ಕಮ್ಯುನಿಟಿ ಛತ್ರಿಯಿಂದ - ಡೋಲಿ ಆಂಬ್ಯುಲೆನ್ಸ್ ವರೆಗೆ: ಕಡಿಮೆ ಬಜೆಟ್ ನಲ್ಲಿ ಹೈದರಾಬಾದ್ ನವೋದ್ಯಮಿಯ ಹೊಸ ಆವಿಷ್ಕಾರಗಳು!

ವಿದ್ಯಾಭ್ಯಾಸ ಮುಂದುವರಿಸಲು ಹಲವು ಸವಾಲುಗಳನ್ನು ಎದುರಾದ ನಂತರ, ಮಹಬೂಬಾಬಾದ್ ಜಿಲ್ಲೆಯ ಕಂಬಾಲಪಲ್ಲಿ ಗ್ರಾಮದ ರೇಪಲ್ಲೆ ಷಣ್ಮುಖ ರಾವ್ ಹಲವು ಆವಿಷ್ಕಾರ ಮಾಡುವ ಮೂಲಕ ಜನಮಾನಸದಲ್ಲಿ ಪ್ರಸಿದ್ಧಿಯಾಗಿದ್ದಾರೆ.
ಡೋಲಿ ಅ್ಯಂಬುಲೆನ್ಸ್
ಡೋಲಿ ಅ್ಯಂಬುಲೆನ್ಸ್

ಹೈದರಾಬಾದ್: ವಿದ್ಯಾಭ್ಯಾಸ ಮುಂದುವರಿಸಲು ಹಲವು ಸವಾಲುಗಳನ್ನು ಎದುರಾದ ನಂತರ, ಮಹಬೂಬಾಬಾದ್ ಜಿಲ್ಲೆಯ ಕಂಬಾಲಪಲ್ಲಿ ಗ್ರಾಮದ ರೇಪಲ್ಲೆ ಷಣ್ಮುಖ ರಾವ್ ಹಲವು ಆವಿಷ್ಕಾರ ಮಾಡುವ ಮೂಲಕ ಜನಮಾನಸದಲ್ಲಿ ಪ್ರಸಿದ್ಧಿಯಾಗಿದ್ದಾರೆ.

10 ನೇ ತರಗತಿಯವರೆಗೆ ಮಾತ್ರ ಅಧ್ಯಯನ ಮಾಡಿರುವ, ಷಣ್ಮುಕ ತನ್ನ ಅದ್ಭುತ ಇಂಜಿನಿಯರಿಂಗ್ ಕೌಶಲ್ಯದಿಂದ, ಹಲವಾರು ಆವಿಷ್ಕಾರ ನಡೆಸಿದ್ದಾರೆ. ಅವರು ಕಡಿಮೆ ವೆಚ್ಚದಲ್ಲಿ ಗ್ರಾಮೀಣ ಸಮುದಾಯಗಳಿಗೆ ಅನುಕೂಲವಾಗುವಂತೆ  ಯಂತ್ರಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಕಮ್ಯುನಿಟಿ ಛತ್ರಿ, ಪವರ್ ವೀಡರ್, ಬ್ರಷ್ ಕಟ್ಟರ್, ಮಿತವ್ಯಯದ ಡಿಶ್‌ವಾಶರ್, ಹಸುವಿನ ಸಗಣಿ ಅಗರಬತ್ತಿಗಳು, ನೆರಳು ನೇಗಿಲು ಮತ್ತು ರಸ್ತೆ ಕ್ಲೀನರ್, ಅವರ ಹತ್ತಿರದ ಪ್ರದೇಶದ ಜನರ ಜೀವನವನ್ನು ಸುಧಾರಿಸಿದೆ.

ಅವರ ಇತ್ತೀಚಿನ ಆವಿಷ್ಕಾರ 'ಡೋಲಿ ಆಂಬ್ಯುಲೆನ್ಸ್' ಆಗಿದೆ, ರಸ್ತೆಗಳಿಲ್ಲದ ದೂರದ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಇಂತಹ ಗ್ರಾಮಗಳಲ್ಲಿ ಅಸ್ವಸ್ಥ ವ್ಯಕ್ತಿಯನ್ನು ಪಲ್ಲಕ್ಕಿಯ ಮೇಲೆ ಹೊತ್ತುಕೊಂಡು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಸಾಗಿಸುವುದು ಪ್ರಯಾಸದ ಕೆಲಸ. ಆದಾಗ್ಯೂ, ಷಣ್ಮುಖ ರಾವ್ ಅವರ ಪರಿಹಾರವು ಪಲ್ಲಕ್ಕಿಯು ಹಗುರವಾದ ಕಬ್ಬಿಣದ ಪೈಪ್ ಮತ್ತು ಬೈಸಿಕಲ್ ಚಕ್ರಗಳಿಗೆ ಜೋಡಿಸಲಾದ ಎರಡು ನೇರ ಪೈಪ್‌ಗಳೊಂದಿಗೆ ಬದಲಾಯಿಸುತ್ತದೆ. ಡೋಲಿ ಆಂಬ್ಯುಲೆನ್ಸ್‌ನ ಎತ್ತರವನ್ನು ಕ್ಯಾರಿಯರ್‌ಗಳ ಅನುಕೂಲಕ್ಕಾಗಿ ಎತ್ತರಿಸಬಹುದಾಗಿದೆ. ರೋಗಿಯನ್ನು ಡೋಲಿಯಲ್ಲಿ ಕೂರಿಸಲಾಗುತ್ತದೆ, ನಂತರ ಅದನ್ನು ಹೊರುವವರಿಗೆ ಹೊರೆಯಾಗದಂತೆ ಚಕ್ರಗಳಿಂದ ಚಲಿಸಲಾಗುತ್ತದೆ.

ನಾವು ಡೋಲಿ ಆಂಬ್ಯುಲೆನ್ಸ್‌ಗೆ ಛತ್ರಿಗಳು ಮತ್ತು ಹೆಡ್‌ಲೈಟ್‌ಗಳನ್ನು ಹಾಕಬಹುದು, ಇದರಿಂದ ರಾತ್ರಿ ಸಮಯದಲ್ಲಿ  ಹವಾಮಾನ ವೈಪರೀತ್ಯಗಳಲ್ಲಿ ಇದನ್ನು ಬಳಸಬಹುದು. ಪ್ರಯಾಣದ ಸಮಯದಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ರೋಗಿಗೆ ‘ಪ್ರಥಮ ಚಿಕಿತ್ಸಾ’ ಕಿಟ್ ನೀಡಲಾಗುತ್ತದೆ ಎಂದು ಅವರು ಹೇಳುತ್ತಾರೆ.

ಅವರ ಆವಿಷ್ಕಾರಗಳಿಂದ ಹೆಚ್ಚಿನ ಜನರು ಪ್ರಯೋಜನ ಪಡೆಯುವಂತೆ ಮಾಡಲು, ಷಣ್ಮುಖ ಅವರು ತಮ್ಮ ಆವಿಷ್ಕಾರಗಳನ್ನು ಇತರ ಬುಡಕಟ್ಟು ಹಳ್ಳಿಗಳಿಗೆ ಕೊಂಡೊಯ್ಯಲು ಸಹಾಯ ಮಾಡಲು ಕನಿಷ್ಠ ಮೂರು ಕಾರ್ಪೊರೇಟ್ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಷಣ್ಮುಖ ಅವರು ಪ್ರತಿಷ್ಠಿತ ‘ಬೆಸ್ಟ್ ಇನ್ನೋವೇಟರ್ ಪ್ರಶಸ್ತಿ’ಗೆ ಮೂರು ಬಾರಿ ಭಾಜನರಾಗಿದ್ದಾರೆ. ಐಐಟಿ ಹೈದರಾಬಾದ್‌ನಿಂದ ಸನ್ಮಾನಿಸಲ್ಪಟ್ಟ ರಾಜ್ಯದ ಏಕೈಕ 10ನೇ ಉತ್ತೀರ್ಣ ನವೋದ್ಯಮಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com