ಸಸಾರಾಂ ಹಿಂಸಾಚಾರ; ಆತ್ಮರಕ್ಷಣೆಗಾಗಿ ಮುಸ್ಲಿಂರು ಬಾಂಬ್‌ ತಯಾರಿಸುತ್ತಿದ್ದಾರೆ: ಆರ್‌ಜೆಡಿ ಶಾಸಕ!

ಸಸಾರಾಂ ನಲ್ಲಿ ರಾಮ ನವಮಿ ಮೆರವಣಿಗೆ ವೇಳೆ ಹಿಂಸಾಚಾರ ನಡೆದಿದ್ದು ಅಂದಿನಿಂದ ಇಲ್ಲಿಯವರೆಗೆ ಹಿಂಸಾಚಾರ ನಿಲ್ಲುವ ಸುಳಿವು ಕಾಣುತ್ತಿಲ್ಲ. ಇಂದು ಸಹ ಸಸಾರಂನಲ್ಲಿ ಮತ್ತೆ ಹಿಂಸಾಚಾರ ನಡೆದಿದೆ. ಅಲ್ಲಿ ಬೆಳಗಿನ ಜಾವ ಸ್ಫೋಟ ಸದ್ದು ಕೇಳಿಸಿತ್ತು. ಇದಾದ ನಂತರ ಎಸ್‌ಎಸ್‌ಬಿ ಜವಾನರನ್ನು ಇಲ್ಲಿಗೆ ಕರೆಸಿತು.
ಮೊಹಮ್ಮದ್ ನೆಹಾಲುದ್ದೀನ್
ಮೊಹಮ್ಮದ್ ನೆಹಾಲುದ್ದೀನ್
Updated on

ರೋಹ್ತಾಸ್(ಬಿಹಾರ): ಸಸಾರಾಂ ನಲ್ಲಿ ರಾಮ ನವಮಿ ಮೆರವಣಿಗೆ ವೇಳೆ ಹಿಂಸಾಚಾರ ನಡೆದಿದ್ದು ಅಂದಿನಿಂದ ಇಲ್ಲಿಯವರೆಗೆ ಹಿಂಸಾಚಾರ ನಿಲ್ಲುವ ಸುಳಿವು ಕಾಣುತ್ತಿಲ್ಲ. ಇಂದು ಸಹ ಸಸಾರಂನಲ್ಲಿ ಮತ್ತೆ ಹಿಂಸಾಚಾರ ನಡೆದಿದೆ. ಅಲ್ಲಿ ಬೆಳಗಿನ ಜಾವ ಸ್ಫೋಟ ಸದ್ದು ಕೇಳಿಸಿತ್ತು. ಇದಾದ ನಂತರ ಎಸ್‌ಎಸ್‌ಬಿ ಜವಾನರನ್ನು ಇಲ್ಲಿಗೆ ಕರೆಸಿತು. 

ಈ ಮಧ್ಯೆ ರಾಷ್ಟ್ರೀಯ ಜನತಾ ದಳದ ಶಾಸಕ ಮೊಹಮ್ಮದ್ ನೆಹಾಲುದ್ದೀನ್ ಈ ವಿಚಾರದಲ್ಲಿ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಮುಸ್ಲಿಂ ಯುವಕರ ತಮ್ಮ ರಕ್ಷಣೆಗಾಗಿ ಬಾಂಬ್ ಗಳನ್ನು ತಯಾರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಹಿಂಸಾಚಾರದ ವೇಳೆ ಮುಸ್ಲಿಂರು ಸತ್ತಿದ್ದರೆ ಏನು ಮಾಡುತ್ತಿದ್ದರು. ಮುಸ್ಲಿಂ ಯುವಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆಲ್ಲುವುದು ಹಾಗೂ ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ತರುವುದು ಅವರ ಗುರಿಯಾಗಿದೆ ಎಂದು ಶಾಸಕರು ಆರೋಪಿಸಿದ್ದಾರೆ.

ರಾಮನವಮಿಯಂದು ನಡೆದ ಮೆರವಣಿಗೆಯಲ್ಲಿ ಹಿಂಸಾಚಾರ ನಡೆದಿತ್ತು. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಅಂದಿನಿಂದ, ನಗರದ ಮೂಲೆ ಮೂಲೆಗಳಲ್ಲಿ ಪೋಲಿಸ್ ಪಡೆ ಬೀಡುಬಿಟ್ಟಿದೆ. ಅಲ್ಲದೆ ಹಲವಾರು ಪೊಲೀಸ್ ತಂಡಗಳು ನಿರಂತರವಾಗಿ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿವೆ. ಇನ್ನು ಇದುವರೆಗೂ ಪೊಲೀಸರು 109 ಮಂದಿಯನ್ನು ಬಂಧಿಸಿದ್ದಾರೆ. ಹಿಂಸಾಚಾರ ಕುರಿತಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಇನ್ನೊಂದೆಡೆ ನಿನ್ನೆ ಈ ಬಗ್ಗೆ ಪರಿಶೀಲನಾ ಸಭೆ ನಡೆಸಿ ಕಿಡಿಗೇಡಿಗಳನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

ಹಿಂಸಾಚಾರ ವರದಿಯಾದ ನಂತರ, ಸಸಾರಾಂ ಮತ್ತು ಬಿಹಾರ ಷರೀಫ್‌ನಲ್ಲಿ ಏಪ್ರಿಲ್ 4ರವರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಎರಡೂ ನಗರಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಸಸಾರಂನಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ. ವದಂತಿಗಳಿಂದ ದೂರವಿರಿ ಎಂದು ಪೊಲೀಸ್ ತಂಡ ಜನರಿಗೆ ಸಲಹೆ ನೀಡಿದೆ. ಬಿಹಾರದ ಸಿಎಂ ನಿತೀಶ್ ಕುಮಾರ್ ಅವರು ಹಿಂಸಾಚಾರದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com