'ಹೆಮ್ಮೆಯ ಕ್ಷಣ': ಚಾಂಗ್ಲಾಂಗ್ ಜಿಲ್ಲೆಗೆ ಸಾರ್ವಜನಿಕ ಆಡಳಿತದಲ್ಲಿ ಪ್ರಧಾನಮಂತ್ರಿ ಶ್ರೇಷ್ಠತೆ ಪ್ರಶಸ್ತಿ

ಭಾರತದ ಪೂರ್ವ ಅರುಣಾಚಲ ಪ್ರದೇಶದ ಚಾಂಗ್‌ಲಾಂಗ್ ಜಿಲ್ಲೆ ತನ್ನ ಉಪಕ್ರಮ, ಹೊಸ ಯುಗದ ಕಲಿಕೆ ಕೇಂದ್ರ(ಎನ್‌ಎಎಲ್‌ಸಿ)ಕ್ಕಾಗಿ "ನಾವೀನ್ಯತೆ" ವಿಭಾಗದಲ್ಲಿ ಶುಕ್ರವಾರ ಸಾರ್ವಜನಿಕ ಆಡಳಿತದಲ್ಲಿ  ಪ್ರಧಾನಮಂತ್ರಿ ಶ್ರೇಷ್ಠತೆ...
ಚಾಂಗ್ಲಾಂಗ್ ಜಿಲ್ಲೆಗೆ ಧಾನಮಂತ್ರಿ ಶ್ರೇಷ್ಠತೆ ಪ್ರಶಸ್ತಿ
ಚಾಂಗ್ಲಾಂಗ್ ಜಿಲ್ಲೆಗೆ ಧಾನಮಂತ್ರಿ ಶ್ರೇಷ್ಠತೆ ಪ್ರಶಸ್ತಿ
Updated on

ಗುವಾಹಟಿ: ಭಾರತದ ಪೂರ್ವ ಅರುಣಾಚಲ ಪ್ರದೇಶದ ಚಾಂಗ್‌ಲಾಂಗ್ ಜಿಲ್ಲೆ ತನ್ನ ಉಪಕ್ರಮ, ಹೊಸ ಯುಗದ ಕಲಿಕೆ ಕೇಂದ್ರ(ಎನ್‌ಎಎಲ್‌ಸಿ)ಕ್ಕಾಗಿ "ನಾವೀನ್ಯತೆ" ವಿಭಾಗದಲ್ಲಿ ಶುಕ್ರವಾರ ಸಾರ್ವಜನಿಕ ಆಡಳಿತದಲ್ಲಿ  ಪ್ರಧಾನಮಂತ್ರಿ ಶ್ರೇಷ್ಠತೆ ಪ್ರಶಸ್ತಿಯನ್ನು ಸ್ವೀಕರಿಸಿದೆ.

ಎನ್‌ಎಎಲ್‌ಸಿ ಎಲ್ಲಾ ವಯೋಮಾನದ ಜನ ತಮ್ಮ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಪ್ರತಿಯೊಂದು ಅಂಶವನ್ನು ಕಲಿಯಲು ಮತ್ತು ಸುಧಾರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದನ್ನು ಮಿಯಾವೊ ಉಪವಿಭಾಗದಲ್ಲಿ ಸ್ಥಾಪಿಸಲಾಗಿದ್ದು, ಅತ್ಯಾಧುನಿಕ, ಫ್ಯೂಚರಿಸ್ಟಿಕ್, ವಿರಾಮ ಕಲಿಕೆಯ ಸ್ಥಳ ಮತ್ತು ಲೈಬ್ರರಿಯಾಗಿದೆ. ಶೂನ್ಯ ಸದಸ್ಯತ್ವ ಶುಲ್ಕದಲ್ಲಿ ಯಾರು ಬೇಕಾದರೂ ಈ ಸೌಲಭ್ಯಗಳನ್ನು ಪಡೆಯಬಹುದು.

ಚಾಂಗ್ಲಾಂಗ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸನ್ನಿ ಕೆ ಸಿಂಗ್ ಅವರ ಮೆದುಳಿನ ಕೂಸು ಇದಾಗಿದ್ದು, ಈ ಉಪಕ್ರಮದ ಬಗ್ಗೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಮೊದಲು ವರದಿ ಮಾಡಿತ್ತು. ಈಗ ತಮ್ಮ ತಂಡದ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದು ಸನ್ನಿ ಸಿಂಗ್ ಹೇಳಿದ್ದಾರೆ.

"ಎನ್‌ಎಎಲ್‌ಸಿಯು ಟೀಮ್‌ವರ್ಕ್‌ನ ಪ್ರತಿಫಲವಾಗಿದೆ. ಕೇವಲ ಸರ್ಕಾರಿ ಅಧಿಕಾರಿಗಳು, ಎನ್‌ಜಿಒ ಮತ್ತು ಸಮುದಾಯದ ಸದಸ್ಯರು ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ" ಎಂದು ಸಿಂಗ್ ತಿಳಿಸಿದ್ದಾರೆ.

2021 ರಲ್ಲಿ, ಅವರು ಸಾರ್ವಜನಿಕ ಸೇವೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ರಾಜ್ಯ ಪ್ರಶಸ್ತಿ (ಚಿನ್ನದ ಪದಕ) ಪಡೆದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com