ಬಿಜೆಪಿ ಸರ್ಕಾರ ನನಗೆ 'ಪದ್ಮಶ್ರೀ' ನೀಡುತ್ತದೆಂದು ಭಾವಿಸಿರಲಿಲ್ಲ: ನನ್ನ ಯೋಚನೆ ತಪ್ಪೆಂದು ಮೋದಿ ಸಾಬೀತು ಮಾಡಿದ್ದಾರೆ; ಕರ್ನಾಟಕ ಮುಸ್ಲಿಂ ಕಲಾವಿದ

ಬಿಜೆಪಿ ಎಂದಿಗೂ ಮುಸ್ಲಿಮರಿಗೆ ಏನನ್ನೂ ನೀಡುವುದಿಲ್ಲ, ಆದರೆ ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡುವ ಮೂಲಕ ಪ್ರಧಾನಿ ಮೋದಿ ಆ ಭಾವನೆ ತಪ್ಪು ಎಂದು ಸಾಬೀತುಪಡಿಸಿದ್ದಾರೆ ಎಂದು ಕರ್ನಾಟಕದ ಹಿರಿಯ ಬಿದ್ರಿ ಕರಕುಶಲ ಕಲಾವಿದ ಶಾ ರಶೀದ್ ಅಹ್ಮದ್ ಕ್ವಾದ್ರಿ ಹೇಳಿದ್ದಾರೆ.
ಶಾ ರಶೀದ್ ಅಹ್ಮದ್ ಕ್ವಾದ್ರಿ ಅವರಿಗೆ ಮೋದಿ ಹಸ್ತ ಲಾಘವ
ಶಾ ರಶೀದ್ ಅಹ್ಮದ್ ಕ್ವಾದ್ರಿ ಅವರಿಗೆ ಮೋದಿ ಹಸ್ತ ಲಾಘವ

ನವದೆಹಲಿ: ನಾನು ಈ ಪ್ರಶಸ್ತಿಯನ್ನು ಪಡೆಯಲು 10 ವರ್ಷಗಳಿಂದ ಪ್ರಯತ್ನಿಸಿದೆ. ಬಿಜೆಪಿ ಸರ್ಕಾರ ಬಂದಾಗ, ನಾನು ಈ ಪ್ರಶಸ್ತಿಯನ್ನು ಪಡೆಯುವುದಿಲ್ಲ ಎಂದು ಭಾವಿಸಿದ್ದೆ, ಏಕೆಂದರೆ ಬಿಜೆಪಿ ಎಂದಿಗೂ ಮುಸ್ಲಿಮರಿಗೆ ಏನನ್ನೂ ನೀಡುವುದಿಲ್ಲ, ಆದರೆ ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡುವ ಮೂಲಕ ಪ್ರಧಾನಿ ಮೋದಿ ಆ ಭಾವನೆ ತಪ್ಪು ಎಂದು ಸಾಬೀತುಪಡಿಸಿದ್ದಾರೆ ಎಂದು ಕರ್ನಾಟಕದ ಹಿರಿಯ ಬಿದ್ರಿ ಕರಕುಶಲ ಕಲಾವಿದ ಶಾ ರಶೀದ್ ಅಹ್ಮದ್ ಕ್ವಾದ್ರಿ ಹೇಳಿದ್ದಾರೆ.

ಬುಧವಾರ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು  ಸ್ವೀಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು.

ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ನಂತರ, ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಪದ್ಮ ಪ್ರಶಸ್ತಿಯನ್ನು ನಿರೀಕ್ಷಿಸಿದ್ದೆ, ಆದರೆ ನನಗೆ ಅದು ಸಿಗಲಿಲ್ಲ, ನಿಮ್ಮ ಸರ್ಕಾರ ಬಂದಾಗ, ಈಗ ಬಿಜೆಪಿ ಸರ್ಕಾರ ನನಗೆ ಯಾವುದೇ ಪ್ರಶಸ್ತಿ ನೀಡುವುದಿಲ್ಲ ಎಂದು ಭಾವಿಸಿದ್ದೆ.

ಆದರೆ ನೀವು ಅದನ್ನು ತಪ್ಪು ಎಂದು ಸಾಬೀತುಪಡಿಸಿದ್ದೀರಿ. ನಾನು ನಿಮಗೆ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.  ಬಿಜೆಪಿ ಸರ್ಕಾರವು ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸುವುದಿಲ್ಲ ಎಂದು ನಂಬಿರುವುದು ತಪ್ಪು ಎಂದು ಹೇಳಿದರು. ಹೀಗೆ ಹೇಳಿದ ಕೂಡಲೇ ಮೋದಿ ನಮಸ್ಕಾರ ಮಾಡಿ ಮುಗುಳ್ನಕ್ಕು ಮುಂದೆ ಸಾಗಿದ್ದಾರೆ. ಅಮಿತ್ ಶಾ ಕೂಡ ಮಗುಮುಖದಿಂದ ಮುಂದೆ ಸಾಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com