ಸಂಜಯ್ ರಾವುತ್
ಸಂಜಯ್ ರಾವುತ್

ಪ್ರಧಾನಿ ಮೋದಿಯ ಶೈಕ್ಷಣಿಕ ಅರ್ಹತೆ ಬಗ್ಗೆ ಸಂಸತ್ತು, ದೇಶ ತಿಳಿಯಲಿ: ಸಂಜಯ್ ರಾವತ್

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಜನತೆಗೆ ಮಾಹಿತಿ ನೀಡಬೇಕು. ಅದನ್ನು ಮರೆಮಾಚುವ ಅಗತ್ಯವೇನಿದೆ ಎಂದು ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಸೋಮವಾರ ಪ್ರಶ್ನಿಸಿದ್ದಾರೆ.

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಜನತೆಗೆ ಮಾಹಿತಿ ನೀಡಬೇಕು. ಅದನ್ನು ಮರೆಮಾಚುವ ಅಗತ್ಯವೇನಿದೆ ಎಂದು ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಸೋಮವಾರ ಪ್ರಶ್ನಿಸಿದ್ದಾರೆ.

ಸಂಸತ್ ಭವನದ ಪ್ರವೇಶ ದ್ವಾರದಲ್ಲಿ ಪ್ರಧಾನಿ ಮೋದಿ ಅವರ ಪದವಿಯ ವಿವರ ಪ್ರದರ್ಶಿಸಬೇಕು. ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಸಂಸದರಿಗೆ ಮತ್ತು ದೇಶಕ್ಕೆ ತಿಳಿಯಲಿ ಎಂದು ರಾಜ್ಯಸಭಾ ಸದಸ್ಯ ರಾವತ್ ಅವರು ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪ್ರಧಾನಿ ಮೋದಿ ಪದವಿಯ ಮಾಹಿತಿಯನ್ನು ನೀಡುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ(ಸಿಐಸಿ) ನೀಡಿದ್ದ ಆದೇಶವನ್ನು ಗುಜರಾತ್ ಹೈಕೋರ್ಟ್ ರದ್ದುಗೊಳಿಸಿದೆ.

ಈ ಬಗ್ಗೆ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ರಾವತ್, ರಾಷ್ಟ್ರಪತಿ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಥವಾ ನಮ್ಮ ಶೈಕ್ಷಣಿಕ ಮಾಹಿತಿ ಕೇಳಬಹುದಾದರೆ, ಪ್ರಧಾನಿಯ ಶೈಕ್ಷಣಿಕ ಮಾಹಿತಿ ಏಕೆ ಕೇಳಬಾರದು ಮತ್ತು ಅದನ್ನು ಏಕೆ ಮರೆಮಾಚಬೇಕು? ಈ ಬಗ್ಗೆ ಪ್ರಧಾನಿ ಮೋದಿ ಸ್ಪಷ್ಟಿಕರಣ ನೀಡಬೇಕು ಎಂದರು.

ಬಿಜೆಪಿಯ ಹೆಚ್ಚಿನ ನಾಯಕರು ನಕಲಿ ಪದವಿ ಹೊಂದಿದ್ದಾರೆ. ಇದು ನಕಲಿ ಪದವಿಗಳ ಕಾರ್ಖಾನೆ ಎಂದು ಸಂಜಯ್ ರಾವತ್ ವಾಗ್ದಾಳಿ ನಡೆಸಿದರು.

Related Stories

No stories found.

Advertisement

X
Kannada Prabha
www.kannadaprabha.com