ನ್ಯಾಯಾಂಗ ವ್ಯವಸ್ಥೆ ಸುಧಾರಣೆ: ಕೊಟ್ಟ ಭರವಸೆ ಉಳಿಸಿಕೊಂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚಂದ್ರಚೂಡ್!

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನವೆಂಬರ್ 9, 2022 ರಂದು 50 ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಾಮಾನ್ಯ ನಾಗರಿಕರಿಗೆ ಸೇವೆ ಸಲ್ಲಿಸುವುದು ತಮ್ಮ ಆದ್ಯತೆ ಎಂದು ಹೇಳಿದ್ದರು.
ಸಿಜೆ ಐ ಚಂದ್ರಚೂಡ್
ಸಿಜೆ ಐ ಚಂದ್ರಚೂಡ್

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನವೆಂಬರ್ 9, 2022 ರಂದು 50 ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಾಮಾನ್ಯ ನಾಗರಿಕರಿಗೆ ಸೇವೆ ಸಲ್ಲಿಸುವುದು ತಮ್ಮ ಆದ್ಯತೆ ಎಂದು ಹೇಳಿದ್ದರು.

ಅದರಂತೆ ನೋಂದಾವಣೆ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ತಂದಿದ್ದಾರೆ. ತಾವು ಪ್ರಮಾಣ ವಚನ ಸ್ವೀಕರಿಸುವ ವೇಳೆ ನೀಡಿದ್ದ ಭರವಸೆಯಂತೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ. ನನ್ನ ಕೆಲಸವು ಕೇವಲ ಮಾತಿನಲ್ಲಿರುವುದಿಲ್ಲ, ನಾನು ಮಾಡಿದ ಕೆಲಸಗಳು ನನ್ನ ಬಗ್ಗೆ ಮಾತನಾಡುತ್ತದೆ" ಎಂದು ಹೇಳಿದ್ದರು.

ನ್ಯಾಯವು ಎಂದಿಗೂ ಸಾರ್ವಭೌಮ ಕಾರ್ಯವಲ್ಲ, ಅದು ನಾಗರಿಕರಿಗೆ ಒದಗಿಸಲಾದ ಅತ್ಯಗತ್ಯ ಸೇವೆಯಾಗಿದೆ.  ಅಧಿಕಾರ ವಹಿಸಿಕೊಂಡ ನಂತರ ಅವರು ಪರಿಚಯಿಸಿದ ನ್ಯಾಯಾಂಗ ಸುಧಾರಣೆಗಳು ಸಾಮಾನ್ಯ ಜನರಿಗೆ ನ್ಯಾಯದ ಪ್ರವೇಶವನ್ನು ಖಾತ್ರಿಪಡಿಸುವಲ್ಲಿ ಅವರ ಬದ್ಧತೆಯನ್ನು ತೋರಿಸಿದೆ.

ನಾಗರಿಕರು ಅನುಸರಿಸುವ ಮತ್ತು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ತಲುಪಲು, ಸಿಜೆಐ ಡಿವೈ ಚಂದ್ರಚೂಡ್ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ (ಎಸ್‌ಸಿ) 74 ನೇ ಗಣರಾಜ್ಯೋತ್ಸವದಂದು ಹದಿಮೂರು ಭಾರತೀಯ ಭಾಷೆಗಳಲ್ಲಿ ಭಾಷಾಂತರಿಸಿದ 1,000 ತೀರ್ಪುಗಳನ್ನು ಬಿಡುಗಡೆ ಮಾಡಿದೆ. ಅಸ್ಸಾಮಿ, ಗಾರೋ, ಹಿಂದಿ, ಕನ್ನಡ, ಖಾಸಿ, ಮಲಯಾಳಂ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಬಿಡುಗಡೆ ಮಾಡಿದೆ.

ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡುವ ಕೊಲಿಜಿಯಂನ ನಿರ್ಧಾರದಲ್ಲಿ ಪಾರದರ್ಶಕತೆಯನ್ನು ತರಲು, ಸುಪ್ರೀಂಕೋರ್ಟ್ ವೆಬ್‌ಸೈಟ್‌ನಲ್ಲಿ ವಿವರವಾದ ನಿರ್ಣಯಗಳನ್ನು ಅಪ್‌ಲೋಡ್ ಮಾಡಲು ಪ್ರಾರಂಭಿಸಿತು, ಇದರಿಂದ ಯಾರನ್ನು ಆಯ್ಕೆ ಮಾಡಲಾಗಿದೆ, ಏಕೆ ಮಾಡಲಾಗಿದೆ ಎಂಬುದರ ಬಗ್ಗೆ ಜನರು ತಿಳಿಯಬಹುದಾಗಿದೆ.

ಸಿಜೆಐ ಡಿವೈ ಚಂದ್ರಚೂಡ್ ಅವರು 'ಉಚಿತ ಪೋರ್ಟಲ್ ಅಥವಾ ಸರ್ಚ್ ಇಂಜಿನ್ ಪ್ರಾರಂಭಿಸಿದ್ದಾರೆ. ಇಎಸ್‌ಸಿಆರ್ (ಸುಪ್ರೀಂ ಕೋರ್ಟ್ ವರದಿಗಳು) ಸುಪ್ರೀಂ ಕೋರ್ಟ್ ಅಧಿಕೃತ ಪ್ರಕಟಣೆ ರಾಷ್ಟ್ರಕ್ಕೆ ಸಲ್ಲಿಸುವ ಗೌರವವಾಗಿದೆ. ತೀರ್ಪುಗಳ ಡೇಟಾಬೇಸ್ ಒದಗಿಸುವ ವಿವಿಧ ಪೋರ್ಟಲ್‌ಗಳ ಖಾಸಗಿ ಚಂದಾದಾರಿಕೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ಯುವ ವಕೀಲರ ಅಗತ್ಯತೆಗಳನ್ನು ಇದು ಪೂರೈಸುತ್ತದೆ.

1950 ರಿಂದ ಪ್ರಕಟವಾದ 34,055 ಕ್ಕೂ ಹೆಚ್ಚು ತೀರ್ಪುಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ. ಈ ವೇಳೆ, ನುಡಿಗಟ್ಟುಗಳು, ಎಲ್ಲಾ ಪದಗಳು, ಗೌರವಾನ್ವಿತ ನ್ಯಾಯಾಧೀಶರು ಅವರ ಹೆಸರು ಮುಂತಾದ ವಿವಿಧ ಡೇಟಾ ಆಧರಿಸಿ ತೀರ್ಪುಗಳನ್ನು ಹುಡುಕುವ ಸೌಲಭ್ಯವನ್ನು ಇದು ಒಳಗೊಂಡಿದೆ.

ಕೃತಕ ಬುದ್ಧಿಮತ್ತೆ (AI) ಮತ್ತು ಹೈಟೆಕ್ ಪರಿಕರಗಳನ್ನು ಬಳಸಿಕೊಳ್ಳುವ ಮೂಲಕ, ಕೋರ್ಟ್ ಆಫ್ ರೆಕಾರ್ಡ್ ಮಾಡಲು, "ನ್ಯಾಯಾಂಗ ಸಂಸ್ಥೆ" ಯ ಭಾಗವಾಗಿ ಅದರ ಹೊಣೆಗಾರಿಕೆಯನ್ನು ಹೆಚ್ಚಿಸಲು ಮತ್ತು ಕಾನೂನು ಕಾಲೇಜುಗಳ ವಕೀಲರು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಲೈವ್ ಪ್ರತಿಗಳನ್ನು ಪರಿಚಯಿಸಿದರು.

ಸುಪ್ರೀಂ ಕೋರ್ಟ್ ಮತ್ತು ಅದರ ಕಾರ್ಯಚಟುವಟಿಕೆಗಳ ಲೆಕ್ಕಪರಿಶೋಧನೆ ನಡೆಸುವುದು, ಸರ್ವೋಚ್ಚ ನ್ಯಾಯಾಲಯಕ್ಕೆ ಭೇಟಿ ನೀಡುವ ವಿಕಲಚೇತನರಿಗೆ ಪ್ರಶ್ನಾವಳಿಗಳನ್ನು ಬಿಡುಗಡೆ ಮಾಡುವುದು, ಅವರು ಎದುರಿಸುತ್ತಿರುವ ಸಮಸ್ಯೆಗಳ ಸ್ವರೂಪ ಮತ್ತು ವ್ಯಾಪ್ತಿಯನ್ನು ನಿರ್ಣಯಿಸುವುದು ಮತ್ತು ಫಲಿತಾಂಶಗಳನ್ನು ಒಳಗೊಂಡ ವರದಿಗಳನ್ನು ಸಿದ್ಧಪಡಿಸುವ ಕೆಲಸವನ್ನು ಸಮಿತಿಗೆ ವಹಿಸಲಾಗಿದೆ.

ಸಮಾಜದಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯ, ಕಾನೂನು ವೃತ್ತಿ ಮತ್ತು ಕಾನೂನು ಉಪನ್ಯಾಸದಲ್ಲಿ ಬಳಸುವ ಭಾಷೆಯ ವಿರುದ್ಧದ ತಾರತಮ್ಯವನ್ನು ಎತ್ತಿ ತೋರಿಸುವ ದೃಷ್ಟಿಯಿಂದ, ನ್ಯಾಯಾಧೀಶರು ತಮ್ಮ ತೀರ್ಪುಗಳಲ್ಲಿ ನಿರಾಕರಿಸಬೇಕಾದ ಪದಗಳು ಮತ್ತು ಪದಗಳ ಪಟ್ಟಿಯನ್ನು ಒಳಗೊಂಡಿರುವ ಕಾನೂನು ಪದಕೋಶವನ್ನು ರಚಿಸುವ ನಿರಂತರ ಪ್ರಯತ್ನವನ್ನು ಸಿಜೆಐ ಅನಾವರಣಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com