ಕೆನಡಾ ಮೂಲದ ಖಲಿಸ್ತಾನಿ ಉಗ್ರ ಲಾಂಡಾನ ಆಪ್ತರೊಂದಿಗೆ ಸಂಪರ್ಕ; ಪಂಜಾಬ್ ಪೊಲೀಸರಿಂದ 48 ಸ್ಥಳಗಳಲ್ಲಿ ದಾಳಿ, ಪರಿಶೀಲನೆ

ಕೆನಡಾ ಮೂಲದ ಖಲಿಸ್ತಾನಿ ಉಗ್ರ ಲಾಂಡಾನ ಆಪ್ತರೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇರೆಗೆ ಪಂಜಾಬ್ ಪೊಲೀಸರು 48 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಪಂಜಾಬ್ ಪೊಲೀಸರಿಂದ ದಾಳಿ
ಪಂಜಾಬ್ ಪೊಲೀಸರಿಂದ ದಾಳಿ

ಚಂಡೀಘಡ: ಕೆನಡಾ ಮೂಲದ ಖಲಿಸ್ತಾನಿ ಉಗ್ರ ಲಾಂಡಾನ ಆಪ್ತರೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇರೆಗೆ ಪಂಜಾಬ್ ಪೊಲೀಸರು 48 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಕೆನಡಾ ಮೂಲದ ಭಯೋತ್ಪಾದಕ ಲಖ್ಬೀರ್ ಸಿಂಗ್ ಲಾಂಡಾ ಅಲಿಯಾಸ್ ಲಾಂಡಾ ಹರಿಕೆಯ ನಿಕಟ ಸಹಚರರೊಂದಿಗೆ ಸಂಬಂಧ ಹೊಂದಿರುವ ಆರೋಪದ ಮೇರೆಗೆ 48 ಸ್ಥಳಗಳಲ್ಲಿ ಪಂಜಾಬ್ ಪೊಲೀಸರು ದಾಳಿ ನಡೆಸಿದ್ದಾರೆ. ಸೆಪ್ಟೆಂಬರ್ 21 ರಂದು ವ್ಯಾಪಾರಿಯೊಬ್ಬರ ಮೇಲೆ ಇಬ್ಬರು ದಾಳಿಕೋರರು ದಾಳಿ ಮಾಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಾಂಡಾ ಹಾರಿಕೆ ಸಹಚರರು ಎಂದು ಹೇಳಿಕೊಂಡು 15 ಲಕ್ಷ ರೂ.ಗೆ ಬೇಡಿಕೆಯಿಟ್ಟವರಿಂದ ಕರೆ ಬಂದಿತ್ತು ಎಂದು ವ್ಯಾಪಾರಿ ಹೇಳಿದ್ದ. ಈ ಸಂಬಂಧ ಪ್ರತ್ಯೇಕ ಪೊಲೀಸ್ ತಂಡಗಳನ್ನು ಕಾರ್ಯಾಚರಣೆಗೆ ರಚಿಸಲಾಗಿತ್ತು. ಪಂಜಾಬ್ ನ ಮಖು, ಝಿರಾ, ಗುರುಹರ್ಸಹೈ ಮತ್ತು ಇತರ ಸ್ಥಳಗಳಲ್ಲಿ ಈ ತಂಡಗಳು ದಾಳಿ ನಡೆಸಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಣಧೀರ್ ಕುಮಾರ್ ತಿಳಿಸಿದ್ದಾರೆ.

ದಾಳಿ ವೇಳೆ ಕೆಲವರನ್ನು ಬಂಧಿಸಲಾಗಿತ್ತು. ತರ್ನ್ ತರನ್‌ನಲ್ಲಿರುವ ಸರ್ಹಾಲಿ ಪೊಲೀಸ್ ಠಾಣೆಯಲ್ಲಿ ಆರ್‌ಪಿಜಿ ದಾಳಿಗೆ ಸಂಬಂಧಿಸಿದಂತೆ ಲಾಂಡಾ ಹೆಸರು ಕೇಳಿ ಬಂದಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com