ಬಿ.ಎ ಅಂತಿಮ ವರ್ಷದ ಪರೀಕ್ಷೆ ಬರೆಯಲು 15 ವರ್ಷದ ತನಿಷ್ಕಾ ಸಜ್ಜು: ಸಿಜೆಐ ಆಗುವ ಕನಸು ಹೊತ್ತಿರುವ ಮಧ್ಯ ಪ್ರದೇಶದ ಬಾಲಕಿಗೆ ಪ್ರಧಾನಿ ಹೇಳಿದ್ದೇನು?

ಕೇಲವ 15ನೇ ವರ್ಷದಲ್ಲಿ ಮಧ್ಯ ಪ್ರದೇಶದ ಇಂದೋರ್ ಮೂಲದ ಬಾಲಕಿಯೊಬ್ಬಳು ಬಿ ಎ ಅಂತಿಮ ವರ್ಷದ ಪರೀಕ್ಷೆ ಬರೆಯಲು ಹೊರಟಿದ್ದಾಳೆ. ಮುಂದೆ ಕಾನೂನು ಪದವಿ ಗಳಿಸಿ ದೇಶದ ಮುಖ್ಯ ನ್ಯಾಯಮೂರ್ತಿಯಾಗಬೇಕೆಂಬ ಕನಸು ಹೊತ್ತಿದ್ದಾಳೆ.
ತಾಯಿ ಜೊತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ತನಿಷ್ಕಾ ಸುಜಿತ್
ತಾಯಿ ಜೊತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ತನಿಷ್ಕಾ ಸುಜಿತ್
Updated on

ಇಂದೋರ್: ಕೇಲವ 15ನೇ ವರ್ಷದಲ್ಲಿ ಮಧ್ಯ ಪ್ರದೇಶದ ಇಂದೋರ್ ಮೂಲದ ಬಾಲಕಿಯೊಬ್ಬಳು ಬಿ ಎ ಅಂತಿಮ ವರ್ಷದ ಪರೀಕ್ಷೆ ಬರೆಯಲು ಹೊರಟಿದ್ದಾಳೆ. ಮುಂದೆ ಕಾನೂನು ಪದವಿ ಗಳಿಸಿ ದೇಶದ ಮುಖ್ಯ ನ್ಯಾಯಮೂರ್ತಿಯಾಗಬೇಕೆಂಬ ಕನಸು ಹೊತ್ತಿದ್ದಾಳೆ.

ಈ ಹುಡುಗಿಯ ಹೆಸರು ತನಿಷ್ಕಾ ಸುಜಿತ್. 2020ರಲ್ಲಿ ಕೋವಿಡ್ ಸೋಂಕಿಗೆ ತಂದೆಯನ್ನು ಮತ್ತು ತಾತನನ್ನು ಕಳೆದುಕೊಂಡಿದ್ದಾಳೆ. ಈಕೆ ಕೆಲ ದಿನಗಳ ಹಿಂದೆ ಭೋಪಾಲ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಳು, ಆಗ ಪ್ರಧಾನ ಮಂತ್ರಿಗಳು ಆಕೆಯನ್ನು ಮಾತನಾಡಿಸಿ ಅವಳ ಕನಸಿನ ಬಗ್ಗೆ ಕೇಳಿ ಅದನ್ನು ನನಸು ಮಾಡಿಕೊಳ್ಳುವಂತೆ ಪ್ರೋತ್ಸಾಹದ ಮಾತುಗಳನ್ನಾಡಿದ್ದರು.

ಇಂದೋರ್ ನ ದೇವಿ ಅಹಿಲ್ಯ ವಿಶ್ವ ವಿದ್ಯಾಲಯ ವಿದ್ಯಾರ್ಥಿನಿಯಾಗಿರುವ ತನಿಷ್ಕಾ ಸುಜಿತ್ ಇದೇ ತಿಂಗಳು 19ರಿಂದ 28ರವರೆಗೆ ನಡೆಯಲಿರುವ ಬಿ ಎ ಮನಃಶಾಸ್ತ್ರ ಅಂತಿಮ ವರ್ಷದ ಪರೀಕ್ಷೆ ಬರೆಯುತ್ತೇನೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾಳೆ.

10ನೇ ತರಗತಿ ಪರೀಕ್ಷೆಯನ್ನು ಮೊದಲ ಸ್ಥಾನದಲ್ಲಿ ಮುಗಿಸಿ ನೇರವಾಗಿ 12ನೇ ತರಗತಿಗೆ ಬಂದು 12ನೇ ತರಗತಿ ಪರೀಕ್ಷೆಯನ್ನು 13ನೇ ವರ್ಷದಲ್ಲಿ ತನಿಷ್ಕಾ ಮುಗಿಸಿದ್ದಳು. ದೇವಿ ಅಹಲ್ಯಾ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥೆ ರೇಖಾ ಆಚಾರ್ಯ, ಸುಜಿತ್‌ಗೆ 13ನೇ ವಯಸ್ಸಿನಲ್ಲಿ ವಿಶ್ವವಿದ್ಯಾಲಯವು ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ನಂತರ ಬಿಎ (ಮನಃಶಾಸ್ತ್ರ) ಮೊದಲ ವರ್ಷಕ್ಕೆ ಪ್ರವೇಶ ನೀಡಲಾಯಿತು. ಇದೊಂದು ವಿಶೇಷ ಪ್ರಕರಣವಾಗಿದೆ.

ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನಕ್ಕಾಗಿ ಏಪ್ರಿಲ್ 1 ರಂದು ರಾಜ್ಯದ ರಾಜಧಾನಿ ಭೋಪಾಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುಜಿತ್ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾಳೆ. ಸುಮಾರು 15 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಬಾಲಕಿ ಹೇಳಿದ್ದು, ತಾನು ಬಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಅಮೆರಿಕದಲ್ಲಿ ಕಾನೂನು ಕಲಿಯಲು ಬಯಸುತ್ತೇನೆ ಮತ್ತು ಎಂದಾದರೂ ಭಾರತದ ಮುಖ್ಯ ನ್ಯಾಯಮೂರ್ತಿಯಾಗುವ ಕನಸಿದೆ ಎಂದು ಪ್ರಧಾನ ಮಂತ್ರಿಗಳ ಮುಂದೆ ಹೇಳಿಕೊಂಡಿದ್ದಾಳೆ. 

ನನ್ನ ಗುರಿಯ ಬಗ್ಗೆ ಕೇಳಿದ ಪ್ರಧಾನಿ, ಸುಪ್ರೀಂ ಕೋರ್ಟ್‌ಗೆ ಹೋಗಿ ಅಲ್ಲಿನ ವಕೀಲರ ವಾದಗಳನ್ನು ವೀಕ್ಷಿಸಲು ಸಲಹೆ ನೀಡಿದರು, ಅದು ನನ್ನ ಗುರಿಯನ್ನು ಸಾಧಿಸಲು ನನಗೆ ಪ್ರೇರೇಪಿಸುತ್ತದೆ. ಪ್ರಧಾನಿಯವರನ್ನು ಭೇಟಿಯಾಗುವುದು ನನ್ನ ಕನಸಾಗಿತ್ತು ಎನ್ನುತ್ತಾಳೆ.

ತಮ್ಮ ಪತಿ ಮತ್ತು ಮಾವ 2020 ರಲ್ಲಿ ಕೊರೋನಾ ವೈರಸ್‌ನಿಂದ ಮೃತಪಟ್ಟರು ಎಂದು ತನಿಷ್ಕಾ ತಾಯಿ ಅನುಭಾ ಹೇಳಿದರು, ಆದರೆ ಅವರು ತಮ್ಮ ಮಗಳ ಸಲುವಾಗಿ ದುಃಖವನ್ನು ಮರೆತು ಹಗಲಿರುಳು ದುಡಿಯುತ್ತಿದ್ದಾರೆ. 

ಇಬ್ಬರು ಕುಟುಂಬ ಸದಸ್ಯರನ್ನು ಕಳೆದುಕೊಂಡ ನಂತರ, ಏನು ಮಾಡುವುದೆಂದು ದಿಕ್ಕು ತೋಚದಾಯಿತು. ಎರಡು-ಮೂರು ತಿಂಗಳ ನಂತರ, ನನ್ನ ಮಗಳ ಭವಿಷ್ಯದ ಹಿತದೃಷ್ಟಿಯಿಂದ ಅವಳ ಅಧ್ಯಯನ ಕಡೆಗೆ ಗಮನ ನೀಡಬೇಕೆಂದು ಅನಿಸಿತು. ಅವಳ ಕನಸು ನನಸು ಮಾಡಲು ಮಗಳ ಉತ್ತಮ ಭವಿಷ್ಯಕ್ಕಾಗಿ ಕಷ್ಟಪಡುತ್ತಿದ್ದೇನೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com