ಪಾಸ್‌ಪೋರ್ಟ್ ಸಂಬಂಧ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ಹಿಂಪಡೆಯಲು ಭಾರಿ ಒತ್ತಡ: ಇಲ್ತಿಜಾ ಮುಫ್ತಿ
ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರು ಒಂದು ನಿರ್ದಿಷ್ಟ ದೇಶಕ್ಕೆ ಎರಡು ವರ್ಷಗಳ ಅವಧಿಗಾಗಿ ಷರತ್ತುಬದ್ಧ ಪಾಸ್‌ಪೋರ್ಟ್ ಪಡೆದಿದ್ದು, ಈ ಸಂಬಂಧ ಹೈಕೋರ್ಟ್...
Published: 08th April 2023 04:19 PM | Last Updated: 08th April 2023 04:21 PM | A+A A-

ಇಲ್ತಿಜಾ ಮುಫ್ತಿ
ಶ್ರೀನಗರ: ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರು ಒಂದು ನಿರ್ದಿಷ್ಟ ದೇಶಕ್ಕೆ ಎರಡು ವರ್ಷಗಳ ಅವಧಿಗಾಗಿ ಷರತ್ತುಬದ್ಧ ಪಾಸ್‌ಪೋರ್ಟ್ ಪಡೆದಿದ್ದು, ಈ ಸಂಬಂಧ ಹೈಕೋರ್ಟ್ ನಲ್ಲಿ ತಾನು ಸಲ್ಲಿಸಿರುವ ಅರ್ಜಿ ಹಿಂಪಡೆಯಲು ತನಗೆ ಭಾರಿ ಒತ್ತಡ ಇರುವುದಾಗಿ ಶನಿವಾರ ಆರೋಪಿಸಿದ್ದಾರೆ. ಆದರೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಲ್ತಿಜಾ ಅವರ ಆರೋಪಗಳನ್ನು ತಳ್ಳಿಹಾಕಿದ್ದಾರೆ.
"ಏಪ್ರಿಲ್ 5 ರಂದು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ನನಗೆ ನೀಡಿದ ಪಾಸ್‌ಪೋರ್ಟ್ ಕೇವಲ ಯುಎಇಗೆ, ಅದು ಎರಡು ವರ್ಷಗಳ ಮಾನ್ಯತೆಯೊಂದಿಗೆ ಮಾತ್ರ" ಎಂದು ಇಲ್ತಿಜಾ ಅವರು ಶ್ರೀನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ನನ್ನ ಪಾಸ್‌ಪೋರ್ಟ್‌ನ ಅವಧಿ ಮುಗಿದ ನಂತರ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆ. ಆದರೆ ಪಾಸ್‌ಪೋರ್ಟ್ ನೀಡಲು ನಿರಾಕರಿಸಿದ ನಂತರ ನಾನು ಹೈಕೋರ್ಟ್‌ಗೆ ಮೊರೆ ಹೋಗಿದ್ದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ವಿದೇಶದಲ್ಲಿ ವ್ಯಾಸಂಗ ಮಾಡಲು ಪಾಸ್‌ಪೋರ್ಟ್ ಪಡೆದ ಮೆಹಬೂಬಾ ಪುತ್ರಿ ಇಲ್ತಿಜಾ ಮುಫ್ತಿ
ನ್ಯಾಯಾಂಗವನ್ನು ತಪ್ಪುದಾರಿಗೆ ಎಳೆಯಲಾಗಿದೆ ಎಂದು ಆರೋಪಿಸಿದ ಇಲ್ತಿಜಾ, ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಂತರ ತರಾತುರಿಯಲ್ಲಿ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ನನಗೆ ಪಾಸ್‌ಪೋರ್ಟ್ ನೀಡಿದ್ದು, ನನ್ನ ಅರ್ಜಿಯನ್ನು ವಜಾಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆದರೆ ಇದು ಯಾವ ರೀತಿಯ ಪಾಸ್‌ಪೋರ್ಟ್. ಕೇವಲ ಒದ್ದು ದೇಶಕ್ಕೆ ನೀಡಿದ್ದಾರೆ ಮತ್ತು 10 ವರ್ಷಗಳ ಬದಲಿಗೆ ಎರಡು ವರ್ಷಗಳ ಮಾನ್ಯತೆ ಇದೆ ಎಂದು ಇಲ್ತಿಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಾನು ಕಾನೂನು ಪಾಲಿಸುವ ಭಾರತೀಯ ಪ್ರಜೆ. ನಾನು ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ. ಈ ಎರಡು ವರ್ಷಗಳ ಪಾಸ್‌ಪೋರ್ಟ್ ನೀಡಿದ್ದಕ್ಕಾಗಿ ನನ್ನ ವಿರುದ್ಧ ರಹಸ್ಯ ಕಾಯಿದೆಯನ್ನು ಬಳಸಿದ್ದಾರೆ. ಬೇಹುಗಾರಿಕೆಯಲ್ಲಿ ತೊಡಗಿರುವ ವ್ಯಕ್ತಿಯ ವಿರುದ್ಧ ಈ ಕಾಯ್ದೆಯನ್ನು ಬಳಸಲಾಗುತ್ತದೆ ” ಎಂದು ಮಾಜಿ ಸಿಎಂ ಪುತ್ರಿ ಆರೋಪಿಸಿದ್ದಾರೆ.