ದಲಿತ ಸಂತ್ರಸ್ತೆ ಮನೆಗೆ ಬೆಂಕಿ ಹಚ್ಚಿದ ಅತ್ಯಾಚಾರ ಆರೋಪಿ: ಎರಡು ಶಿಶುಗಳ ಜೀವನ್ಮರಣ ಹೋರಾಟ!
ಕಳೆದ ವರ್ಷ ಇಬ್ಬರು ಅತ್ಯಾಚಾರವೆಸಗಿದ್ದ ಅಪ್ರಾಪ್ತ ದಲಿತ ಬಾಲಕಿಯ ಮನೆಗೆ ಗುಂಪೊಂದು ಬೆಂಕಿ ಹಚ್ಚಿದ ಪರಿಣಾಮ ಇಬ್ಬರು ಶಿಶುಗಳ ಸ್ಥಿತಿ ಚಿಂತಾಜನಕವಾಗಿದೆ.
Published: 18th April 2023 09:55 PM | Last Updated: 18th April 2023 09:55 PM | A+A A-

ಸಂಗ್ರಹ ಚಿತ್ರ
ಉನ್ನಾವೋ: ಕಳೆದ ವರ್ಷ ಇಬ್ಬರು ಅತ್ಯಾಚಾರವೆಸಗಿದ್ದ ಅಪ್ರಾಪ್ತ ದಲಿತ ಬಾಲಕಿಯ ಮನೆಗೆ ಗುಂಪೊಂದು ಬೆಂಕಿ ಹಚ್ಚಿದ ಪರಿಣಾಮ ಇಬ್ಬರು ಶಿಶುಗಳ ಸ್ಥಿತಿ ಚಿಂತಾಜನಕವಾಗಿದೆ.
ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಗೊಂಡ ಇಬ್ಬರು ಅತ್ಯಾಚಾರ ಆರೋಪಿಗಳು, ಸಂತ್ರಸ್ತೆ ಪ್ರಕರಣವನ್ನು ಹಿಂಪಡೆಯಲು ನಿರಾಕರಿಸಿದ ನಂತರ ಸೋಮವಾರ ಸಂಜೆ ಇತರ ಐವರ ಜೊತೆ ಕುಟುಂಬದ ಹುಲ್ಲಿನ ಶೆಡ್‌ಗೆ ನುಗ್ಗಿದ್ದಾರೆ.
ಮುಖ್ಯ ವೈದ್ಯಕೀಯ ಅಧೀಕ್ಷಕ ಸುಶೀಲ್ ಶ್ರೀವಾಸ್ತವ ಅವರ ಪ್ರಕಾರ, ಘಟನೆಯಲ್ಲಿ ಅತ್ಯಾಚಾರ ಸಂತ್ರಸ್ತೆಯ ಗಂಡು ಶಿಶುವಿಗೆ ಶೇಕಡಾ 35 ರಷ್ಟು ಮತ್ತು ಆತನ ಸಹೋದರಿಗೆ ಶೇಕಡಾ 45 ರಷ್ಟು ಸುಟ್ಟ ಗಾಯಗಳಾಗಿವೆ. ಅವರ ಸ್ಥಿತಿ ಹದಗೆಟ್ಟಿದ್ದರಿಂದ, ಎರಡೂ ಮಕ್ಕಳನ್ನು ಉತ್ತಮ ಚಿಕಿತ್ಸೆಗಾಗಿ ಕಾನ್ಪುರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಅತ್ಯಾಚಾರ ಸಂತ್ರಸ್ತೆಯ ತಾಯಿ ನೀಡಿದ ದೂರಿನಿಂದಾಗಿ ಏಪ್ರಿಲ್ 13ರಂದು ಆರೋಪಿಗಳ ಪರ ನಿಂತಿದ್ದ ಆಕೆಯ ಅಜ್ಜ ಮತ್ತು ಚಿಕ್ಕಪ್ಪ ಮತ್ತು ಇತರ ನಾಲ್ಕು ಜನರು ಸಂತ್ರಸ್ತೆಯ ತಂದೆಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದರು. ತಂದೆಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೂರ್ವಾ ವೃತ್ತಾಧಿಕಾರಿ ಸಂತೋಷ್ ಸಿಂಗ್ ಹೇಳಿದ್ದಾರೆ.
2022ರ ಫೆಬ್ರವರಿ 13ರಂದು ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಅವಳು ಗಂಡು ಮಗುವಿಗೆ ಜನ್ಮ ನೀಡಿದಳು. ತನ್ನ ಮಗಳ ಅಪ್ರಾಪ್ತ ಮಗುವನ್ನು ಸಾಯಿಸಲು ಅವರು ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ.