ಪೂಂಚ್ ನಲ್ಲಿ ಉಗ್ರರ ದಾಳಿ: ಹುತಾತ್ಮರಾದ ಪಂಜಾಬ್ ಯೋಧರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ-ಭಗವಂತ್ ಮಾನ್
ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಫೊಂಚ್ ಜಿಲ್ಲೆಯಲ್ಲಿ ನಿನ್ನೆ ಉಗ್ರರ ದಾಳಿಯಿಂದ ಹುತಾತ್ಮರಾದ ಐವರು ಯೋಧರ ಪಾರ್ಥಿವ ಶರೀರಕ್ಕೆ ಶುಕ್ರವಾರ ಸೇನಾ ಸಿಬ್ಬಂದಿ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು.
Published: 21st April 2023 08:17 PM | Last Updated: 22nd April 2023 02:48 PM | A+A A-

ಹುತಾತ್ಮರಾದ ಯೋಧರ ಪಾರ್ಥಿವ ಶರೀರಕ್ಕೆ ಪುಷ್ಪನಮನ
ರಜೌರಿ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಫೊಂಚ್ ಜಿಲ್ಲೆಯಲ್ಲಿ ನಿನ್ನೆ ಉಗ್ರರ ದಾಳಿಯಿಂದ ಹುತಾತ್ಮರಾದ ಐವರು ಯೋಧರ ಪಾರ್ಥಿವ ಶರೀರಕ್ಕೆ ಶುಕ್ರವಾರ ಸೇನಾ ಸಿಬ್ಬಂದಿ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು.
ಸೇನಾ ಹಿರಿಯ ಅಧಿಕಾರಿಗಳು ಮತ್ತು ನಾಗರಿಕ ಆಡಳಿತ ಸೇವೆಯ ಅಧಿಕಾರಿಗಳು ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಸೇನಾ ವಾಹನದಲ್ಲಿ ಬೆಂಕಿ, ಐವರು ಸೈನಿಕರು ಸಜೀವ ದಹನ- ವಿಡಿಯೋ
ಫೊಂಚ್ ಜಿಲ್ಲೆಯಲ್ಲಿ ಶಂಕಿತ ಎಲ್ ಇಟಿ ಉಗ್ರರಿಂದ ನಡೆದ ದಾಳಿಯಿಂದ ಸೇನಾ ವಾಹನದಲ್ಲಿ ಬೆಂಕಿ ಕಾಣಿಸಿಕೊಡು ಐವರು ಯೋಧರು ಹುತಾತ್ಮರಾದರೆ, ಓರ್ವರು ಗಂಭೀರವಾಗಿ ಗಾಯಗೊಂಡಿದ್ದರು.
ಈ ಮಧ್ಯೆ, ಹುತಾತ್ಮರಾದ ಪಂಜಾಬಿನ ನಾಲ್ವರು ಯೋಧರ ಕುಟುಂಬಗಳಿಗೆ ರೂ. 1 ಕೋಟಿ ಪರಿಹಾರವನ್ನು ಮುಖ್ಯಮಂತ್ರಿ ಭಗವಂತ್ ಮಾನ್ ಘೋಷಿಸಿದ್ದಾರೆ.