ಕರ್ನಾಟಕ, ತಮಿಳುನಾಡು ಸಿಎಂಗಳ ಅಣಕು ಶವಯಾತ್ರೆ; ಕಾಂಗ್ರೆಸ್ ನಾಯಕ ಮಾಣಿಕ್ಕಂ ಟ್ಯಾಗೋರ್ ಖಂಡನೆ

ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಣಕು ಶವಯಾತ್ರೆಯನ್ನು ನಡೆಸಿರುವ ಎರಡು ಸಂಘಟನೆಗಳ ನಡೆಯನ್ನು ಕಾಂಗ್ರೆಸ್ ನಾಯಕ ಮಾಣಿಕಂ ಟ್ಯಾಗೋರ್ ಬುಧವಾರ ಖಂಡಿಸಿದ್ದಾರೆ ಮತ್ತು ಘನತೆಯಿಂದ ಪ್ರತಿಭಟನೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಮಾಣಿಕ್ಕಂ ಟ್ಯಾಗೋರ್
ಮಾಣಿಕ್ಕಂ ಟ್ಯಾಗೋರ್
Updated on

ನವದೆಹಲಿ: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಣಕು ಶವಯಾತ್ರೆಯನ್ನು ನಡೆಸಿರುವ ಎರಡು ಸಂಘಟನೆಗಳ ನಡೆಯನ್ನು ಕಾಂಗ್ರೆಸ್ ನಾಯಕ ಮಾಣಿಕಂ ಟ್ಯಾಗೋರ್ ಬುಧವಾರ ಖಂಡಿಸಿದ್ದಾರೆ ಮತ್ತು ಘನತೆಯಿಂದ ಪ್ರತಿಭಟನೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಜನರಿಂದ ಆಯ್ಕೆಯಾದ ತಮಿಳುನಾಡು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳನ್ನು ಅವಮಾನಿಸುತ್ತಿರುವ ಎರಡು ಸಂಘಟನೆಗಳ ನಡೆಯನ್ನು ಖಂಡಿಸುತ್ತೇನೆ. ಘನತೆಯಿಂದ ಪ್ರತಿಭಟಿಸಿ. ನಿಮ್ಮ ಕೋಪವನ್ನು ಯೋಗ್ಯ ರೀತಿಯಲ್ಲಿ ಪ್ರದರ್ಶಿಸಿ. ಕಾವೇರಿ ಇಬ್ಬರಿಗೂ ಪ್ರಮುಖ ವಿಷಯವಾಗಿದೆ. ನಮಗೆ ಮತ್ತು ನಮ್ಮದೆಂದು ಹೇಳಿಕೊಳ್ಳುವ ಹಕ್ಕು ನಮಗಿದೆ. ಅದನ್ನು ಸಭ್ಯತೆಯಿಂದ ಮಾಡೋಣ' ಎಂದಿದ್ದಾರೆ.

ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡಿನ ರೈತರು ಹಾಗೂ ಕರ್ನಾಟಕದ ಸಂಘಟನೆಯೊಂದು ಮುಖ್ಯಮಂತ್ರಿಗಳ ಅಣಕು ಶವಸಂಸ್ಕಾರ ನಡೆಸುತ್ತಿರುವ ಹಾಗೂ ಬಾಯಲ್ಲಿ ಸತ್ತ ಇಲಿಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ಫೋಟೊಗಳನ್ನು ಅವರು ಲಗತ್ತಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com