ಪ್ರಧಾನಿ ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ ಕೇಜ್ರಿವಾಲ್ ಗೆ ಹೈಕೋರ್ಟ್ ದಂಡ, ಪ್ರಧಾನಿಯ ವಿದ್ಯಾರ್ಹತೆ ತಿಳಿವ ಹಕ್ಕೂ ಇಲ್ಲವೇ ಎಂದ ದೆಹಲಿ ಸಿಎಂ!

ನನ್ನ ದೇಶದ ಪ್ರಧಾನಿಯ ವಿದ್ಯಾರ್ಹತೆ ತಿಳಿಯುವ ಹಕ್ಕೂ ಕೂಡ ಇಲ್ಲವೇ ಎಂದು ಗುಜರಾತ್ ಹೈಕೋರ್ಟ್ ಆದೇಶದ ಬಗ್ಗೆ ದೆಹಲಿ ಸಿಎಂ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪರೋಕ್ಷ ಕಿಡಿಕಾರಿದ್ದಾರೆ.
ಅರವಿಂದ್ ಕೇಜ್ರಿವಾಲ್ ಮತ್ತು ಮೋದಿ
ಅರವಿಂದ್ ಕೇಜ್ರಿವಾಲ್ ಮತ್ತು ಮೋದಿ

ನವದೆಹಲಿ: ನನ್ನ ದೇಶದ ಪ್ರಧಾನಿಯ ವಿದ್ಯಾರ್ಹತೆ ತಿಳಿಯುವ ಹಕ್ಕೂ ಕೂಡ ಇಲ್ಲವೇ ಎಂದು ಗುಜರಾತ್ ಹೈಕೋರ್ಟ್ ಆದೇಶದ ಬಗ್ಗೆ ದೆಹಲಿ ಸಿಎಂ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪರೋಕ್ಷ ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸ್ನಾತಕೋತ್ತರ ಪದವಿಗೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದ್ದು, ಜತೆಗೆ ಅರ್ಜಿ ಹಾಕಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ 25ಸಾವಿರ ರೂ ದಂಡವನ್ನೂ ವಿಧಿಸಿ ಅದರ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿತ್ತು.

ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಏಳು ವರ್ಷಗಳ ಹಿಂದಿನ ಆದೇಶದ ವಿರುದ್ಧ ಗುಜರಾತ್ ವಿಶ್ವವಿದ್ಯಾಲಯದ ಮೇಲ್ಮನವಿಯನ್ನು ಅನುಮತಿಸಿದ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರು, ಕೇಜ್ರಿವಾಲ್ ಅವರ ಮೇಲೆ 25,000 ರೂಪಾಯಿಗಳನ್ನು ವಿಧಿಸಿದರು ಮತ್ತು ಆ ಮೊತ್ತವನ್ನು ನಾಲ್ಕು ವಾರಗಳಲ್ಲಿ ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (GSLSA)ಕ್ಕೆ ಪಾವತಿವಂತೆ ಹೇಳಿದರು.

ಇದೀಗ ಕೋರ್ಟ್ ಆದೇಶಕ್ಕೆ ಪರೋಕ್ಷ ಕಿಡಿಕಾರಿರುವ ಅರವಿಂದ್ ಕೇಜ್ರಿವಾಲ್, 'ಪ್ರಧಾನಿಯವರ ಶೈಕ್ಷಣಿಕ ಅರ್ಹತೆಯನ್ನು ತಿಳಿದುಕೊಳ್ಳುವ ಹಕ್ಕು ದೇಶಕ್ಕೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

'ಪ್ರಧಾನಿ ಎಷ್ಟು ಓದಿದ್ದಾರೆ ಎಂದು ತಿಳಿದುಕೊಳ್ಳುವ ಹಕ್ಕು ದೇಶಕ್ಕೆ ಇಲ್ಲವೇ? ಪದವಿಯನ್ನು ನ್ಯಾಯಾಲಯದಲ್ಲಿ ತೋರಿಸುವುದಕ್ಕೆ ಅವರು ಏಕೆ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಪದವಿಯನ್ನು ನೋಡಲು ಬೇಡಿಕೆಯಿರುವವರಿಗೆ ದಂಡ ವಿಧಿಸಲಾಗುತ್ತದೆಯೇ? ಏನಾಗುತ್ತಿದೆ ಈ ದೇಶದಲ್ಲಿ?' 'ಅನಕ್ಷರಸ್ಥ ಅಥವಾ ಕಡಿಮೆ ವಿದ್ಯಾವಂತ ಪ್ರಧಾನಿ ದೇಶಕ್ಕೆ ತುಂಬಾ ಅಪಾಯಕಾರಿ' ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

ಏನಿದು ಪ್ರಕರಣ?
ಪ್ರಧಾನಿ ಕಾರ್ಯಾಲಯ ಪ್ರಧಾನಿ ಮೋದಿ ಅವರ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಪ್ರಮಾಣಪತ್ರಗಳನ್ನು ಬಹಿರಂಗಪಡಿಸಬೇಕಿಲ್ಲ ಎಂದು ಗುಜರಾತ್ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ. ನ್ಯಾ. ಬಿರೇನ್ ವೈಷ್ಣವ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಹೊರಡಿಸಿದ್ದು, ಮಾಹಿತಿ ಆಯೋಗದ ಮುಖ್ಯಸ್ಥರು ಪ್ರಧಾನಿ ಕಾರ್ಯಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಹಾಗೂ ಗುಜರಾತ್ ವಿವಿ ಹಾಗೂ ದೆಹಲಿ ವಿವಿಯ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಅವರ ಪದವಿ ಸ್ನಾತಕೋತ್ತರ ಪದವಿ ವಿವರಗಳನ್ನು ನೀಡುವಂತೆ ಸೂಚಿಸಿದ್ದ ಆದೇಶವನ್ನು ರದ್ದುಗೊಳಿಸಿದೆ. ಪ್ರಧಾನಿ ಮೋದಿ ಅವರ ಪದವಿ ವಿವರಗಳನ್ನು ಕೇಳಿದ್ದ ದೆಹಲಿ ಸಿಎಂ ಕೇಜ್ರಿವಾಲ್ ಗೆ ಕೋರ್ಟ್ 25,000 ರೂಪಾಯಿ ದಂಡ ವಿಧಿಸಿದೆ. 2016 ರಲ್ಲಿ ಗುಜರಾತ್ ವಿವಿಗೆ ಪ್ರಧಾನಿ ಮೋದಿ ಅವರ ಪದವಿ ವಿವರಗಳನ್ನು ಸಲ್ಲಿಸುವಂತೆ ಸಿಐಸಿ ಸೂಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com