ತಮಿಳು ರಾಜ್ಯ ಗೀತೆಗೆ ಕರ್ನಾಟಕದಲ್ಲಿ ಅಗೌರವಛ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಕ್ಷಮೆಯಾಚನೆಗೆ ಡಿಎಂಕೆ ಸಂಸದೆ ಕನಿಮೋಳಿ ಆಗ್ರಹ

ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದ ವೇಳೆ ರಾಜ್ಯ ಗೀತೆ 'ತಮಿಳು ಥಾಯ್ ವಜ್ತು'ಗೆ 'ಅಗೌರವ' ತೋರಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ತಮಿಳುನಾಡು ಮುಖ್ಯಸ್ಥ ಕೆ ಅಣ್ಣಾಮಲೈ ಕ್ಷಮೆಯಾಚಿಸಬೇಕು ಎಂದು ಡಿಎಂಕೆ ಸಂಸದೆ ಕನಿಮೋಳಿ ಒತ್ತಾಯಿಸಿದ್ದಾರೆ.
ಕನಿಮೋಳಿ
ಕನಿಮೋಳಿ

ಚೆನ್ನೈ: ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದ ವೇಳೆ ರಾಜ್ಯ ಗೀತೆ 'ತಮಿಳು ಥಾಯ್ ವಜ್ತು'ಗೆ 'ಅಗೌರವ' ತೋರಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ತಮಿಳುನಾಡು ಮುಖ್ಯಸ್ಥ ಕೆ ಅಣ್ಣಾಮಲೈ ಕ್ಷಮೆಯಾಚಿಸಬೇಕು ಎಂದು ಡಿಎಂಕೆ ಸಂಸದೆ ಕನಿಮೋಳಿ ಒತ್ತಾಯಿಸಿದ್ದಾರೆ.

ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕನಿಮೋಳಿ, 'ತಮ್ಮದೇ ಪಕ್ಷದ ಸದಸ್ಯರು 'ತಮಿಳು ಥಾಯ್ ವಜ್ತು' ಅನ್ನು ಕೀಳಾಗಿ ಕಾಣುವುದನ್ನು ತಡೆಯಲು ಸಾಧ್ಯವಾಗದ ವ್ಯಕ್ತಿ ತಮಿಳುನಾಡಿನ ಜನರ ಬಗ್ಗೆ ಹೇಗೆ ಕಾಳಜಿ ವಹಿಸುತ್ತಾರೆ?' ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಅಣ್ಣಾಮಲೈ ಟ್ವೀಟ್‌ನಲ್ಲಿ ಅಂದಿನ ವಿರೋಧ ಪಕ್ಷದ ನಾಯಕ ಮತ್ತು ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಹಳೆಯ ನ್ಯೂಸ್ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಅದರಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ರಾಷ್ಟ್ರಗೀತೆಯನ್ನು ಹಾಡಲಿಲ್ಲ ಎಂದು ವರದಿಯಾಗಿದೆ.

ನಮ್ಮ ರಾಷ್ಟ್ರ ಧ್ವಜಾರೋಹಣ ಮಾಡಿದ ನಂತರ ರಾಷ್ಟ್ರಗೀತೆ ಹಾಡಬೇಕೆನ್ನುವುದನ್ನು ತಿಳಿಯದ ನಾಯಕನೊಂದಿಗೆ ಇದೆಲ್ಲಾ ಬೇಕಾ?. ತಮಿಳು ಥಾಯ್ ರಾಜ್ಯಗೀತೆಯಿಂದ ಕನ್ನಡಮುಂಗ್ ಕಲಿತೆಲುಂಗುಂ ಕವಿನ್ಮಲಯಾಳಮುಂ ತುಳುವುಂ ಎಂಬ ಸಾಲನ್ನು ತೆಗೆದು ರಾಜ್ಯ ವಿಭಜನೆಯನ್ನು ಬಿತ್ತಿದ ಇತಿಹಾಸ ನಿಮ್ಮದಲ್ಲವೇ? ಎಂದು ಅಣ್ಣಾಮಲೈ ಟ್ವೀಟ್‌ನಲ್ಲಿ ಹೇಳಿದ್ದಾರೆ. 

'ನಿಮ್ಮಿಂದ ಮತ್ತು ಡಿಎಂಕೆಯ ಕೆಟ್ಟ ರಾಜಕೀಯದಿಂದ ತಮಿಳು ಜನರನ್ನು ಉಳಿಸುವುದು ನಮ್ಮ ಏಕೈಕ ಧ್ಯೇಯವಾಗಿದೆ. ಚಿಂತಿಸಬೇಡಿ!' ಎಂದು ಹೇಳಿದ್ದಾರೆ.

ಈ ಘಟನೆಯ ವೈರಲ್ ವಿಡಿಯೋ ಪ್ರಕಾರ, ಕರ್ನಾಟಕದ ಶಿವಮೊಗ್ಗದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವೇದಿಕೆಯಲ್ಲಿ ನುಡಿಸಲಾದ ತಮಿಳುನಾಡು ರಾಜ್ಯ ಗೀತೆಯನ್ನು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು ಮಧ್ಯದಲ್ಲಿ ನಿಲ್ಲಿಸಿದರು ಮತ್ತು ಕರ್ನಾಟಕ ರಾಜ್ಯ ಗೀತೆಯನ್ನು ನುಡಿಸಲು ಕೇಳಿದರು.

ಈ ಘಟನೆ ಗುರುವಾರ ನಡೆದಿದ್ದು, ಬಿಜೆಪಿ ತಮಿಳುನಾಡು ಮುಖ್ಯಸ್ಥ ಮತ್ತು ಕರ್ನಾಟಕದ ಚುನಾವಣಾ ಉಸ್ತುವಾರಿ ಕೆ ಅಣ್ಣಾಮಲೈ ಅವರು ಭಾಗವಹಿಸಿದ್ದರು.

ಕರ್ನಾಟಕದ 224 ಸ್ಥಾನಗಳ ವಿಧಾನಸಭೆಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com