುವಾರ ಬೆಳಗ್ಗೆ ಮನೆಯವರು ಮಕ್ಕಳನ್ನು ನೋಡಲು ಹೋದಾಗ ಇಬ್ಬರೂ ಶವವಾಗಿ ಪತ್ತೆಯಾಗಿವೆ.

ಮಕ್ಕಳ ಕುಟುಂಬದವರ ದೂರಿನ ಮೇರೆಗೆ ಡಾ.ನೀತು ವಿರುದ್ಧ ಐಪಿಸಿ ಸೆಕ್ಷನ್ 304 (ಕೊಲೆಯಲ್ಲದ ಅಪರಾಧಿ ನರಹತ್ಯೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಅವರನ್ನು ಬಂಧಿಸಲಾಗಿದೆ ಎಂದು ಎಚ್‌ಎಚ್‌ಒ (ಕೈರಾನಾ) ನೇತ್ರಪಾಲ್ ಸಿಂಗ್ ಹೇಳಿದ್ದಾರೆ. ಏತನ್ಮಧ್ಯೆ, ಘಟನೆಯ ಬಗ್ಗೆ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ.

ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ (ಎಸಿಎಂಒ) ಡಾ. ಅಶ್ವನಿ ಶರ್ಮಾ ತಿಳಿಸಿದ್ದಾರೆ. ದೂರಿನ ಪ್ರಕಾರ, ಶನಿವಾರ ಕೈರಾನಾದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಶುಗಳು ಜನಿಸಿದ್ದು, ಅದೇ ದಿನ ನಂತರ ಖಾಸಗಿ ಕ್ಲಿನಿಕ್‌ಗೆ ಸ್ಥಳಾಂತರಿಸಲಾಯಿತು.

ಚಳಿಯಿಂದಾಗಿ ಮಕ್ಕಳು ಸಾವು
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಬಸೇರಾ ಗ್ರಾಮದ ನಿವಾಸಿ ನಾಜಿಮ್ ಮತ್ತು ಕೈರಾನ ನಿವಾಸಿ ಸಾಕಿಬ್ ಎಂಬುವರ ಇಬ್ಬರು ನವಜಾತ ಮಕ್ಕಳನ್ನು ಚಿಕಿತ್ಸೆಗಾಗಿ ಫೋಟೊಥೆರಪಿ ಘಟಕದಲ್ಲಿ ಇರಿಸಲಾಗಿತ್ತು. ನೀತು ಶನಿವಾರ ರಾತ್ರಿ ಮಲಗಲು ಹವಾನಿಯಂತ್ರಣವನ್ನು ಸ್ವಿಚ್ ಆನ್ ಮಾಡಿದ್ದರು. ಮರುದಿನ ಬೆಳಿಗ್ಗೆ ಅವರ ಕುಟುಂಬವು ಅವರನ್ನು ಪರೀಕ್ಷಿಸಲು ಹೋದಾಗ, ಮಕ್ಕಳಿಬ್ಬರೂ ಘಟಕದಲ್ಲಿ ಶವವಾಗಿ ಪತ್ತೆಯಾಗಿದ್ದವು. ಘಟನೆಯ ವಿರುದ್ಧ ಸಂತ್ರಸ್ತರ ಕುಟುಂಬಗಳು ಪ್ರತಿಭಟನೆ ನಡೆಸಿದ್ದು, ಡಾ.ನೀತೂ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com