ತಲೆಮರೆಸಿಕೊಂಡಿರುವ ಖಲಿಸ್ಥಾನಿ ನಾಯಕ ಅಮೃತಪಾಲ್ ಸಿಂಗ್ ಆಪ್ತ ಪಾಪಲ್‌ಪ್ರೀತ್ ಸಿಂಗ್ ಬಂಧನ

ತೀವ್ರಗಾಮಿ ಅಮೃತಪಾಲ್ ಸಿಂಗ್ ಅವರ ಆಪ್ತ ಸಹಾಯಕ ಪಾಪಲ್‌ಪ್ರೀತ್ ಸಿಂಗ್ ಎಂಬಾತನನ್ನು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್ ಪೊಲೀಸರು
ಪಂಜಾಬ್ ಪೊಲೀಸರು

ಚಂಡೀಗಢ: ತೀವ್ರಗಾಮಿ ಅಮೃತಪಾಲ್ ಸಿಂಗ್ ಅವರ ಆಪ್ತ ಸಹಾಯಕ ಪಾಪಲ್‌ಪ್ರೀತ್ ಸಿಂಗ್ ಎಂಬಾತನನ್ನು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪಂಜಾಬ್ ಪೊಲೀಸರು ಮತ್ತು ಕೌಂಟರ್ ಇಂಟೆಲಿಜೆನ್ಸ್ ವಿಭಾಗವೂ ಕಾರ್ಯಾಚರಣೆ ನಡೆಸಿ ಪಾಪಾಲ್‌ಪ್ರೀತ್‌ ನನ್ನು ಬಂಧಿಸಿದ್ದಾರೆ. ಪಾಪಲ್‌ಪ್ರೀತ್ ಅಮೃತಪಾಲ್‌ನ ಮಾರ್ಗದರ್ಶಕ ಎಂದು ಪರಿಗಣಿಸಲಾಗಿದ್ದು ಇತ ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕದಲ್ಲಿ ಎಂದು ವರದಿಯಾಗಿದೆ. ಪಂಜಾಬ್ ಪೊಲೀಸರು ಖಲಿಸ್ತಾನ್ ಬೆಂಬಲಿಗರು ಮತ್ತು ಅವರ ಸಹಚರರ ವಿರುದ್ಧ ಕ್ರಮ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಮೃತಪಾಲ್ ಮತ್ತು ಪಾಪಲ್‌ಪ್ರೀತ್ ಮಾರ್ಚ್ 18ರಿಂದ ತಲೆಮರೆಸಿಕೊಂಡಿದ್ದರು.

ತೀವ್ರಗಾಮಿ ಅಮೃತಪಾಲ್ ಸಿಂಗ್ ಮಾರ್ಚ್ 18ರಂದು ಜಲಂಧರ್ ಜಿಲ್ಲೆಯಲ್ಲಿ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡು ಹಲವಾರು ವಾಹನಗಳನ್ನು ಬದಲಾಯಿಸಿ ಪರಾರಿಯಾಗಿದ್ದನು. ಇಬ್ಬರು ಮತ್ತು ಅವರ ಸಹಚರರ ವಿರುದ್ಧ ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸಲು, ಕೊಲೆಗೆ ಯತ್ನ, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. 

ಇಬ್ಬರೂ ಒಟ್ಟಿಗೆ ಹೋಶಿಯಾರ್‌ಪುರದಲ್ಲಿ ಕಾಣಿಸಿಕೊಂಡಿದ್ದರು
ತೀವ್ರಗಾಮಿ ಸಂಘಟನೆಯಾದ ವಾರಿಸ್ ಪಂಜಾಬ್ ಡಿ ಮತ್ತು ಅದರ ಬೆಂಬಲಿಗರಾದ ಅಮೃತಪಾಲ್ ಮತ್ತು ಪಾಪಲ್‌ಪ್ರೀತ್ ತಲೆಮರೆಸಿಕೊಂಡಿದ್ದರು. ಆ ನಂತರ ಮಾರ್ಚ್ 18ರಿಂದ ಇಬ್ಬರೂ ಪಂಜಾಬ್‌ನ ವಿವಿಧ ಸ್ಥಳಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಆದರೆ ಇಬ್ಬರೂ ಹೋಶಿಯಾರ್‌ಪುರದಲ್ಲಿ ಬೇರ್ಪಟ್ಟರು. ಆದರೆ, ಅಂದಿನಿಂದ ಪೊಲೀಸರು ಹೋಶಿಯಾರ್‌ಪುರ ಜಿಲ್ಲೆಯ ಗ್ರಾಮಗಳನ್ನು ಸುತ್ತುವರೆದಿದ್ದು ಮನೆ ಮನೆಗೆ ಹುಡುಕಾಟ ನಡೆಸಿದ್ದರು. ಅಮೃತಪಾಲ್ ಸಿಂಗ್ ಮತ್ತು ಪಾಪಲ್‌ಪ್ರೀತ್ ಸಿಂಗ್ ಅವರ ವೀಡಿಯೋ ಕೂಡ ಹೊರಬಿದ್ದಿದೆ, ಇದರಲ್ಲಿ ಅವರು ಪೇಟ ಮತ್ತು ಮುಖವಾಡಗಳಿಲ್ಲದೆ ದೆಹಲಿಯ ಬೀದಿಯಲ್ಲಿ ನಡೆಯುತ್ತಿರುವುದು ಕಂಡುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com