'ಪ್ರಾಜೆಕ್ಟ್ ಟೈಗರ್ ಗೆ 50 ವರ್ಷ': ಕಾಡು ಪ್ರಾಣಿಗಳನ್ನು ಆರಾಧಿಸುವ ವಿಶ್ವ ನಾಯಕ ನರೇಂದ್ರ ಮೋದಿ ಎಂದು ಕೆವಿನ್ ಪೀಟರ್ಸನ್ ಮೆಚ್ಚುಗೆ

'ಪ್ರಾಜೆಕ್ಟ್ ಟೈಗರ್' 50 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದನ್ನು ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿ-ಕೆವಿನ್ ಪೀಟರ್ಸನ್
ಪ್ರಧಾನಿ ಮೋದಿ-ಕೆವಿನ್ ಪೀಟರ್ಸನ್

'ಪ್ರಾಜೆಕ್ಟ್ ಟೈಗರ್' 50 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದನ್ನು ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಶ್ಲಾಘಿಸಿದ್ದಾರೆ. 

ಕಾಡು ಪ್ರಾಣಿಗಳ ರಕ್ಷಣೆಗಾಗಿ ನರೇಂದ್ರ ಮೋದಿ ಅವರ ಪ್ರಯತ್ನಗಳಿಗಾಗಿ ಅವರನ್ನು 'ಐಕಾನಿಕ್' ಮತ್ತು 'ವಿಶ್ವ ನಾಯಕ' ಎಂದು ಕೆವಿನ್ ಪೀಟರ್ಸನ್ ಕರೆದಿದ್ದಾರೆ. 

ಕೆವಿನ್ ಪೀಟರ್ಸನ್ ಟ್ವಿಟ್ಟರ್‌ನಲ್ಲಿ "ಐಕಾನಿಕ್! ಕಾಡು ಪ್ರಾಣಿಗಳನ್ನು ಪ್ರೀತಿಸುವ ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ಅವುಗಳೊಂದಿಗೆ ಸಮಯ ಕಳೆಯಲು ಉತ್ಸುಕರಾಗಿರುವ ವಿಶ್ವ ನಾಯಕ. ನೆನಪಿರಲಿ, ಅವರ ಕೊನೆಯ ಜನ್ಮದಿನದಂದು ಅವರು ಚೀತಾಗಳನ್ನು ಕಾಡಿಗೆ ಬಿಟ್ಟಿದ್ದರು. ಹೀರೋ! ನರೇಂದ್ರ ಮೋದಿ ಎಂದು ಬರೆದಿದ್ದಾರೆ.

ವಾಸ್ತವವಾಗಿ, 'ಪ್ರಾಜೆಕ್ಟ್ ಟೈಗರ್' 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕಾರ್ಯಕ್ರಮಗಳ ಅಡಿಯಲ್ಲಿ 20 ಕಿಮೀ ಸಫಾರಿಗಾಗಿ ಪ್ರಧಾನಿ ಮೋದಿ ಭಾನುವಾರ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅಧಿಕೃತವಾಗಿ ಹುಲಿಗಳ ಸಂಖ್ಯೆಯನ್ನು ಬಿಡುಗಡೆ ಮಾಡಿದ್ದು ಪ್ರಸ್ತುತ ಭಾರತದಲ್ಲಿ ಹುಲಿಗಳ ಸಂಖ್ಯೆ 3,167ಕ್ಕೆ ಏರಿಕೆಯಾಗಿದೆ. ಅಂಕಿಅಂಶಗಳ ಪ್ರಕಾರ, 2006ರಲ್ಲಿ 1,411, 2010ರಲ್ಲಿ 1,706, 2014ರಲ್ಲಿ 2,226, 2018ರಲ್ಲಿ 2,967 ಮತ್ತು 2022ರಲ್ಲಿ 3,167 ಆಗಿದೆ.

ಪೀಟರ್ಸನ್ ಈಗ ಮಾಡುತ್ತಿರುವುದೇನು?
ಕೆವಿನ್ ಪೀಟರ್ಸನ್, ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿದ ನಂತರ, ಪ್ರಾಣಿ ಸಂರಕ್ಷಕರಾಗಿದ್ದಾರೆ. ಗಾಯಗೊಂಡ ಘೇಂಡಾಮೃಗಗಳನ್ನು ರಕ್ಷಿಸಲು ಮತ್ತು ಪುನರ್ವಸತಿ ಮಾಡಲು ಅವರ ಚಾರಿಟಿ SORAI (ಆಫ್ರಿಕಾ ಮತ್ತು ಭಾರತದಲ್ಲಿ ಉಳಿಸಿ ನಮ್ಮ ರೈನೋಸ್) ಅನ್ನು ನಡೆಸುತ್ತಾರೆ. ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com